ಕರ್ನಾಟಕ

ರಕ್ತನಾಳದ ಕೊಬ್ಬನ್ನು ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿಯಂತೆ ನಿಮಗಿದು ಗೊತ್ತೆ ..?

Pinterest LinkedIn Tumblr

ಮಂಗಳೂರು: ದೇಹದ ಆರೋಗ್ಯಕ್ಕೆ ಪ್ರತಿಯೊಂದು ಅಂಶಗಳು ಹಿತಮಿತವಾಗಿರುವುದು ತುಂಬಾ ಮುಖ್ಯ. ದೇಹದಲ್ಲಿ ಯಾವುದೇ ಒಂದು ಅಂಶ ಹೆಚ್ಚಾದರೂ ಅದರಿಂದ ನಮಗೆ ಒಂದಲ್ಲ ಒಂದು ರೀತಿಯ ಸಮಸ್ಯೆ ತಪ್ಪಿದ್ದಲ್ಲ. ರಕ್ತದಲ್ಲಿರುವ ಕೆಟ್ಟ ಕೊಬ್ಬನ್ನು ಕೆಟ್ಟ ಕೊಲೆಸ್ಟ್ರಾಲ್ ಎಂದು ಕೂಡ ಕರೆಯಲಾಗುತ್ತದೆ. ಇದರ ರಕ್ತನಾಳಗಳ ಗೋಡೆಗಳಲ್ಲಿ ಅಂಟಿಕೊಂಡಿರುತ್ತದೆ.

ಇದರಿಂದ ರಕ್ತ ಸರಾಗವಾಗಿ ಸಾಗಲು ತುಂಬಾ ಕಷ್ಟವಾಗುತ್ತದೆ. ಈ ರೀತಿಯಾಗುವುದರಿಂದ ರಕ್ತನಾಳಗಳಿಗೆ ಅತಿಯಾದ ಒತ್ತಡ ಬೀಳುವುದು. ಇದು ರಕ್ತದೊತ್ತಡವನ್ನು ಹೆಚ್ಚಿಸಿ ಹೃದಯಾಘಾತವನ್ನು ಉಂಟು ಮಾಡುತ್ತದೆ. ಇಷ್ಟು ಮಾತ್ರವಲ್ಲದೆ ಹೃದಯ ಮತ್ತು ದೇಹದ ಇತರ ಕೆಲವೊಂದು ಭಾಗಗಳಿಗೂ ರಕ್ತ ಸಂಚಲನೆಯಾಗುವುದನ್ನು ಇದು ತಡೆಯುತ್ತದೆ.

ಇಂದಿನ ದಿನಗಳಲ್ಲಿ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚುವುದು ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಸಂಸ್ಕರಿತ ಮತ್ತು ಹೆಚ್ಚಿನ ಕೊಬ್ಬು ಇರುವಂತಹ ಆಹಾರದ ಸೇವನೆಯಿಂದಾಗಿ ಹೆಚ್ಚಿನ ಕೊಲೆಸ್ಟ್ರಾಲ್ ಇರುವ ರೋಗಿಗಳ ಚಿಕಿತ್ಸೆ ತುಂಬಾ ಕಷ್ಟವಾಗುತ್ತದೆ. ಜನರು ಈ ಜಂಕ್ ಫುಡ್ ಗಳಿಗೆ ದಾಸರಾಗಿರುವ ಕಾರಣ ಬೇಡದ ಕೊಲೆಸ್ಟ್ರಾಲ್ ಅನ್ನು ತಾವೇ ಆಹ್ವಾನಿಸುತ್ತಿದ್ದಾರೆ.

ಇದನ್ನು ಜೀವನಶೈಲಿಯ ರೋಗವೆನ್ನಬಹುದು. ಅತಿಯಾದ ಕೊಲೆಸ್ಟ್ರಾಲ್ ಗೆ ಮದ್ದು ಮಾಡುವ ಮೊದಲು ಕೆಲವೊಂದು ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಕೆಲವೊಂದು ವಿಧಾನಗಳಿವೆ. ಇದನ್ನು ಸರಿಯಾಗಿ ಪಾಲಿಸಿಕೊಂಡು ಹೋದರೆ ಆಗ ಒಳ್ಳೆಯ ಫಲಿತಾಂಶ ಪಡೆಯಬಹುದು. ನಿಮ್ಮ ರಕ್ತನಾಳಗಳಿಂದ ಕೊಲೆಸ್ಟ್ರಾಲ್ ಅನ್ನು ದೂರ ಮಾಡುವಂತಹ ಕೆಲವೊಂದು ಆಹಾರಗಳನ್ನು ಇಲ್ಲಿ ನೀಡಲಾಗಿದೆ

ದಿನದಲ್ಲಿ ಮೂರು ಬಾದಾಮಿ ತಿನ್ನಿ :
ಬಾದಾಮಿಯ ಸಿಪ್ಪೆಯಲ್ಲಿ ಒಳ್ಳೆಯ ಕೊಬ್ಬು ಘಟಿಸುವುದ(ಎಲ್ ಡಿಎಲ್) ನ್ನು ತಡೆಯುವಂತಹ ಅಂಶಗಳಿವೆ. ಇದರಿಂದ ರಕ್ತನಾಳಗಳು ಮತ್ತು ಹೃದಯವನ್ನು ಇದು ಕಾಪಾಡುತ್ತದೆ. ಒಳ್ಳೆಯ ಕೊಬ್ಬು ನಿಮ್ಮ ದೇಹದಲ್ಲಿರುವ ಹೆಚ್ಚುವರಿ ಕೊಲೆಸ್ಟ್ರಾಲ್ ನ್ನು ತೆಗೆಯುತ್ತದೆ. ಬೆಳಿಗ್ಗೆ ಬಾದಾಮಿ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಒಳ್ಳೆಯ ಕೊಬ್ಬು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವುದಿಲ್ಲ:
ಒಳ್ಳೆಯ ಕೊಬ್ಬು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಆಲಿವ್ ಆಯಿಲ್, ಅವಕಾಡೊ, ಮೀನು, ಅಗಸೆ ಬೀಜಗಳು ಮತ್ತು ಬೀಜಗಳು ಒಮೆಗಾ-3ರಂತಹ ಒಳ್ಳೆಯ ಕೊಬ್ಬನ್ನು ಹೊಂದಿದೆ. ಈ ಕೊಬ್ಬಿನ ಆಮ್ಲವು ರಕ್ತದಲ್ಲಿರುವ ಟ್ರೈಗಿಸರೈಡ್ ಕಡಿಮೆ ಮಾಡಿ ಕೊಲೆಸ್ಟ್ರಾಲ್ ಮಟ್ಟವನ್ನು ಕುಗ್ಗಿಸುತ್ತದೆ. ಒಳ್ಳೆಯ ಕೊಬ್ಬನ್ನು ಹೊಂದಿರುವ ಇಂತಹ ಆಹಾರಗಳನ್ನು ಸೇವಿಸಿ ಮತ್ತು ಕೆಟ್ಟ ಕೊಲೆಸ್ಟ್ರಾಲ್ ನ್ನು ಉಂಟು ಮಾಡುವ ಆಹಾರಗಳನ್ನು ದೂರ ಮಾಡಿ.

ಮೀನು ತಿನ್ನಿ :
ಸಾಲ್ಮನ್, ಟ್ಯೂನಾ ಮತ್ತು ಇತರ ಕೆಲವೊಂದು ಸಮುದ್ರದ ಆಹಾರಗಳು ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಒಮೆಗಾ-3ಯಿಂದ ಸಮೃದ್ಧವಾಗಿರುವಂತಹ ಸಾಲ್ಮನ್ ಮತ್ತು ಟ್ಯೂನಾದಂತಹ ಮೀನುಗಳು ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಇದರಿಂದ ವಾರದಲ್ಲಿ ಎರಡು ಅಥವಾ ಮೂರು ದಿನ ನಿಮ್ಮ ಆಹಾರದಲ್ಲಿ ಮೀನನ್ನು ಸೇರಿಸಿಕೊಳ್ಳಿ.

ನಾರಿನಾಂಶದಿಂದ ಸಮೃದ್ಧವಾಗಿರುವ ಆಹಾರಗಳು:
ಇದು ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಂತಹ ಅತ್ಯುತ್ತಮ ಆಹಾರ. ಹಣ್ಣುಗಳು ಮತ್ತು ತರಕಾರಿ(5ರಿಂದ 10 ಗ್ರಾಂ)ಗಳಲ್ಲಿ ಇರುವಂತಹ ಹೀರಿಕೊಳ್ಳುವಂತಹ ನಾರಿನಾಂಶವು ರಕ್ತದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಶೇ.5ರಷ್ಟು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಹೇಳಿವೆ. ನಿಮ್ಮ ಆಹಾರದಲ್ಲಿ ದಿನಕ್ಕೆ 5ರಿಂದ 10 ಗ್ರಾಂನಷ್ಟು ನಾರಿನಾಂಶವನ್ನು ಸೇರಿಸಿಕೊಳ್ಳಲು ದಿನಕ್ಕೊಂದು ತರಕಾರಿ ಅಥವಾ ಹಣ್ಣನ್ನು ತಿನ್ನಿ.

ಅವಕಾಡೊ:
ಇದು ಒಳ್ಳೆಯ ಕೊಬ್ಬನ್ನು ಹೆಚ್ಚಿಸಿ, ಕೆಟ್ಟ ಕೊಬ್ಬನ್ನು ಕಡಿಮೆ ಮಾಡುತ್ತದೆ. ಅದರಲ್ಲೂ ಅತಿಯಾದ ಕೊಲೆಸ್ಟ್ರಾಲ್ ಇರುವವರಿಗೆ ಇದು ತುಂಬಾ ಒಳ್ಳೆಯದು. ಒಳ್ಳೆಯ ಕೊಬ್ಬು ಸ್ವಚ್ಛಗೊಳಿಸುವ ಕೆಲಸ ಮಾಡುತ್ತದೆ ಮತ್ತು ರಕ್ತನಾಳಗಳಲ್ಲಿ ಇರುವಂತಹ ಕೆಟ್ಟ ಕೊಬ್ಬನ್ನು ತೆಗೆಯುತ್ತದೆ.

ಮಾಹಿತಿ : ಸಂಗ್ರಹ

Comments are closed.