ಕರಾವಳಿ

ಉದುರಿಹೋದ ಕೂದಲು ಮತ್ತೆ ಹುಟ್ಟಿ ಬೆಳೆಯಲು ಈ ರಸ

Pinterest LinkedIn Tumblr

ಈರುಳ್ಳಿಯ ಹೆಸರು ಕೇಳದವರು ಯಾರಿದ್ದಾರೆ ಹೇಳಿ. ಇದನ್ನು ಅಡುಗೆಯಲ್ಲಿ ತಪ್ಪದೇ ಉಪಯೋಗಿಸುತ್ತೇವೆ. ಕೇವಲ ಅಡುಗೆಯಲ್ಲೇ ಅಲ್ಲ…ಈರುಳ್ಳಿ ಔಷದವಾಗಿಯೂ ಕೆಲಸ ಮಾಡುತ್ತದೆ. ಈರುಳ್ಳಿ ಉಪಯೋಗಿಸುವುದರಿಂದ ನಮಗೆ ಹಲವು ಲಾಭಗಳಾಗುತ್ತವೆ. ಇಂದಿನ ದಿನಗಳಲ್ಲಿ ಬಹಳಷ್ಟು ಜನ ತಮ್ಮ ಆರೋಗ್ಯದ ಹಾಗು ಸೌಂದರ್ಯದ ಬಗ್ಗೆ ಕಾಳಜಿವಹಿಸುತ್ತಾರೆ. ಇದಕ್ಕಾಗಿ ವಿವಿಧ ರೀತಿಯ ಸೌಂದರ್ಯ ಸಾಧನಗಳ ಮೊರೆ ಹೋಗುತ್ತಾರೆ.

ಹೆಣ್ಣಾಗಲಿ, ಗಂಡಾಗಲಿ ಅವರ ಕೂದಲು ಸೊಂಪಾಗಿ,ಕಪ್ಪಾಗಿದ್ದರೆ ಆಕರ್ಷಕವಾಗಿ ಕಾಣುತ್ತಾರೆ. ನೀರುಳ್ಳಿ ರಸವನ್ನು ಕೊಬ್ಬರಿ ಎಣ್ಣೆ ಅಥವಾ ಇತರೆ ಯಾವುದೇ ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚುತ್ತಿದ್ದಲ್ಲಿ ಕೂದಲಿನ ಬೇರುಗಳು ಗಟ್ಟಿಯಾಗಿ, ಸೊಂಪಾದ ಕೂದಲು ಬೆಳೆಯುತ್ತವೆ.

ನೀರುಳ್ಳಿಯಲ್ಲಿರುವ ಗಂಧಕಾಂಶ ಕೂದಲು ಬೆಳೆಯಲು ಸಹಕರಿಸುತ್ತದೆ.ನೀರುಳ್ಳಿಯನ್ನು ನುಣ್ಣಗೆ ರುಬ್ಬಿಕೊಂಡು, ಕೂದಲಿನ ಬುಡಕ್ಕೆ ಹಚ್ಚುತ್ತಾ ಬಂದಲ್ಲಿ…ಉದುರಿಹೋದ ಜಾಗದಲ್ಲಿ ಮತ್ತೆ ಕೂದಲು ಬೆಳೆಯುತ್ತವೆ. ಅಷ್ಟೇ ಅಲ್ಲದೆ ಕೂದಲು ಗಟ್ಟಿಯಾಗಿ, ಕಾಂತಿಯುತವಾಗಿರುತ್ತವೆ.

ನೀರುಳ್ಳಿರಸ, ಜೇನು, ನಿಂಬೆ ಹಣ್ಣಿನ ರಸ ಈ ಮೂರನ್ನು ಚೆನ್ನಾಗಿ ಮಿಶ್ರಣಮಾಡಿ ,ಕೂದಲಿನ ಬುಡಕ್ಕೆ ಹಚ್ಚಿ, 30 ನಿಮಿಷಗಳ ನಂತರ ಸ್ನಾನ ಮಾಡಿದಲ್ಲಿ…ತಲೆಯಲ್ಲಿ ಹೊಟ್ಟು ಮಾಯವಾಗುತ್ತದೆ.

Comments are closed.