ಕರಾವಳಿ

ಕಟ್ಟಿದ ಮೂಗನ್ನು ಸರಾಗಗೊಳಿಸಲು ಕೆಲವು ಸಲಹೆಗಳು…!

Pinterest LinkedIn Tumblr

ಮನೆಯಲ್ಲಿ ಮಕ್ಕಳಿದ್ದಾರೆ ಎಂದರೆ ಅವರ ಕಾಳಜಿಗಾಗಿಯೇ ಸ್ವಲ್ಪ ಸಮಯ ಅವರಿಗೇ ಮೀಸಲಿಡಬೇಕಾಗುತ್ತದೆ. ಮಕ್ಕಳಿನ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರು ಅದಕ್ಕೆ ಮೊದಲ ವೈದ್ಯೆ ಮಗುವಿನ ತಾಯಿ. ತನ್ನ ಮಗುವನ್ನು ಆತಳ ಆರೋಗ್ಯಕ್ಕಿಂತಲೂ ಹೆಚ್ಚು ಕಾಪಾಡುತ್ತಾಳೆ, ಕಾಳಜಿ ವಹಿಸುತ್ತಾಳೆ. ಕಾಲಕ್ಕೆ ತಕ್ಕಂತೆ ಆಯಾ ವಾತಾವರಣದಲ್ಲಿ ತನ್ನ ಮಗುವನ್ನು ಕಾಪಾಡುತ್ತಾ ಹೋಗುತ್ತಾಳೆ ಆದರೆ ಪರಿಸರದಲ್ಲಿನ ಹಲವಾರು ಬದಲಾವಣೆಗಳಿಂದ ಒಂದಲ್ಲಾ ಒಂದು ಕಾಯಿಲೆಗಳು ಬರುವುದು ಸಾಮಾನ್ಯ. ಅತಿಯಾದ ಚಳಿಯ ಸಂದರ್ಭದಲ್ಲಿ ಸಾಮಾನ್ಯವಾಗಿ ಮಕ್ಕಳಿಂದ ಹಿಡಿದು ದೊಡ್ಡವರಿಗೆ ಶೀತವಾಗುವುದು, ಮೂಗು ಕಟ್ಟಿಕೊಳ್ಳುವುದು ಸಾಮಾನ್ಯ. ಹಾಗಾಗಿ ನಿಮ್ಮ ಮಗುವಿನ ಮೂಗು ಕಟ್ಟಿದ ಸಮಯದಲ್ಲಿ ಅದನ್ನು ಸರಾಗಗೊಳಿಸಲು ಇಲ್ಲಿವೆ ನೋಡಿ ಕೆಲವು ಸಲಹೆಗಳು.

1. ನಿಮ್ಮ ಮಗುವಿನ ಕೋಣೆಯಲ್ಲಿ ತಂಪಾದ ಮಂಜು ಆರ್ದ್ರಕ ಅಥವಾ ಆವಿಕಾರಕವನ್ನು ಬಳಸಿ.

2. ನಿಮ್ಮ ಮಗುವಿನ ಮೂಗು ಸ್ರವಿಸುವಿಕೆಯು ದಪ್ಪವಾಗಿದ್ದರೆ, ಸಾಮಾನ್ಯವಾದ ಲವಣಯುಕ್ತ ದ್ರಾವಣವನ್ನು ಮೂಗು ಹನಿಯಾಗಿ ಬಳಸಿ.

3. ಮಗುವಿನ ಮೂಗಿನ ಲೋಳೆಯನ್ನು ಹೀರಿಕೊಳ್ಳಲು ಮೃದುವಾದ ರಬ್ಬರ್​​​ನ ಶಿಶು ಸಕ್ಷನ್ ಬಲ್ಬ್ ಬಳಸಿ.

4. ನಿಮ್ಮ ಮಗುವು ಉತ್ತಮವಾದ ನಿದ್ರೆ ಮಾಡಲು ಮೂಗಿನ ಒಳಗಿನ ಪ್ರದೇಶವನ್ನು ಸ್ವಚ್ಚಗೊಳಿಸಲು ಸಹಾಯ ಮಾಡಿ ನಂತರ ಮಲಗಿಸಿ.

5. ನಿಮ್ಮ ಮಗುವಿನ ಸುತ್ತ ಎಂದಿಗೂ ಧೂಮಪಾನ ಮಾಡಬೇಡಿ. ನೀವು ಧೂಮಪಾನ ಮಾಡಿದ್ದರೆ, ನಿಮ್ಮ ಕೈಗಳನ್ನು ತೊಳೆದುಕೊಂಡು ಹಾಗೂ ಬಟ್ಟೆ ಬದಲಿಸಿ ನಿಮ್ಮ ಮಗುವನ್ನು ಮುಟ್ಟಿ.

Comments are closed.