ಬಾಧೆಯಿಂದ ಕುಗ್ಗುತ್ತಿರುವಾಗ, ಒತ್ತಡದಿಂದ ಅಸಹನೆಯಿಂದ ನರಳುತ್ತಿರುವಾಗ… ಹೀಗೆ ಎಂತಹ ಪರಿಸ್ಥಿತಿಯನ್ನಾದರೂ ತಿಳಿಗೊಳಿಸಲು ಸೇತುವೆಯಂತೆ ಕೆಲಸ ಮಾಡುವುದೇ ‘ಅಪ್ಪುಗೆ’.ಆದುದರಿಂದ ಮನಸ್ಸಿಗೆ ಯಾವುದೇ ರೀತಿಯ ಭಾವನೆ ಉಂಟಾದರೂ ಒಂದು ಸಲ ಆತ್ಮೀಯವಾಗಿ, ಪ್ರೀತಿಯಿಂದ ಅಪ್ಪಿಕೊಂಡರೆ, ಮನಸ್ಸಿನ ನೋವು, ದುಗುಡ ದೂರವಾಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.
ರೋಗನಿರೋಧಕ ವ್ಯವಸ್ಥೆ ದೃಢವಾಗುತ್ತದೆ….
ಆತ್ಮೀಯರನ್ನು, ನಮ್ಮ ಮನಸ್ಸಿಗೆ ಇಷ್ಟವಾದವರನ್ನು ಗಾಢವಾಗಿ ಆಲಂಗಿಸಿಕೊಳ್ಳುವುದರಿಂದ ಶರೀರದಲ್ಲಿರುವ ‘ಥೈಮಸ್’ ಗ್ರಂಥಿ ಉತ್ತೇಜಿತಗೊಂಡು ಶರೀರದಲ್ಲಿ ಬಿಳಿ ರಕ್ತ ಕಣಗಳು ಉತ್ಪತ್ತಿಯಾಗುತ್ತವೆ. ಇದು ಶರೀರವನ್ನು ಹಲವು ಸೊಂಕುಗಳಿಂದ ರಕ್ಷಿಸುತ್ತದೆ. ಇದರಿಂದ ಶರೀರದ ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ.
ಹೃದಯದ ಆರೋಗ್ಯ…
ವ್ಯಾಯಾಮ, ಮೆಡಿಟೇಷನ್…ಮುಂತಾದುವುಗಳನ್ನು ಕ್ರಮಬದ್ಧವಾಗಿ ಮಾಡುವುದರಿಂದ, ಆತಂಕ , ಒತ್ತಡ ಕಡಿಮೆಯಾಗಿ ಹೃದಯ, ಶ್ವಾಸಕೋಶಗಳ ವ್ಯವಸ್ಥೆ ಆರೋಗ್ಯಕರವಾಗಿರುವಂತೆ…ಆಲಿಂಗನದಿಂದಲೂ ಇಂತಹುದೇ ಪ್ರಯೋಜನಗಳು ಉಂಟಾಗುತ್ತವಂತೆ.
ಮಾನಸಿಕ ಆರೋಗ್ಯ…
ಇಬ್ಬರು ವ್ಯಕ್ತಿಗಳು ಆಲಂಗಿಸಿ ಕೊಳ್ಳುವುದರಿಂದ ಅವರ ಶರೀರಗಳಲ್ಲಿ ‘ ಆಕ್ಸಿಟೋಸಿನ್’ ಎಂಬ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಇದು ಅವರಲ್ಲಿ ಒತ್ತಡ, ಆತಂಕ, ಬಾಧೆ, ಕೋಪ…ಮೊದಲಾದ ನೆಗೆಟಿವ್ ಭಾವನೆಗಳೊಂದಿಗೆ ಹೋರಾಡಿ ಅವುಗಳನ್ನು ದೂರಮಾಡುತ್ತದೆ. ಶರೀರದಲ್ಲಿ ‘ಸೆರಿಟೋನಿನ್’ ಮಟ್ಟ ಅಧಿಕವಾಗಿ ಮಾನಸಿಕ ಪ್ರಶಾಂತತೆ ಲಭಿಸುತ್ತದೆ. ವರ್ಣಿಸಲಾಗದ ಆನಂದ ಉಂಟಾಗುತ್ತದೆ.ಅದೇ ರೀತಿ ನಮಗೆ ಇಷ್ಟವಾದವರನ್ನು ಆಲಂಗಿಸಿಕೊಳ್ಳುವುದರಿಂದ ನಮ್ಮಲ್ಲಿರುವ ನೆಗೆಟಿವ್ ಆಲೋಚನೆಗಳು ದೂರವಾಗಿ ನಂಬಿಕೆ ಮೂಡುತ್ತದೆ. ಭದ್ರತೆ ಹಾಗೂ ಆತ್ಮ ಗೌರವ ಹೆಚ್ಚುತ್ತದೆ.
ರಿಲ್ಯಾಕ್ಸ್ ಆಗಲು…
ಆಲಿಂಗಿನವು ಇತರರೊಂದಿಗೆ ನಮಗಿರುವ ಪ್ರೀತಿಯನ್ನು ವ್ಯಕ್ತ ಪಡಿಸಲು ಮಾತ್ರವಲ್ಲದೆ… ಶಾರೀರಿಕವಾಗಿ ರಿಲ್ಯಾಕ್ಸ್ ಆಗಲು ಸಹಕಾರಿಯಾಗುತ್ತದೆ. ಗಾಢ ಆಲಿಂಗನದಿಂದ ಶರೀರದಲ್ಲಿ ರಕ್ತ ಪ್ರಸಾರ ಅಧಿಕವಾಗುತ್ತದೆ. ಇದರಿಂದಾಗಿ ಸ್ನಾಯುಗಳ ನೋವು ಮಾಯವಾಗಿ ಪ್ರಶಾಂತತೆ ಲಭಿಸುತ್ತದೆ.
ಮನಸಾರೆ…
* ಇಬ್ಬರು ವ್ಯಕ್ತಿಗಳು ಮನಸಾರೆ ಆಲಂಗಿಸಿಕೊಳ್ಳುವುದರಿಂದ ಪರಸ್ಪರ ನಂಬಿಕೆ ಹೆಚ್ಚಾಗುತ್ತದೆ. ಇಬ್ಬರ ನಡುವೆ ಸಂವಹನ ದ್ವಿಗುಣಗೊಳ್ಳುತ್ತದೆ.ಇನ್ನೊಬ್ಬರ ಮೇಲೆ ನಮಗಿರುವ ಪ್ರೀತಿಯನ್ನು ವ್ಯಕ್ತ ಪಡಿಸಲು ಉಪಯೋಗಕ್ಕೆ ಬರುವ ಶಕ್ತಿಯುತವಾದ ಸಾಧನ ‘ ಆಲಿಂಗನ’ಆಲಿಂಗನದಿಂದ ಸಂಬಂಧಗಳು ಮತ್ತಷ್ಟು ದೃಢವಾಗುತ್ತವೆ.ನಾಡೀ ವ್ಯವಸ್ಥೆ ಪ್ರಭಾವಿತಗೊಳ್ಳುತ್ತದೆ.
ಬಾಲ್ಯದಲ್ಲಿ ತಂದೆ ತಾಯಿಯರ ಆಲಿಂಗನದಿಂದ ವಂಚಿತರಾದ ಮಕ್ಕಳ ಬುದ್ಧಿಮತ್ತದೆ ಕ್ಷೀಣಿಸುತ್ತದೆಂದು…ಇದರಿಂದಾಗಿ ಓಡಾಡುವುದು, ಮಾತನಾಡುವುದು, ಓದುವುದು… ಮುಂತಾದುವು ತಡವಾಗಿ ಪ್ರಾರಂಭವಾಗುತ್ತವೆ. ನೋಡಿದಿರಲ್ಲಾ…ಆಲಿಂಗಿಸಿಕೊಳ್ಳುವುದರಿಂದ ಏನೆಲ್ಲಾ ಪ್ರಯೋಜನಗಳು ಆಗುತ್ತವೆಂದು. ಇನ್ನು ಮುಂದೆ ನಿಮ್ಮ ಯಾವುದೇ ರೀತಿಯ ಭವನೆಗಳನ್ನು ನಿಮ್ಮ ಆತ್ಮೀಯರನ್ನು ಆಲಂಗಿಸಿಕೊಳ್ಳುವುದರ ಮೂಲಕ… ಉತ್ತಮ ಆರೋಗ್ಯ ಹಾಗೂ ಮಾನಸಿಕ ಉಲ್ಲಾಸವನ್ನು ನಿಮ್ಮದಾಗಿಸಿಕೊಳ್ಳಿ.
Comments are closed.