ಹೆಸರೇ ಹೇಳುವಂತೆ ಬಂಗಾರದ ಬಣ್ಣದ ದೊಡ್ಡದಾದ ಗೆಡ್ಡೆ. ಬಳಸಲೂ ಇಷ್ಟವಾಗದ ತರಕಾರಿಗಳ ಸಾಲಿನಲ್ಲಿ ನಿಲ್ಲುವ ಸುವರ್ಣಗೆಡ್ಡೆಯಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ ಎಂಬುದು ಎಷ್ಟೋ ಜನರಿಗೆ ತಿಳಿದೇ ಇಲ್ಲ. ತಿಳಿದವರು ಏನೋ ಸುಣ್ಣದ ವಾಸನೆಯೆಂದು ಅನೇಕರಿಗೆ ಸುವರ್ಣ ಗೆಡ್ಡೆ ಇಷ್ಟವಾಗುವುದಿಲ್ಲ, ಆದರೆ ಇದರಲ್ಲಿ ಅಗಾಧವಾದ ಔಷಧೀಯ ಗುಣಗಳಿವೆ.
ಮೂಲವ್ಯಾಧಿ:
ಈ ಸಮಸ್ಯೆಯಿಂದ ಬಳಲುವವರು ಪಲ್ಯ ಅಥವಾ ಇತರೆ ಆಹಾರದ ರೂಪದಲ್ಲಿ ಸೇವಿಸುತ್ತಾ ಬರಬೇಕು. ತಿಂಗಳು ಪೂರಾ ಮಜ್ಜಿಗೆ ಹಾಗೂ ಗಡ್ಡೆ ಬಳಸಿದರೆ ಈ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.
ಆನೇಕಾಲು ರೋಗ:
ಸುವರ್ಣ ಗೆಡ್ಡೆಯನ್ನು ಚೆನ್ನಾಗಿ ಜಜ್ಜಿ ತುಪ್ಪ ಮತ್ತು ಜೇನುತುಪ್ಪ ಸೇರಿಸಿ ಲೇಪಿಸುವುದರಿಂದ ಆನೆಕಾಲು ರೋಗಕ್ಕೆ ಉಪಯುಕ್ತ ಔಷಧಿಯಾಗುತ್ತದೆ.
ಚರ್ಮದಲ್ಲಿ ಕೊಬ್ಬಿನಂಶದಿಂದಾದ ಗಂಟು ರೋಗ:
ಚರ್ಮದಲ್ಲಿ ಕೊಬ್ಬಿನಂಶದಿಂದಾದ ಗಂಟುಗಳಾಗಿದ್ದಾರೆ ಈ ಗಡ್ಡೆ ಹಾಗೂ ಒಣಶುಂಠಿ ಸೇರಿಸಿ ನೀರಿನೊಂದಿಗೆ ಜಜ್ಜಿ ಆ ಭಾಗಕ್ಕೆ ಲೇಪಿಸಬೇಕು. (ವಾರಪೂರ್ತಿ ಲೇಪಿಸಬೇಕು)
ಚೇಳು ಕಡಿತಕ್ಕೆ ಔಷಧ:
ಸುವರ್ಣ ಗೆಡ್ಡೆಯನ್ನು ಬೇಯಿಸಿ ಚೇಳು ಕಚ್ಚಿರುವ ಜಾಗಕ್ಕೆ ಲೇಪಿಸಿದರೆ ವಿಷ ನಿವಾರಣೆಯಾಗುತ್ತದೆ.
ಸ್ಥೂಲಕಾಯಕ್ಕೆ ಮದ್ದು:
ತೂಕ ಕಡಿಮೆ ಮಾಡಬಯಸುವವರು ದಿನವೂ ಇದನ್ನು ಬಳಸುವುದರಿಂದ ಪರಿಣಾಮಕಾರಿ ರೀತಿಯಲ್ಲಿ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಕೊಬ್ಬಿನಂಶದಿಂದ ಚರ್ಮದಲ್ಲಿ ಗಂಟುಗಳಾಗಿದ್ದರೆ ಈ ಗಡ್ಡೆ ಹಾಗೂ ಒಣಶುಂಠಿ ಸೇರಿಸಿ ಜಜ್ಜಿ ಆ ಭಾಗಕ್ಕೆ ಲೇಪಿಸಬೇಕು. ವಾರ ಪೂರ್ತಿ ಈ ರೀತಿ ಹಚ್ಚುತ್ತಾ ಬಂದರೆ ಗಂಟು ಕಡಿಮೆಯಾಗುತ್ತದೆ.
ಸೂಚನೆ:
ನಾಲಿಗೆ ತುರಿಸುವ ಕಾರಣದಿಂದ ನೀರಿನಲ್ಲಿ ಚೆನ್ನಾಗಿ ಬೇಯಿಸಿ ನೀರನ್ನು ಚೆಲ್ಲಿ ನಂತರ ಸುವರ್ಣಗೆಡ್ಡೆಯನ್ನು ಬಳಸಬೇಕು.
Comments are closed.