ಕರಾವಳಿ

ಬಾಳೆಹಣ್ಣು ತಿಂದರೆ ಜೀವಕ್ಕೆ ಅಪಾಯ…..ಯಾಕೆ, ಯಾರಿಗೆ ಗೋತ್ತೆ..?

Pinterest LinkedIn Tumblr

ಬಾಳೆಹಣ್ಣು… ನಮಗೆ ಸಿಗುವ ಎಲ್ಲಾ ಹಣ್ಣುಗಳಲ್ಲೇ ಅತ್ಯಂತ ಕಡಿಮೆ ಬೆಲೆಗೆ ಸಿಗುವ ಹಣ್ಣು.. ಅಷ್ಟೇ ಅಲ್ಲ ವರ್ಷ ಪೂರ್ತಿ ಸಿಗುವ ಹಣ್ಣು. ಕೆಲವು ಹಣ್ಣುಗಳು ಆಯಾ ಸೀಸನ್‌ನಲ್ಲಿ ಸಿಗುತ್ತವೆ ಆದರೆ ಬಾಳೆಹಣ್ಣು ಹಾಗಲ್ಲ ಪ್ರತಿದಿನ ನಮಗೆ ಲಭಿಸುತ್ತದೆ. ರುಚಿಯಲ್ಲೂ ಸಹ ಸೂಪರ್.. ತುಂಬಾ ಹಸಿವಾಗಿದ್ದಾಗ ಎರಡು ಬಾಳೆಹಣ್ಣು ತಿಂದರೆ ಸಾಕು ಶಕ್ತಿ ಸಿಗುತ್ತದೆ. ಅಷ್ಟೆಲ್ಲಾ ಶಕ್ತಿಶಾಲಿಯಾದ ಹಣ್ಣು ಸಹ ಕೆಲವು ಸಹ ನಮ್ಮ ಆರೋಗ್ಯಕ್ಕೆ ಮಾರಕ ಎಂಬುದು ಗೊತ್ತಾ.. ಬಾಳೆಹಣ್ಣಿನಿಂದಾಗು ಲಾಭನಷ್ಟಗಳೇನು ಎಂಬುದನ್ನು ತಿಳಿದುಕೊಳ್ಳಿ..

ಯಾರು ತಿನ್ನಬಾರದು….
ಸ್ಥೂಲಕಾಯ, ಅಧಿಕ ತೂಕ ಇರುವ ವ್ಯಕ್ತಿಗಳು ಅಧಿಕ ಕಾರ್ಬೊಹೈಡ್ರೇಟ್, ಕ್ಯಾಲರಿಗಳು ಮತ್ತು ಸಕ್ಕರೆಯುಳ್ಳ ಮಿಶ್ರಣಗಳನ್ನು ತೆಗೆದುಕೊಳ್ಳುವುದರಿಂದ ಕೊಬ್ಬನ್ನು ಹೆಚ್ಚಿಸುತ್ತವೆ ಮತ್ತು ನಿಮ್ಮ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತವೆ. ಹಾಗಾಗಿ ಅಂತಹವರು ಬಾಳೆಹಣ್ಣು ತಿನ್ನದಿರುವುದು ಉತ್ತಮ.
ಬಾಳೆಹಣ್ಣಿನಲ್ಲಿ ಪೊಟ್ಯಾಷಿಯಂ ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣ ಹೃದಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆತಂಕಕ್ಕೂ ಕಾರಣವಾಗುತ್ತದೆ.
ಬಾಳೆಹಣ್ಣಿನಲ್ಲಿ ಥೈಮಿನ್ ನಿಮ್ಮ ತಲೆನೋವನ್ನು ಹೆಚ್ಚಿಸುತ್ತದೆ. ನರಗಳಿಗೆ ಸಂಬಂಧಿಸಿದ ನಷ್ಟವನ್ನುಂಟು ಮಾಡುತ್ತದೆ.
ಶರ್ಕರಪಿಷ್ಟಗಳನ್ನು ಮತ್ತು ಸಕ್ಕರೆ ಪ್ರಮಾಣವನ್ನು ಹೆಚ್ಚಿಸುವ ಕಾರಣ ಇದು ಅಸಮತೋಲನಕ್ಕೆ ದಾರಿ ಮಾಡುತ್ತದೆ. ಬಹಳಷ್ಟು ಮಂದಿಯಲ್ಲಿ ಈ ಪ್ರಭಾವದಿಂದ ಊತ ಅಥವಾ ಅಲರ್ಜಿ ಲಕ್ಷಣಗಳು ಕಾಣಿಸುತ್ತವೆ.
ಪೊಟ್ಯಾಷಿಯಂ ಕಾರಣದಿಂದ ಮೂತ್ರಕೋಶಗಳ ಸಮಸ್ಯೆ ಬರುವ ಅವಕಾಶ ಇದೆ..
ಇದನ್ನು ಚಿಕ್ಕಮಕ್ಕಳಿಗೆ ಹಾಲು, ಜೇನಿನ ಜತೆ ನೀಡುತ್ತಿದ್ದರೆ ತೂಕ ಹೆಚ್ಚುತ್ತಾರೆ. ಆಟ ಆಡುವವರು, ವ್ಯಾಯಾಮಗಳನ್ನು ಮಾಡುವವರು ಇದನ್ನು ತೆಗೆದುಕೊಂಡರೆ ಶೀಘ್ರ ಸುಸ್ತಾಗದಂತೆ ಇರುತ್ತಾರೆ. ಅಷ್ಟೇ ಹೊರತು ಎಲ್ಲರೂ ಬಾಳೆಹಣ್ಣು ಹೆಚ್ಚಾಗಿ ತೆಗೆದುಕೊಂಡರೆ ಸ್ಥೂಲಕಾಯ ಸಮಸ್ಯೆ ಬರುವ ಸಾಧ್ಯತೆಗಳಿವೆ.

ಯಾರು ತಿಂದರೆ ಏನೇಲ್ಲಾ ಲಾಭ..
ಬಾಳೆಹಣ್ಣಿನಲ್ಲಿ ವಿಟಮಿನ್ ‘A’, ‘D’, ಫಾಸ್ಪರಸ್, ಪೊಟ್ಯಾಷಿಯಂ, ಮೆಗ್ನಿಷಿಯಂ, ಹೇರಳವಾಗಿ ಇರುತ್ತದೆ. ವಿಟಮಿನ್ ‘C’ ಸಹ ಇರುತ್ತದೆ. ಹಾಗಾಗಿ ಇದು ರೋಗನಿರೋಧಕವಾಗಿ ಕೆಲಸ ಮಾಡುತ್ತದೆ.
ಗರ್ಭಿಣಿಯರಿಗೆ ಆಗಾಗ ವಾಂತಿ ಆಗುತ್ತಿದ್ದರೆ ಹಸಿವಾದಾಗ ಬಾಳೆಹಣ್ಣು ಕೊಡುವ ಮೂಲಕ ಶಕ್ತಿಯ ಜೊತೆಗೆ ಫೋಲಿಕ್ ಆಸಿಡ್ ಸಹ ಸಿಗುತ್ತದೆ.
ನಿದ್ರಾಹೀನತೆಯಿಂದ ನರಳುವವರಿಗೆ ಹಾಲಿನ ಜತೆಗೆ ಬಾಳೆಹಣ್ಣು ರಾತ್ರಿ ತೆಗೆದುಕೊಂಡರೆ ನಿದ್ದೆ ಚೆನ್ನಾಗಿ ಬರುತ್ತದೆ.
25 ಗ್ರಾಮ್ ಅತಿಮಧುರವನ್ನು ಬಾಳೆಹಣ್ಣಿನ ಜತೆಗೆ ತೆಗೆದುಕೊಂಡರೆ ಬಾಯಿಹುಣ್ಣು ಕಡಿಮೆಯಾಗುತ್ತದೆ.
ನೆಗಡಿ, ಕೆಮ್ಮು ಇದ್ದಾಗ 10 ಗ್ರಾಮ್‌ಗಳ ಬಾಳೆಹಣ್ಣನ್ನು ಎರಡು ಅಥವಾ ಮೂರು ಚಿಟಿಕೆಗಳ ಮೆಣಸಿನ ಪುಡಿಯನ್ನು ಬೆರೆಸಿದ ಉಗುರುಬೆಚ್ಚಗಿನ ಹಾಲು ಕೆಮ್ಮನ್ನು ಕಮ್ಮಿ ಮಾಡುತ್ತದೆ. ಆದರೆ ಚೆನ್ನಾಗಿ ಕಳಿತ ಬಾಳೆಹಣ್ಣಲ್ಲದೆ ಅರ್ಧ ಹಣ್ಣಾದ ಬಾಳೆಹಣ್ಣು ತೆಗೆದುಕೊಳ್ಳುವುದು ಉತ್ತಮ.

Comments are closed.