ಕರ್ನಾಟಕ

ಊಟದ ತಟ್ಟೆಗಳ ವಿಶೇಷತೆ ತಿಳಿಯಿರಿ……

Pinterest LinkedIn Tumblr

lunch_plate_spl

ಮಂಗಳೂರು: ಇತ್ತೀಚೇಗೆ ಜನರು ಪ್ಯಾಷನ್ ಗೆ ತಕ್ಕಂತೆ ತಟ್ಟೆಯನ್ನು ಖರೀದಿ ಮಾಡ್ತಿದ್ದಾರೆ. ಪ್ಲಾಸ್ಟಿಕ್ ಬಟ್ಟಲು ಮಾರುಕಟ್ಟೆಯನ್ನು ಆಳ್ತಾ ಇದೆ. ಸಾಕಷ್ಟು ಮಂದಿ ಅಲ್ಯುಮಿನಿಯಂ ತಟ್ಟೆಯನ್ನು ಊಟಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.ಈವೆರಡೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಜೊತೆಗೆ ಶಾಸ್ತ್ರಗಳಲ್ಲಿಯೂ ಇವುಗಳಿಗೆ ಮಹತ್ವವಿಲ್ಲ.

ಯಾವ ತಟ್ಟೆಯಲ್ಲಿ ಊಟ ಮಾಡಿದ್ರೆ ಆರೋಗ್ಯದ ಜೊತೆಗೆ ಸುಖ, ಸಂಪತ್ತು ಲಭಿಸಲಿದೆ ಎನ್ನುವುದನ್ನು ಶಾಸ್ತ್ರದಲ್ಲಿಯೇ ಹೇಳಲಾಗಿದೆ.

ಬೆಳ್ಳಿ-ಬಂಗಾರದ ತಟ್ಟೆ : ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುವುದು ತನು, ಮನ, ಧನಕ್ಕೆ ಬಹಳ ಒಳ್ಳೆಯದು.ಇದು ದೇಹದಲ್ಲಿರುವ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಬಂಗಾರದ ಬಟ್ಟಲಿನಲ್ಲಿ ಊಟ ಮಾಡುವವರು ಶಕ್ತಿ ಹಾಗೂ ಪರಾಕ್ರಮಿಯಾಗ್ತಾರೆ.

ಕಬ್ಬಿಣದ ತಟ್ಟೆ : ಕಬ್ಬಿಣದ ತಟ್ಟೆಯಲ್ಲಿ ಊಟ ಮಾಡುವುದರಿಂದ ದೇಹದಲ್ಲಿ ಕಬ್ಬಿಣಾಂಶ ಹೆಚ್ಚಾಗುತ್ತದೆ. ಹಿಮೋಗ್ಲೋಬಿನ್ ಮಟ್ಟ ಸ್ಥಿರವಾಗಿದ್ದು ಜೀರ್ಣಕ್ರಿಯೆ ಸರಿಯಾಗುತ್ತದೆ. ಆದ್ರೆ ಇದು ಆರೋಗ್ಯದ ದೃಷ್ಟಿಯಿಂದ ಮಾತ್ರ ಒಳ್ಳೆಯದು. ಇದನ್ನು ಶುಭ ಕಾರ್ಯಗಳಿಗೆ ಬಳಸುವುದಿಲ್ಲ.

ಕಂಚಿನ ಪಾತ್ರೆ : ಕಂಚಿನ ಪಾತ್ರೆಯಲ್ಲಿ ಊಟ ಮಾಡುವುದರಿಂದ ಅನೇಕ ರೋಗಗಳು ಗುಣಮುಖವಾಗುತ್ತವೆ. ಆದ್ರೆ ಹುಳಿಯಂಶವಿರುವ ಆಹಾರವನ್ನು ಇದರಲ್ಲಿ ಸೇವನೆ ಮಾಡಬಾರದು. ಹಾಗೆ ಇದರಲ್ಲಿ ವಿಷ್ಣುವಿಗೆ ಆಹಾರ ನೈವೇದ್ಯ ಮಾಡುವುದರಿಂದ ಸಂತೋಷ ಹೆಚ್ಚಾಗುತ್ತದೆ.

ತಾಮ್ರದ ಪಾತ್ರೆ : ಪೂಜೆಗಳಿಗೆ ಹೆಚ್ಚಾಗಿ ತಾಮ್ರದ ಪಾತ್ರೆಯನ್ನು ಬಳಸಲಾಗುತ್ತದೆ. ದೈವಿಕ ಶಕ್ತಿಗಳ ಕೃಪೆಗೆ ಪಾತ್ರವಾಗಬಹುದೆಂದು ನಂಬಲಾಗಿದೆ. ತಾಮ್ರದ ಪಾತ್ರೆಯಲ್ಲಿಟ್ಟ ನೀರು ಅಮೃತಕ್ಕೆ ಸಮಾನ. ಅದೆ ರೀತಿ ಹಾಲು ನಷ್ಟವನ್ನುಂಟು ಮಾಡುತ್ತದೆ.

ಮಣ್ಣಿನ ಪಾತ್ರೆ : ಮಣ್ಣಿನ ಮಡಿಕೆಯಲ್ಲಿ ಮಾಡಿದ ಆಹಾರ ಆರೋಗ್ಯಕ್ಕೆ ಒಳ್ಳೆಯದು. ನೀರು ಕುಡಿಯುವುದರಿಂದ ಅನೇಕ ಕಾಯಿಲೆಗಳು ಗುಣವಾಗುತ್ತವೆ.

ಬಾಳೆ ಎಲೆ : ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ತನು, ಮನ ಆರೋಗ್ಯವಾಗಿರುತ್ತದೆ. ಬಾಳೆ ಎಲೆಯಲ್ಲಿ ದೇವರಿಗೆ ಊಟ ಅರ್ಪಿಸುವುದರಿಂದ ದೇವತೆಗಳ ಕೃಪೆ ನಮ್ಮ ಮೇಲಿರುತ್ತದೆ.

Comments are closed.