ಕರಾವಳಿ

ಮೊಬೈಲ್ ಫೋನ್ ಪಕ್ಕದಲ್ಲಿಯೇ ಇಟ್ಟು ಮಲಗುತ್ತೀರಾ….?

Pinterest LinkedIn Tumblr

ನಿದ್ದೆ ಮಾಡಬೇಕೆಂದು ಮಲಗಲು ಹೋಗುತ್ತೇವೆ. ಇನ್ನೇನು ಮಲಗಬೇಕು ಅಷ್ಟರಲ್ಲಿ ಮೊಬೈಲ್ ಫೋನ್ ಲೈಟ್ ಫ್ಲಾಶ್ ಕಾಣಿಸುತ್ತದೆ. ಯಾರು ಮೆಸೇಜ್ ಕಳುಹಿಸಿರಬಹುದು ಎಂಬ ಕೆಟ್ಟ ಕುತೂಹಲ ನಮ್ಮನ್ನು ಮೊಬೈಲ್ ಫೋನ್ ಸ್ಕ್ರೀನ್ ನೋಡುವಂತೆ ಮಾಡುತ್ತದೆ.

ಮೊಬೈಲ್ ಫೋನ್ ಚಟ
ಯಾವ ಮೆಸೇಜ್ ಬರದಿದ್ದರೂ ವಾಟ್ಸ್ ಅಪ್, ಫೇಸ್ಬುಕ್ ಅಂತ ಕಣ್ಣಾಡಿಸಿ ನಂತರ ಅದನ್ನು ದಿಂಬಿನದಿಯಲ್ಲೋ, ಪಕ್ಕದ ಮೇಜಿನ ಮೇಲೋ ಇಟ್ಟು ಮಲಗಿ ಬಿಡುತ್ತೇವೆ. ಒಟ್ಟಿನಲ್ಲಿ ಮೊಬೈಲ್ ಫೋನ್ ನಮ್ಮ ಕೈಗೆ ಎಟುಕುವಷ್ಟು ದೂರದಲ್ಲಿರಬೇಕು ಅಲ್ವಾ…….?

ನಮ್ಮ ಈ ಅಭ್ಯಾಸ ಎಷ್ಟೊಂದು ಡೇಂಜರಸ್ ಗೊತ್ತೇ…?ಮೊಬೈಲ್ ಫೋನ್ ಪಕ್ಕದಲ್ಲಿಟ್ಟು ಮಲಗುವ ನಮ್ಮ ಅಭ್ಯಾಸದಿಂದ ಉಂಟಾಗುವ ಅನಾಹುತ ಕುರಿತು ತಿಳಿದರೆ ಇನ್ನು ಮುಂದೆ ನೀವು ಅಪ್ಪಿ ತಪ್ಪಿಯೂ ಮೊಬೈಲ್ ಫೋನ್ ಅನ್ನು ಪಕ್ಕದಲ್ಲಿ ಇಟ್ಟು ಮಲಗುವ ಸಾಹಸ ಮಾಡುವುದಿಲ್ಲ ನೋಡಿ.

ಸೈಲೆಂಟ್ ಕಿಲ್ಲರ್ ಮೊಬೈಲ್ ಫೋನ್
ಬೆಳಗ್ಗೆ ಏಳುವಾಗ ತಲೆನೋವು, ಮೈಕೈ ನೋವು ಕಂಡು ಬಂದರೆ ಅದು ಮೊಬೈಲ್ ಫೋನ್ ಪ್ರಭಾವವಿರಬಹುದು. ಮೊಬೈಲ್ ಫೋನ್ ಹೊರಸೂಸುವ ಹಾನಿಕಾರಕ ವಿಕಿರಣಗಳಿಂದ ಈ ರೀತಿ ಉಂಟಾಗುತ್ತದೆ.

ಮೊಬೈಲ್ ಫೋನ್ ನಿಂದ ಲೈಂಗಿಕ ಶಕ್ತಿ ಕುಂದುವುದೇ….?
ಸಂತಾನ ಶಕ್ತಿ ಕ್ಷೀಣಿಸುತ್ತದೆ… ಮೊಬೈಲ್ ಫೋನ್ ಅನ್ನು ಜೇಬಿನಲ್ಲಿ ಅಥವಾ ಪಕ್ಕದಲ್ಲಿ ಇಟ್ಟು ಮಲಗುವುದರಿಂದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು.

ಮಕ್ಕಳನ್ನು ಕ್ಯಾನ್ಸರ್ ನಿಂದ ರಕ್ಷಿಸಿ
ಚಿಕ್ಕ ಮಕ್ಕಳ ಬಳಿ ಮೊಬೈಲ್ ಫೋನ್ ಇಡಬೇಡಿ. ಸ್ಮಾರ್ಟ್ ಫೋನ್ ಮಕ್ಕಳಿಗೆ ಕೊಡಬೇಡಿ. ಮಕ್ಕಳು ಫೋನ್ ಕಂಡ ತಕ್ಷಣ ಕೊಡು ಎಂದು ಹಠ ಮಾಡುತ್ತವೆ. ಹಾಗಂತ ಅವರಿಗೆ ಆಟವಾಡಲು ನೀಡಿದರೆ ನಮ್ಮ ಮುದ್ದಿನ ಮಕ್ಕಳಿಗೆ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಯನ್ನು ನಾವೇ ಕೊಡುಗೆಯಾಗಿ ನೀಡಿದಂತೆ. ವಿಶ್ವ ಅರೋಗ್ಯ ಸಂಸ್ಥೆ ಕೂಡ ಈ ಕುರಿತು ಎಚ್ಚರಿಕೆ ನೀಡಿದೆ.

ಮಲಗುವಾಗ ಮೊಬೈಲ್ ಫೋನ್ ಅನ್ನು ಎಷ್ಟು ದೂರ ಇಟ್ಟು ಮಲಗಬೇಕು….?
ಮೊಬೈಲ್ ಫೋನ್ ಅನ್ನು ಎಷ್ಟು ದೂರ ಇಟ್ಟರೆ ಒಳ್ಳೆಯದು ಎಂದು ನಿಖರವಾಗಿ ಯಾರು ಹೇಳಿಲ್ಲ, ಆದರೆ ಕನಿಷ್ಠ ೬-೭ ಅಡಿ ಅಂತರವಿಟ್ಟು ಮಲಗುವುದು ಒಳ್ಳೆಯದು.

ಮೊಬೈಲ್ ಫೋನ್ ಚಟವಾಗದಿರಲಿ
ಮೊಬೈಲ್ ಫೋನ್ ಅನ್ನು ಅಗತ್ಯವಿದ್ದಾಗ ಮಾತ್ರ ಬಳಸಬೇಕೇ ಹೊರತು ಚಟವಾಗದಿರಲಿ, ಈ ಬುಕ್ ಓದುವ ಬದಲು ಪ್ರಿಂಟ್ ಹಾಕಿರುವ ಬುಕ್ ಓದಿ. ಮೊಬೈಲ್ ಫೋನ್ ಗೇಮ್ ಬದಲು ದೈಹಿಕ ಚಟುವಟಿಕೆ ಇರುವ ಆಟ ಅಡಿ. ಮೊಬೈಲ್ ಫೋನ್ ನಿಂದ ಆದಷ್ಟು ದೂರವಿರಲು ಪ್ರಯತ್ನಿಸಿ.

Comments are closed.