ಬೃಂಗರಾಜ ಗಿಡವು ನಿಮ್ಮ ಆರೋಗ್ಯಕ್ಕೆ ತುಂಬಾನೇ ಸಹಾಯಕಾರಿಯಾಗಿ ಕೆಲಸ ಮಾಡಲಿದೆ. ನೀವು ಸೇವಿಸುಂತಹ ಎಲ್ಲಾ ಟಾನಿಕ್ ಗಳಲ್ಲಿ ಈ ಗಿಡದ ಅಂಶವನ್ನು ಉಪಯೋಗಿಸಲಾಗುತ್ತೆ. ಈ ರೀತಿಯಾಗಿ ಭೃಂಗರಾಜ ಗಿಡವು ತನ್ನ ಮಹತ್ವವನ್ನು ಹೊಂದಿದೆ.
ಭೃಂಗರಾಜ ಗಿಡದ ಉಪಯೋಗಕ್ಕೆ ಬರುವ ಭಾಗಗಳು:
ಪಂಚಂಗಗಳು ಅಂದರೆ ಬೇರು, ಕಾಂಡ, ಎಲೆ, ಹೂ, ಬೀಜ ಎಲ್ಲವೂ ಔಷಧೀಯ ಗುಣ ಹೊಂದಿವೆ.
ಈ ಗಿಡದ ಔಷಧೀಯ ಗುಣಗಳು:
೧.ಅಜೀರ್ಣದಿಂದಾಗಿ ಹೊಟ್ಟೆಯುಬ್ಬರ ಉಂಟಾಗಿದ್ದರೆ ಭೃಂಗರಾಜವನ್ನು ಸಣ್ಣಗೆ ಹೆಚ್ಚಿಕೊಂಡು ಸ್ವಲ್ಪ ಎಣ್ಣೆಯಲ್ಲಿ ಹುರಿದು ಮೊಸರಿನಲ್ಲಿ ಜೀರಿಗೆ ಪುಡಿಯೊಂದಿಗೆ ಬೆರೆಸಿ ತಿನ್ನಬೇಕು.
೨.ಚರ್ಮರೋಗಗಳಿಗೆ ಭೃಂಗರಾಜದ ಬೇರನ್ನು ಕುಟ್ಟಿ ಪುಡಿ ಪುಡಿ ಮಾಡಿ ನೀರಿನಲ್ಲಿ ಬೆರೆಸಿ ಲೇಪಿಸಬೆಕು.
೩.ತಲೆನೋವಿನಿಂದ ಬಳಲುವರು ಭೃಂಗರಾಜದ ರಸವನ್ನು ಎಳ್ಳೆಣ್ಣೆಯೊಂದಿಗೆ ಬೆರೆಸಿ ಹಣೆಗೆ ಲೇಪಿಸಿಕೊಳ್ಳಬೇಕು.
೪.ಕೂದಲುದುರುವಿಕೆ : ತಲೆಗೂದಲು ಉದುರುತ್ತಿದ್ದಲ್ಲಿ ಮತ್ತು ಚಿಕ್ಕವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗಲು ಆರಂಭವಾಗಿದ್ದಲ್ಲಿ ಭೃಂಗರಾಜದಿಂದ ತಯಾರಿಸಿದ ತೈಲವನ್ನು ಪ್ರತಿದಿನ ತಲೆಗೆ ಹಚ್ಚಿಕೊಂಡಲ್ಲಿ ಕೂದಲುದುರುವುದು ನಿಲ್ಲುವುದಲ್ಲದೇ ಸೊಂಪಾಗಿ ಆರೋಗ್ಯಪೂರ್ಣವಾಗಿ ಬೆಳೆಯುತ್ತದೆ. ಎಲ್ಲ ದೇಶೀಯ ಯಕೃತ್ತಿನ ಟಾನಿಕ್ ಗಳು ಈ ಸಸ್ಯದ ಅಂಶ ಹೊಂದಿರುತ್ತವೆ.
Comments are closed.