ಕರಾವಳಿ

ಅರೆಸೇನಾ ಪಡೆ, ಕುಂದಾಪುರ ಉಪವಿಭಾಗದ ಪೊಲೀಸರಿಂದ ನಗರದಲ್ಲಿ ಪಥಸಂಚಲನ (Video)

Pinterest LinkedIn Tumblr

ಕುಂದಾಪುರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಿರಾತಂಕವಾಗಿ ಮತದಾನ ಮಾಡಲು ಜನರಲ್ಲಿ ಸ್ಥೈರ್ಯ ತುಂಬುವ ಸಲುವಾಗಿ ಕುಂದಾಪುರ ಪೊಲೀಸ್ ಉಪವಿಭಾಗದ ನೇತೃತ್ವದಲ್ಲಿ ಪಥಸಂಚಲನ ನಡೆಯಿತು.

ಸಿ.ಆರ್.ಪಿ.ಎಫ್ ಫೋರ್ಸ್‌ನ 75 ಮಂದಿ ಹಾಗೂ ಸಿ.ಐ.ಎಸ್.ಎಫ್ 91 ಮಂದಿ ಸಹಿತ ಉಪವಿಭಾಗ ವ್ಯಾಪ್ತಿಯ ವಿವಿಧ ಠಾಣೆ ಪೊಲೀಸರು ಸೇರಿ 250ಕ್ಕೂ ಅಧಿಕ ಮಂದಿ ಎ.21 ಶುಕ್ರವಾರ ಸಂಜೆ ನೆಹರು ಮೈದಾನದಿಂದ ಕುಂದಾಪುರ ಪೇಟೆಗಳಲ್ಲಿ ಪಥಸಂಚಲನ ನಡೆಸಿದರು.

ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ, ಪೊಲೀಸ್ ನಿರೀಕ್ಷಕ ನಂದಕುಮಾರ್, ಸಿ.ಆರ್.ಪಿ.ಎಫ್ ಇನ್ಸ್‌ಪೆಕ್ಟರ್ ನವೀನ್ ಬಾಬು, ಸಿ.ಐ.ಎಸ್.ಎಫ್ ಇನ್ಸ್‌ಪೆಕ್ಟರ್ ಆರ್.ಎಸ್ ಬೀಶ್ಟ್, ಕುಂದಾಪುರ ನಗರ ಠಾಣೆ ಪಿಎಸ್ಐ ಪ್ರಸಾದ್, ಟ್ರಾಫಿಕ್ ಠಾಣೆ ಪಿಎಸ್ಐ ನಾಸೀರ್ ಹುಸೇನ್, ಅಮಾಸೆಬೈಲು ಠಾಣೆ ಪಿಎಸ್ಐ ಸದಾಶಿವ ಗವರೋಜಿ, ಬೈಂದೂರು, ಗಂಗೊಳ್ಳಿ, ಶಂಕರನಾರಾಯಣ ಠಾಣೆ ಪಿಎಸ್ಐಗಳು, ಸಿಬ್ಬಂದಿ ಇದ್ದರು.

Comments are closed.