ವಿಶಿಷ್ಟ

ನಿಮ್ಮ ಕೈಗೆ ಹಾಕುವ ಮೆಹಂದಿ ಕಡು ಕೆಂಪಾಗಲು ಹೀಗೆ ಮಾಡಿ….!

Pinterest LinkedIn Tumblr

ಮದುವೆ ಸಮಾರಂಭಗಳಲ್ಲಿ ಮೆಹಂದಿ ಹಾಕುವುದು ಎಂದರೆ ಹೆಣ್ಮಕ್ಕಳಿಗೆ ಸಂಭ್ರಮವೋ ಸಂಭ್ರಮ.ಅದರಲ್ಲೂ ಮದುಮಗಳ ಮೆಹಂದಿ ಹೈಲೈಟ್ಸ್‌ ಆಗಿರುತ್ತದೆ.

ಕೈಗೆ ಮೆಹಂದಿ ಹಚ್ಚಿದಾಗ ಅದು ಕಡು ಕೆಂಪಾದರೆ ಮಾತ್ರ ನೋಡಲು ಆಕರ್ಷಕ. ಮೆಹಂದಿ ಹಚ್ಚಿದಾಗ ಕಡು ಕೆಂಪು ಬಣ್ಣಕ್ಕೆ ಬರಲು ಈ ಟಿಪ್ಸ್ ಪಾಲಿಸಿದರೆ ಸಾಕು:

* ಮೆಹಂದಿ ಹಚ್ಚುವ ಮುನ್ನ ಕೈಗಳನ್ನು ಚೆನ್ನಾಗಿ ತೊಳೆಯಿರಿ.
* ರಾತ್ರಿ ಮಲಗುವ 2 ಗಂಟೆ ಮುಂಚೆ ಮೆಹಂದಿ ಹಚ್ಚಿ ಕೈಗಳನ್ನು ಅಲುಗಾಡಿಸದೆ ಮಲಗಿದರೆ ಮೆಹಂದಿ ಚೆನ್ನಾಗಿ ಹಿಡಿಯುತ್ತದೆ. ಹೀಗೆ ಮಾಡುವುದರಿಂದ ಮಲಗುವ ಮೊದಲೇ ಮೆಹಂದಿ ಒಣಗಿರುವುದರಿಂದ ಹಚ್ಚಿದ ವಿನ್ಯಾಸ ಹಾಳಾಗುವುದಿಲ್ಲ ಹಾಗೂ ರಾತ್ರಿಯಿಡೀ ಇರುವುದರಿಂದ ಬೆಳಗ್ಗೆ ಎದ್ದು ಕೈ ತೊಳೆಯುವಾಗ ಕಡು ಕೆಂಪಾಗಿರುತ್ತದೆ.

* ಮೆಹಂದಿ ಹಚ್ಚಿದ ಬಳಿಕ ಅರ್ಧ ಗಂಟೆಗೊಮ್ಮೆ ನಿಂಬೆ ಮತ್ತು ಸಕ್ಕರೆ ಮಿಕ್ಸ್ ಮಾಡಿದ ನೀರನ್ನು ಸಿಂಪಡಿಸಿ.

* ಮೆಹಂದಿಯನ್ನು ತೊಳೆದ ಬಳಿಕ ಕೈಗಳಿಗೆ ಕೊಬ್ಬರಿ ಎಣ್ಣೆ ಹಚ್ಚಿ. ಹೀಗೆ ಮಾಡುವುದರಿಂದ ಮೆಹಂದಿ ಆಕರ್ಷವಾಗಿ ಕಾಣುವುದು.

Comments are closed.