ನಮಗೆ ಕಂಪ್ಯೂಟರ್ ಬಳಸುವುದು ಸಾಕಷ್ಟು ಹಿಂದಿನಿಂದ ಅಭ್ಯಾಸವಾಗಿದೆ… ಅದೇ ರೀತಿ ಫೋನ್ ಸಹ ನಾವು ಒಂದು ರೇಂಜ್‌ನಲ್ಲಿ ಬಳಸುತ್ತಿರುತ್ತೇವೆ. ತಂತ್ರಜ್ಞಾನ ಕಾಲದಲ್ಲಿ ಇವೆಲ್ಲಾ ಕಾಮನ್ ಅಲ್ಲವೇ. ಅದೇ ರೀತಿ ನಾವು ಚಿಕ್ಕವರಿದ್ದಾಗ calculations ಮಾಡಲು calculator ಬಳಸುತ್ತಿದ್ದೆವು ನೆನಪಿದೆಯಾ..? ಅಷ್ಟೇಕೆ ಇಂಜಿನಿಯರಿಂಗ್‌ನಲ್ಲೂ scientific calculator ಉಪಯೋಗಿಸುತ್ತಿದ್ದೆವು. ಈಗ ವಿಷಯ ಏನೆಂದರೆ..ಫೋನ್, ಕ್ಯಾಲ್ಕುಲೇಟರ್, ಕಂಪ್ಯೂಟರ್‌ನಲ್ಲಿರುವ ನಂಬರ್‌ಗಳನ್ನು ಒಮ್ಮೆ ಗಮನಿಸಿ.
ಫೋನ್‌ನಲ್ಲಿ ನಂಬರ್ಸ್ ಮೇಲಿನಿಂದ ಕೆಳಕ್ಕೆ ಇವೆ..ಆದರೆ ಕ್ಯಾಲ್ಕುಲೇಟರ್, ಕಂಪ್ಯೂಟರ್ ಕೀಬೋರ್ಡ್‌ನಲ್ಲಿ ಮಾತ್ರ ಕೆಳಗಿನಿಂದ ಮೇಲ್ಮುಖವಾಗಿ ಇವೆ..! ಹಾಗೇಕೆ ಇವೆ ಗೊತ್ತಾ..?
ನಿಮಗೆ ನಿಜವಾದ ಕಾರಣ ಗೊತ್ತಾಗಬೇಕಾದರೆ…ಕ್ಯಾಲ್ಕುಲೇಟರ್ ಬರುವುದಕ್ಕೂ ಮುನ್ನದ ಕಾಲಕ್ಕೆ ಹೋಗಬೇಕು. ಮೆಕ್ಯಾನಿಕಲ್ ಕ್ಯಾಶ್ ರಿಜಿಸ್ಟರ್‌ಗಳನ್ನು ಬಳಸುತ್ತಿದ್ದರು ಆ ದಿನಗಳಲ್ಲಿ. ಅದರಲ್ಲಿ 0 ಕೆಳಗೆ ಇದ್ದರೆ ಉಳಿದ ಅಂಕೆಗಳು 1, 2, 3…ಎಲ್ಲವೂ ಮೇಲಿರುತ್ತಿದ್ದವು. ಯಾಕೆಂದರೆ ಸೊನ್ನೆಯನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದರು. ಸುನಾಯಾಸವಾಗಿ ಉಪಯೋಗಿಸಲು ಹಾಗೆ ಡಿಸೈನ್ ಮಾಡಿದ್ದರೆ. ಬಳಿಕ ಮೆಕ್ಯಾನಿಕಲ್ ಕ್ಯಾಲ್ಕುಲೇಟರ್ ಮಾಡಿದಾಗಲೂ “0” ಕೆಳಗಿಟ್ಟು “9”ನ್ನು ಮೇಲಿಟ್ಟರು.
ಬಳಿಕ ಎಲೆಕ್ಟ್ರಾನಿಕ್ ಕ್ಯಾಲ್ಕುಲೇಟರ್ ಕಂಡುಹಿಡಿದರು. ಮೆಕ್ಯಾನಿಕಲ್ ಕ್ಯಾಲ್ಕುಲೇಟರ್ ಕಾನ್ಸೆಪ್ಟನ್ನೇ ಇದರಲ್ಲೂ ಫಾಲೋ ಆದರು. ಅದೇ ಫಾರ್ಮ್ಯಾಟನ್ನು ಈಗಲೂ ಬಳಸುತ್ತಿದ್ದಾರೆ.
ಇನ್ನು ಕ್ಯಾಲ್ಕುಲೇಟರ್ ತರಹವೇ ಫೋನನ್ನು ಯಾಕೆ ಫಾಲೋ ಆಗಲಿಲ್ಲ..? ಯಾಕೆ ಬದಲಾಯಿಸಿದರು..?
ಆರಂಭದಲ್ಲಿ ರೊಟೇಟಿಂಗ್ ಡಯಲ್ ಇರುವ ಫೋನ್ಸ್ ಇದ್ದವು ನೆನಪಿದೆಯಾ..? 1-9ವರೆಗೂ ಹೋಲ್ಸ್ ಇರುತ್ತಿದ್ದವು. ಬಳಿಕ 0 ಇರುತ್ತಿತ್ತು. ಯಾವ ನಂಬರ್ ಡಯಲ್ ಮಾಡಬೇಕೆಂದರೆ ಆ ನಂಬರ್ ಬಳಿ ಬೆರಳಿಂದ ಕೊನೆಯ ತನಕ ತಿರುಗಿಸಬೇಕು.
1960ರಲ್ಲಿ ಟೆಲಿಫೋನ್ ಕೀಪ್ಯಾಡ್ ಬದಲಾಯಿಸೋಣ ಎಂದುಕೊಂಡರು. ಹಾಗಾಗಿ ರೋಟೇಟಿಂಗ್ ತೆಗೆದು. ಪ್ರೆಸ್ ಮಾಡುವ ಬಟನ್ಸ್ ಪರಿಚಯಿಸಿದರು. ಸಾಕಷ್ಟು ಮಂದಿಯ ಅಭಿಪ್ರಾಯ ಸಂಗ್ರಹಿಸಿ ಕಡೆಗೆ ಮೇಲಿನಿಂದ ಕೆಳಕ್ಕಿದ್ದರೇನೇ ಮನುಷ್ಯರಿಗೆ ಇಷ್ಟವಾಗುತ್ತದೆ ಎಂದು ಗೊತ್ತಾಯಿತು. 3*3 ಪ್ಯಾಟ್ರನ್‌ನಲ್ಲಿ ಮೇಲಿನಿಂದ ಕೆಳಕ್ಕೆ ನಂಬರ್ಸ್ ಫೋನ್ ಕೀಪ್ಯಾಡ್ ಮಾಡಿದರು. ಈಗಲೂ ಅದನ್ನೇ ಫಾಲೋ ಮಾಡುತ್ತಿದ್ದಾರೆ!
Comments are closed.