ಕರಾವಳಿ

ಕಂಕುಳಲ್ಲಿನ ಕಪ್ಪು ಕಲೆ ನಿವಾರಣೆಗೆ ಮನೆಮದ್ದು.

Pinterest LinkedIn Tumblr

ಹುಡುಗ, ಹುಡುಗಿಯರ ಕಂಕುಳಲ್ಲಿ ಕಪ್ಪು ಕಲೆಗಳು ಇರಬಹುದು. ಈ ರೀತಿ ಇದ್ದಾಗ ಸ್ಲೀವ್ ಲೆಸ್ ಡ್ರೆಸ್ ಗಳನ್ನೂ ಧರಿಸಲು ಮುಜುಗರವಾಗುತ್ತದೆ. ಇದರಿಂದ ಅವರು ತಮ್ಮಗಿಷ್ಟ ಬಂದ ಬಟ್ಟೆಗಳನ್ನು ಧರಿಸಲು ಆಗುವುದಿಲ್ಲ. ಇದನ್ನು ಮನೆಮದ್ದಿನಿಂದ ನಿವಾರಿಸಬಹುದು.

ಪರಿಹಾರ ಹೇಗೆ..?:

ಟೊಮೇಟೊ ರಸ, ಹಸಿಹಾಲು, ಕಡಲೆಹಿಟ್ಟು ತೆಗೆದುಕೊಳ್ಳಿ. ಒಂದು ಕಪ್ ನಲ್ಲಿ ಒಂದು ಚಮಚ ಟೊಮೇಟೊ ರಸ, ಒಂದು ಚಮಚ ಹಸಿ ಹಾಲು ಹಾಗೂ ಎರಡು ಚಮಚ ಕಡಲೆಹಿಟ್ಟನ್ನ ತೆಗೆದುಕೊಂಡು ಮಿಕ್ಸ್ ಮಾಡಿ ಪ್ಯಾಕ್ ರೆಡಿ ಮಾಡಿ. ನಂತರ ಆ ಪ್ಯಾಕ್ ನ್ನು ಕಲೆಗಳ ಮೇಲೆ ಹಚ್ಚಿ 10 ನಿಮಿಷ ಬಿಟ್ಟು ತೊಳೆಯಿರಿ. ದಿನಕ್ಕೆ 2 ಬಾರಿ ಹೀಗೆ ಮಾಡಿ. ಇನ್ನು ರಾತ್ರಿ ಮಲಗುವ ಮುನ್ನ ಒಂದು ಬಟ್ಟಲಲ್ಲಿ 1 ಚಮಚ ರೋಸ್ ವಾಟರ್,1/2 ಚಮಚ ನಿಂಬೆ ರಸ ಸೇರಿಸಿ ಮಿಕ್ಸ್ ಮಾಡಿ ಅಂಡರ್ ಆರ್ಮ್ ಗೆ ಹಚ್ಚಿ ಮಲಗಿ. ಹೀಗೆ ಮಾಡಿದರೆ 2 ವಾರದಲ್ಲಿ ವ್ಯತ್ಯಾಸ ಕಾಣಬಹುದು.

Comments are closed.