ಕರಾವಳಿ

ಕಾರ್ಕಳದ ಮೈದಾನದಲ್ಲಿ ಸುಳಿಗಾಳಿಯ ಅಬ್ಬರ: ವಿಡಿಯೋ ವೈರಲ್

Pinterest LinkedIn Tumblr

ಉಡುಪಿ: ಕಾರ್ಕಳ ನಗರದ ಗಾಂಧಿ ಮೈದಾನದಲ್ಲಿ ಆಕಾಶದೆತ್ತರಕ್ಕೆ ಸುಳಿಗಾಳಿ ಕಾಣಿಸಿಕೊಂಡಿತು. ಈ ಪ್ರಾಕೃತಿಕ ವಿದ್ಯಮಾನ ಕಂಡು ಗಾಂಧಿ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರು ಹಾಗೂ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು.

ಸುಳಿಯಾಕಾರದಲ್ಲಿ ಧೂಳು ಹಾಗೂ ಗಾಳಿ ಮುಗಿಲೆತ್ತರಕ್ಕೆ ಚಿಮ್ಮಿದ್ದು ಮೈದಾನದಲ್ಲಿದ್ದ ಕಸ, ಗಿಡಗಂಟಿಯನ್ನೆಲ್ಲ ಮೇಲಕೆತ್ತಿ ಬಿಸಾಡಿತು. ಕೆಲ ನಿಮಿಷಗಳ ಕಾಲ ಜನರು ಸುಳಿಗಾಳಿಯ ವೀಕ್ಷಿಸಿದರು. ಇದೀಗಾ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

Comments are closed.