ಕರಾವಳಿ

ನೈಸರ್ಗಿಕವಾಗಿ ಕತ್ತು ನೋವನ್ನು ಕಡಿಮೆ ಮಾಡಿಕೊಳ್ಳುವ ಮನೆಮದ್ದು

Pinterest LinkedIn Tumblr

ಇತ್ತೀಚಿನ ಯುಗ ತಂತ್ರಜ್ಞಾನ ಯುಗ . ತಂತ್ರಜ್ಞಾನ ಇಲ್ಲದೆ ಕೆಲಸಗಳು ಆಗುವುದಿಲ್ಲ. ಜೊತೆಗೆ ಮನುಷ್ಯ ಕೆಲಸಗಳಿಗಿಂತ ತಂತ್ರಜ್ಞಾನಗಳ ಕೆಲಸವೇ ಹೆಚ್ಚು ಹಾಗೂ ವೇಗ.  ಚಿಕ್ಕ ಮಕ್ಕಳನ್ನು ನೋಡಿದರು ಮೊಬೈಲ್. ಕಂಪ್ಯೂಟರ್. ಎಂದು ಮುಗಿಬಿಳುತ್ತಾರೆ. ಇವುಗಳ ಬಳಕೆಯಿಂದ ಕೆಲಸ ಕಾರ್ಯಗಳು ತುಂಬಾ ವೇಗವಾಗಿ ಸಾಗುತ್ತವೆ. ಆದರೆ ಅಷ್ಟೇ ವೇಗವಾಗಿ ಆರೋಗ್ಯದ ಸಮಸ್ಯೆ ಕೂಡ ಉದ್ಭವಿಸುತ್ತವೆ.

ಇವುಗಳನ್ನು ನೋಡುತ್ತಾ ಹೆಚ್ಚು ಇವುಗಳ ಮುಂದೆ ಕುಳಿತು ಕೆಲಸ ಮಾಡುವುದರಿಂದ ಕಣ್ಣಿನ ದೃಷ್ಟಿಗೆ ತೊಂದರೆಯಾಗುತ್ತದೆ. ಬೆನ್ನು ನೋವು. ಸೊಂಟ ನೋವು. ತಲೆನೋವು ಬರುತ್ತವೆ ಅಗೆಯೇ ಕತ್ತು ನೋವು ಸಹ ನಮ್ಮನ್ನು ಕಾಡುತ್ತದೆ.

ನಮ್ಮ ಕುತ್ತಿಗೆಯು ಮೇಲೆ ಕೆಳಗೆ, ಅತ್ತ ಇತ್ತ ಸುಲಭವಾಗಿ ಚಲಿಸುತ್ತದೆ. ಆದರೆ ಅದು ಸೆಳೆತ ಮತ್ತು ಒತ್ತಡಕ್ಕೂ ಪಕ್ಕಾಗುತ್ತದೆ. ಅದಕ್ಕೆ ನಮ್ಮ ಬೆನ್ನುಮೂಳೆಯಲ್ಲಿಯ ಏಳು ಕಶೇರುಕಗಳು ದೃಢತೆಯನ್ನು ನೀಡುತ್ತವೆ. ಈ ಕಶೇರುಕಗಳ ನಡುವೆ ಇರುವ ನಾರಿನಂತಹ ಮೃದ್ವಸ್ಥಿಗಳು ಶಾಕ್ ಅಬ್ಸಾರ್ಬರ್‌ನಂತೆ ಕೆಲಸ ಮಾಡುತ್ತವೆ.

ಕುತ್ತಿಗೆಯ ಮೂಲಕ ಹಲವಾರು ನರಗಳು ಹಾದು ಹೋಗುತ್ತವೆ. ಸ್ನಾಯುಗಳು ಸಂಕುಚಿತಗೊಂಡು ಮತ್ತೆ ವಿಕಸನಗೊಳ್ಳದಿದ್ದಾಗ ನಮ್ಮ ಕುತ್ತಿಗೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕುತ್ತಿಗೆಯನ್ನು ಅನನುಕೂಲಕರ ಸ್ಥಿತಿಯಲ್ಲಿ ಬಳಸುವುದು ಅಥವಾ ಸುದೀರ್ಘ ಸಮಯದವರೆಗೆ ಅದು ಒಂದೇ ಸ್ಥಿತಿಯಲ್ಲಿರುವುದು ಇದಕ್ಕೆ ಕಾರಣವಾಗಿದೆ.

ದಿಂಬಿನ ತೊಂದರೆಯೂ ಕುತ್ತಿಗೆ ನೋವನ್ನು ತರುತ್ತದೆ. ಪ್ರಯಾಣಿಸುವಾಗ ಅನಿರೀಕ್ಷಿತ ಜರ್ಕ್ ಅಥವಾ ಹೊಂಡಗುಂಡಿಗಳಿಂದ ಕೂಡಿದ ರಸ್ತೆಯೂ ಕುತ್ತಿಗೆ ನೋವನ್ನು ತರುತ್ತದೆ.ಹೆಚ್ಚು ಒತ್ತು ಒಂದೇ ಕಡೆ ಕತ್ತು ತಿರುಗಿಸಿ ನಿಂತಗಲು ಕಟ್ಟುನೋವು ಬರುತ್ತದೆ. ಕುತ್ತಿಗೆ ನೋವನ್ನು ನಿರ್ಲಕ್ಷಿಸುವಂತಿಲ್ಲ, ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ತಕ್ಷಣ ಪಡೆಯುವುದು ಅಗತ್ಯವಾಗಿದೆ.

ಕುತ್ತಿಗೆ ನೋವಿಗಾಗಿಯೇ ಹಲವಾರು ಮುಲಾಮುಗಳು ಮತ್ತು ಮಾತ್ರೆಗಳಿವೆ. ಆದರೆ ಇವುಗಳು ಕ್ಷಣಕ್ಕೆ ಮಾತ್ರ ಮತ್ತೆ ಅದೇ ನೋವು ನಮ್ಮನ್ನು ಕಾಡುತ್ತದೆ. ಹಾಗಾಗಿ ನೈಸರ್ಗಿಕವಾಗಿ ಕತ್ತು ನೋವು ಕಡಿಮೆಮಾಡಿಕೊಳ್ಳುವ ಮದ್ದನ್ನು ನೋಡೋಣ ಬನ್ನಿ..

ಆಲಿವ್ ಎಣ್ಣೆ ಮತ್ತು ಉಪ್ಪಿನ ಮಿಶ್ರಣ ಕುತ್ತಿಗೆ ನೋವಿನ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ತಕ್ಷಣವೇ ಅದನ್ನು ಗುಣಪಡಿಸುತ್ತದೆ.

ನೋವಿರುವ ಜಾಗದಲ್ಲಿ ಆಲಿವ್ ಎಣ್ಣೆಯನ್ನು ಹಚ್ಚಿದರೆ ನೋವು ಮಾಯವಾಗುತ್ತದೆ. ಆಸ್ಪಿರಿನ್‌ನಂತಹ ಔಷಧಿಗಳಲ್ಲಿರುವ ಉರಿಯೂತ ನಿವಾರಕ ಘಟಕಗಳು ಈ ಎಣ್ಣೆಯಲ್ಲಿವೆ. ಅದು ನಮ್ಮ ಶರೀರದಲ್ಲಿ ನೋವಿಗೆ ಕಾರಣ ವಾಗುವ ರಾಸಾಯನಿಕಗಳ ಉತ್ಪಾದನೆಯನ್ನು ತಡೆಯುತ್ತದೆ.

ಉಪ್ಪು, ವಿಶೇಷವಾಗಿ ಎಪ್ಸಮ್ ಸಾಲ್ಟ್ ಸಹಜ ನೋವುನಿವಾರಕಗಳನ್ನು ಓಳಗೊಂಡಿದೆ. ಅದರಲ್ಲಿಯ ಮ್ಯಾಗ್ನೇಷಿಯಂ ಸಲ್ಫೇಟ್ ಶರೀರವು ನೋವಿನಿಂದ ಚೇತರಿಸಿಕೊಳ್ಳಲು ನೆರವಾಗುತ್ತದೆ.

ಚರ್ಮದಲ್ಲಿ ಸೇರಿಕೊಳ್ಳುವ ಮ್ಯಾಗ್ನೇಷಿಯಂ ನೋವನ್ನು ಗುರುತಿಸುವ ಮಿದುಳಿನ ಸಾಮರ್ಥ್ಯವನ್ನು ತಗ್ಗಿಸುತ್ತದೆ. ವಿಷವಸ್ತುಗಳನ್ನು ಹೊರಹಾಕುವ ಅದು ಸ್ನಾಯುಗಳ ಚೇತರಿಕೆಯನ್ನು ಉತ್ತೇಜಿಸುವ ಪ್ರೋಟಿನ್‌ನ್ನು ಸೃಷ್ಟಿಸುತ್ತದೆ.

ಆಲಿವ್ ಎಣ್ಣೆ ಮತ್ತು ಉಪ್ಪು ಎರಡನ್ನು ಮಿಶ್ರಣ ಮಾಡಿ ಹೇಗೆ ಕತ್ತು ನೋವಿಗೆ ಔಷಧಿ ಮಾಡಿಕೊಳ್ಳಬಹುದು ನೋಡೋಣ

ಆಲಿವ್ ಎಣ್ಣೆ. ಉಪ್ಪು ಒಂದು ಗಾಜಿನ ಜಾರೊಂದರಲ್ಲಿ ಇವೆರಡನ್ನೂ ಚೆನ್ನಾಗಿ ಮಿಶ್ರಗೊಳಿಸಿ ಬಳಿಕ ಗಾಳಿಯಾಡದಂತೆ ಮುಚ್ಚಳವನ್ನು ಹಾಕಿ ಅದನ್ನು ತಂಪಾಗಿರುವ ಒಣಜಾಗದಲ್ಲಿ ಇಡಿ. ಕೆಲವು ಗಂಟೆಗಳ ಬಳಿಕ ಅದು ತೆಳುಬಣ್ಣಕ್ಕೆ ತಿರುಗುತ್ತದೆ. 2-3 ನಿಮಿಷಗಳ ಕಾಲ ಈ ಮಿಶ್ರಣದಿಂದ ಕುತ್ತಿಗೆಯನ್ನು ಹಗುರವಾಗಿ ಮಸಾಜ್ ಮಾಡಬೇಕು.

ಇದು ರಕ್ತ ಸಂಚಾರವನ್ನು ಹೆಚ್ಚಿಸಿ ನೋವನ್ನು ತಗ್ಗಿಸುತ್ತದೆ. ಜೊತೆಗೆ ಸ್ನಾಯುಗಳ ಬಿಗಿತನವನ್ನೂ ನಿವಾರಿಸುತ್ತದೆ. ಮಸಾಜ್‌ನ ಬಳಿಕ ಸ್ವಚ್ಛ ಬಟ್ಟೆಯಿಂದ ಆ ಜಾಗವನ್ನು ಒರೆಸಿ. ಅತ್ಯುತ್ತಮ ಪರಿಣಾಮಕ್ಕಾಗಿ 2-3 ದಿನಗಳ ಕಾಲ ಪ್ರತಿದಿನ ಈ ವಿಧಾನವನ್ನು ಅನುಸರಿಸಬೇಕು.

ವಿಟಮಿನ್ ಡಿ ಅಂಶಗಳನ್ನು ಹೊಂದಿರುವ ಆಹಾರವನ್ನು ಹೆಚ್ಚಾಗಿ ಸೇವಿಸುವ ಮೂಲಕ ಕತ್ತು ನೋವು ಕಡಿಮೆಯಾಗುತ್ತದೆ. ಕತ್ತು ನೋವಿಗೆ ಸಂಬಂಧಪಟ್ಟ ವ್ಯಾಯಾಮ. ಯೋಗಗಳನ್ನು ತಿಳಿದುಕೊಂಡು ಮಾಡಿದರು ಸಹ ಕತ್ತು ನೋವು ಕಡಿಮೆಯಾಗುತ್ತದೆ. ಹರೆಳೆಣ್ಣೆಯನ್ನು ಕೊಂಚ ಬಿಸಿ ಮಾಡಿ ಮಸಾಜ್ ಮಾಡಿ ಬಿಸಿ ನೀರಿನಲ್ಲಿ ಸ್ನಾನ ಮಾಡಿದರು ಕತ್ತು ನೋವು ಕಡಿಮೆಯಾಗುತ್ತದೆ. ನಿಮಗೂ ಕತ್ತು ನೋವು ಇದ್ದರೆ ಇವುಗಳನ್ನು ಪಾಲಿಸಿ ನಿಮ್ಮ ನೋವು ಹೋಗಿಸಿಕೊಳ್ಳಿ. ಮಾತ್ರೆಗಳ ಮೊರೆಹೋಗಬೇಡಿ.

Comments are closed.