ಕರ್ನಾಟಕ

ಅರಾಮದಾಯಕ ನಿದ್ದೆ ಮಾಡಲು ಒಂದು ಸುಲಭ ಟ್ರಿಕ್’

Pinterest LinkedIn Tumblr

ಮಂಗಳೂರು: ನಿದ್ದೆ ಎಂಬುದು ಪ್ರತಿ ಮನುಷ್ಯನಿಗೆ ಅತ್ಯಂತ ಅವಶ್ಯಕ. ನಿದ್ದೆ ಇಲ್ಲದ್ದಿದ್ದರೆ ನಮಗೆ ಅನೇಕ ತರಹದ ಅರೋಗ್ಯ ಸಮಸ್ಯೆಗಳು ಬರುತ್ತವೆ. ದಿನಕ್ಕೆ ಸರಿಹೊಂದುವಷ್ಟು ನಿದ್ದೆಮಾಡಿದರೆ, ನಾವು ಯಾವಾಗಲೂ ಆರೋಗ್ಯ ವಂತರಾಗಿರುತ್ತೆವೆ. ಆದರೆ ಈಗಿನ ಆಧುನಿಕ ಪ್ರಪಂಚದಲ್ಲಿ ಪ್ರತಿನಿತ್ಯ ಅನೇಕ ಸಂದರ್ಭಗಳಲ್ಲಿ ಒತ್ತಡಗಳಿಗೆ ಗುರಿಯಾಗುತ್ತಿದ್ದು ರಾತ್ರಿ ಹೊತ್ತು ನಿದ್ದೆಮಾಡಲು ಸಹ ಕಷ್ಟ ಪಡುವಂತಾಗಿದೆ. ನಿದ್ದೆ ಸರಿಯಾಗಿ ಬರದಿದ್ದರಿಂದ ಹೆಚ್ಚು ಸಮಯ ಎದ್ದಿರುವುದರಿಂದ ಯಾವಾಗಲೋ ಮಧ್ಯರಾತ್ರಿ ಮಲಗಿ, ಬೆಳಿಗ್ಗೆ ಸಮಯ ದಾಟಿದ ನಂತರ ಏಳುವುದು ಮಾಡುತ್ತಿದ್ದಾರೆ. ಇದರಿಂದ ಅನಾರೋಗ್ಯದ ಸಮಸ್ಯೆಗಳು ಕಾಡುತ್ತವೆ.

ಆದರೆ ಅಂತಹ ವ್ಯಕ್ತಿಗಳು ಈ ಕೆಳಗೆ ನೀಡಿರುವ ಒಂದು ಸಿಂಪಲ್ ಟ್ರಿಕ್ ಅನ್ನು ಮಾಡಿ ನೋಡಿ, ಆ ಟ್ರಿಕ್ ಏನೆಂಬುದನ್ನು ಈಗ ನೋಡೊಣ. ಮಲಗಿದ ಕೇವಲ ಒಂದು ನಿಮಿಷದಲ್ಲೆ ನಿದ್ದೆ ಬರಬೇಕೆಂದರೆ ಒಂದು ಟ್ರಿಕ್’ನ್ನು ಫಾಲೋ ಆಗಬೇಕು. ಆದರೆ ಅದಕ್ಕಾಗಿ ವ್ಯಾಯಾಮ ಮಾದುವುದೋ, ಟ್ಯಾಬ್ಲೆಟ್ಸ್ ನುಂಗುವುದೋ ಇತರೆ ಕೆಲಸಗಳನ್ನು ಮಾಡುವ ಅವಶ್ಯಕತೆ ಇಲ್ಲ. ಸಿಂಪಲಾಗಿ, ಉಸಿರನ್ನು ತೆಗೆದುಕೊಳ್ಳುವುದರ ಮೇಲೆ ನಿಯಂತ್ರಣವಿದ್ದರೆ ಸಾಕು. ಈ ಟ್ರಿಕ್’ನ್ನು ಯಾರಾದರು ಪ್ರಯತ್ನಿಸಬಹುದು. ಇದನ್ನು 4-7-8 ಬ್ರೀಥ್ ಟೆಕ್ನಿಕ್ ಎಂದು ಕರೆಯುತ್ತಾರೆ. ಹಾರ್ವರ್ಡ್ ಯುನಿವರ್ಸಿಟಿಯ ಪ್ರೋಫೆಸರ್, ಡಾಕ್ಟರ್ ಆಂಡ್ರೊವೆಯಿಲ್ ರವರು ಈ ಟ್ರಿಕ್ ಅನ್ನು ಕಂಡುಹಿಡಿದಿದ್ದಾರೆ.

ಚಿತ್ರದಲ್ಲಿ ತೋರಿಸಿದಂತೆ, ನಾಲಗೆಯನ್ನು ಬಾಯಿಯ ಮೇಲ್ಭಾಗಕ್ಕೆ ಟಚ್ ಆಗುವಂತಿರಿಸಬೇಕು. ಹಾಗೆ ಮಾಡಿದ-4 ಸೆಕೆಂಡ್’ಗಳು ಕೌಂಟ್ ಮಾಡಿಕೊಳ್ಳುತ್ತಾ, ಉಸಿರನ್ನು ಮೂಗಿನ ಮೂಲಕ ಒಳಗೆ ತೆಗೆದುಕೊಳ್ಳುವುದು, ಅನಂತರ 7 ಸೆಕೆಂಡ್ ಗಳು ಕೌಂಟ್ ಮಾಡುತ್ತಾ ಉಸಿರನ್ನು ಒಳಗೆ ಹಾಗೇ ಬಂಧಿಸಬೇಕು. ನಂತರ 8 ಸೆಕೆಂಡ್ ಗಳು ಕೌಂಟ್ ಮಾಡುತ್ತಾ ಉಸಿರನ್ನು ಪೂರ್ತಿಯಾಗಿ ಬಾಯಿಯ ಮೂಲಕ ದೊಡ್ಡದಾಗಿ ವಿಜಿಲ್ ಸೌಂಡ್ ತರ ಹೊರಗೆ ಗಾಳಿಯನ್ನು ಬಿಡಬೇಕು. ಹೀಗೆ ದಿನದಲ್ಲಿ 4 ಸಾರಿ ಮಾಡಬೇಕು. ಇದರಿಂದ ಕೆಲವು ದಿನಗಳಲ್ಲೇ ನೀವು ಬದಲಾವಣೆಯನ್ನು ಗಮನಿಸುತ್ತೀರಾ… ಮಲಗಿದ ತಕ್ಷಣವೇ ನಿದ್ದೆ ಹೋಗುತ್ತೀರ..

ಕೃಪೆ: app2tg

Comments are closed.