ಕರಾವಳಿ

ಸಣ್ಣ ಪುಟ್ಟ ಖಾಯಿಲೆಗಳನ್ನು ಹೋಗಲಾಡಿಸುವ ಮಾಹಿತಿ ಇಲ್ಲಿದೆ

Pinterest LinkedIn Tumblr

1.ಹೊಟ್ಟೆ ತೊಳಸುವಿಕೆ, ವಾಕರಿಕೆ, ಸಂಕಟ, ಉದರಬೇನೆ ಇತ್ಯಾಧಿ ವ್ಯಾಧಿಗಳ ಪರಿಹಾರಕ್ಕೆ ನಿಂಬೆ ರಸದೊಂದಿಗೆ ಹರಳೆಣ್ಣೆ ಸೇವಿಸಬೇಕು.

2.ಹರಳೆಣ್ಣೆಯನ್ನು ಅಂಗಾಂಗಗಳಿಗೆ ಹಚ್ಚಿ ಚೆನ್ನಾಗಿ ಮಾಲೀಸು ಮಾಡಿದ ನಂತರ ಬಿಸಿ ನೀರಿನ ಸ್ನಾನ ಮಾಡಿದ್ದಲ್ಲಿ ಮೈಕೈ ನೋವು, ಕೀಲು ನೋವು ಕಡಿಮೆಯಾಗಿ ಆಲಸ್ಯ ಕಡಿಮೆಯಾಗುವುದು.

3.ಕಣ್ಣು ಚುಚ್ಚುವಿಕೆ ಮತ್ತು ಕಣ್ಣುರಿಗಳಿಗೆ ರಾತ್ರಿ ಮಲಗುವ ಮುಂಚೆ ಕಣ್ಣಿನ ರೆಪ್ಪೆಗಳಿಗೆ ಹರಳೆಣ್ಣೆಯನ್ನು ಹಚ್ಚಿದ್ದಲ್ಲಿ ಗುಣವಾಗುವುದು.

4.ಹರಳೆಣ್ಣೆ ತಲೆಗೆ ಹಚ್ಚುವುದರಿಂದ ಕೂದಲು ಚೆನ್ನಾಗಿ ಬೆಳೆಯುವುದು ಮತ್ತು ಹೊಟ್ಟು ನಿವಾರಣೆಯಾಗುವುದು.

5.ಗರ್ಭಿಣಿಯರು ದಿನಕ್ಕೊಮ್ಮೆ ಮೊಲೆ ತೊಟ್ಟಿಗೆ ಹರಳೆಣ್ಣೆ ಹಚ್ಚಿ ತೊಟ್ಟನ್ನು ಹೊರಮುಖವಾಗಿ ತೀಡಿದ್ದಲ್ಲಿ ಹೆರಿಗೆಯ ನಂತರ ಹಾಲು ಉಣಿಸುವ ಕಾರ್ಯ ಸುಗಮವಾಗುವುದು.

6.ಹೆರಿಗೆಯ ನಂತರ ಸ್ತನಗಳಿಗೆ ಹರಳೆಣ್ಣೆ ಹಚ್ಚಿ ಮಾಲೀಶು ಮಾಡುವುದರಿಂದ ಹೆಚ್ಚು ಹಾಲು ಸ್ರವಿಸುವುದು.

7.ಮಗುವು ಹೊಟ್ಟೆ ಉಬ್ಬರದಿಂದ ನರಳುತ್ತಿದ್ದರೆ ಹರಳೆಣ್ಣೆ ಸವರಿದ ವೀಳೇದೆಲೆಯನ್ನು ಬಿಸಿ ಮಾಡಿ ಅದರ ಶಾಖವನ್ನುಮಗುವಿನ ಹೊಟ್ಟೆಯ ಮೇಲಿಟ್ಟಲ್ಲಿ ತತ್ತಕ್ಷಣ ಪರಿಹಾರ ಲಭಿಸುವುದು.

8.ಸೇಬನ್ನು ಕಚ್ಚಿ ತಿನ್ನುವುದರಿಂದ ಹಲ್ಲುಗಳ ಹೊಳಪು ಹೆಚ್ಚುವುದಲ್ಲದೆ ಜೊಲ್ಲು ರಸ ಹೇರಳವಾಗಿ ಸ್ರವಿಸಿ ಜೀರ್ಣಶಕ್ತಿ ಹೆಚ್ಚುತ್ತದೆ.

9.ಕಫ ಕಟ್ಟುವಿಕೆ ನಿವಾರಣೆಯಾಗಲು ಪ್ರತಿದಿನ ಒಂದು ಸೇಬನ್ನು4೦ ದಿನಗಳ ಕಾಲ ಸೇವಿಸಬೇಕು.

10.ಧೀರ್ಘಕಾಲದ ತಲೆನೋವಿನಿಂದ ಬಳಲುತ್ತಿದ್ದರೆ ಸೇಬನ್ನು ಉಪ್ಪಿನ ಸಹಿತ 15ದಿನಗಳ ಕಾಲ ಸೇವಿಸಬೇಕು.

11.ಸೇಬು ತಿನ್ನುವಾಗ ಜೊಲ್ಲುರಸ ಅಧಿಕವಾಗಿ ಸ್ರವಿಸಿ ಕರುಳಿನ ರೋಗಗಳು ತಲೆದೋರುವುದಿಲ್ಲ.

12.ಮಗುವಿಗೆ ಅತಿಸಾರವುಂಟಾಗಿದ್ದರೆ ಎಸಬನ್ನು ತುರಿದು ಹಾಲಿನೊಂದಿಗೆ ಬೆರೆಸಿ ಕುಡಿಸಿ.

13.ಆಮಶಂಕೆಗೆ ಸೇಬನ್ನು ತುರಿದು ಅದರ ರಸವನ್ನು ಕುಡಿದ್ದಲ್ಲಿ ಗುಣವಾಗುವುದು.

14.ಸೇಬು ಹಣ್ಣಿನ ರಸ ಹೊಟ್ಟೆ ಹುಣ್ಣಿನಿಂದ ನರಳುವವರಿಗೆ ಉತ್ತಮ ಔಷಧ.

15.ಮುಖದ ಮೇಲಿನ ಮೊಡವೆಗಳ ನಿವಾರಣೆಗೆ ಸೇಬಿನ ತಿರುಳನ್ನು ಅರೆದು ಹಚ್ಚಬೇಕು.

16.ಮೂಲವ್ಯಾಧಿ, ಯಕೃತ್ತ, ಗುಲ್ಮ ಸಮಬಂಧಿ ರೋಗಗಳಿಂದ ನರಳುವವರಿಗೆ ಪಪಾಯಿ ಅತ್ಯುತ್ತಮ ಔಷಧಿ.

17.ಒಂದು ಹೋಳು ಪರಂಗಿ ಹಣ್ಣಿನಿಂದ ಚರ್ಮವನ್ನು ತಿಕ್ಕುತ್ತಿದ್ದರೆ ಕಲೆಗಳು ನಿವಾರಣೆಯಾಗುವುದು.

18.ಹಾಲು ಕುಡಿಸುವ ತಾಯಂದಿರು ಪರಂಗಿ ಹಣ್ಣನ್ನು ಸೇವಿಸುತ್ತಿದ್ದರೆ ನಿಶ್ಯಕ್ತಿ ದೂರವಾಗುತ್ತದೆ.

19.ಪರಂಗಿ ಹಣ್ಣನ್ನು ಮಲೇರಿಯಾ, ಡೆಂಗೀ ಮತ್ತು ಕಣ್ಣು ಬೇನೆಯಿಂದ ನರಳುತ್ತಿರುವ ರೋಗಿಗಳು ತಿನ್ನುವುದರಿಂದ ರೋಗ ಉಲ್ಬಣ ವಾಗುವುದಿಲ್ಲ..

20.ಊಟದ ನಂತರ ಒಂದೆರಡು ಪಕ್ವವಾದ ಬಾಳೆಹಣ್ಣು ಸೇವಿಸುತ್ತಿದ್ದರೆ ಮಲಬದ್ಧತೆಯು ನಿವಾರಣೆಯಾಗುವುದು, ಧಾತು ವೃದ್ಧಿಯಾಗುವುದು.

21.ಮೂಲವ್ಯಾಧಿ, ಹೊಟ್ಟೆ ಹುಣ್ಣು ಮತ್ತು ಗುದದ್ವಾರದ ನೋವು ಮತ್ತು ಉರಿಗೆ ಬಾಳೆಕಾಯಿ ತಿರುಳನ್ನು ಹಾಲಿನಲ್ಲಿ ಬೇಯಿಸಿ ತಿನ್ನಬೇಕು.

22.ಕರುಳಿನಲ್ಲಿರುವ ಸೂಕ್ಷ್ಮ ಕ್ರಿಮಿಗಳು ಹೊರ ಬೀಳಲು ಎಳೆ ಬಾಳೆಕಾಯಿಗಳ್ನ್ನು ಸಿಪ್ಪೆ ಸಹಿತ ಸೇವಿಸಿ.

23.ಅಂಗಾಲು ಉರಿ, ಕಣ್ಣು ಉರಿ ನಿವಾರಣೆಗೆ ಬಾಳೆಹಣ್ಣಿನ ತಿರುಳನ್ನು ಮಜ್ಜಿಗೆಯೊಂದಿಗೆ ಚೆನ್ನಾಗಿ ಮಸೆದು ಸೇವಿಸಬೇಕು.

24.ಬಾಳೆಹಣ್ಣನ್ನು ಮಜ್ಜಿಗೆಯೊಂದಿಗೆ ಸೇವಿಸಿದರೆ ವಿಷಮಶೀತಜ್ವರ, ಆಮಶಂಕೆ, ಮೂಲವ್ಯಾಧಿಗಳಿಂದ ಗುಣ ಹೊಂದಬಹುದು.

25.ಗರ್ಭಿಣಿಯರು ಬಾಳೆಹಣ್ಣನ್ನು ಕ್ರಮವಾಗಿ ಸೇವಿಸುವುದರಿಂದ ರಕ್ತ ಪುಷ್ಟಿಯಾಗುವುದು ಮತ್ತು ಸುಖ ಪ್ರಸವಕ್ಕೆ ದಾರಿಯಾಗುವುದು.

26.ಕೆಮ್ಮು ಮತ್ತು ಎದೆನೋವು ಇರುವವರು ಬಾಳೆಹಣ್ಣನ್ನು ಸಕ್ಕರೆ ಮತ್ತು ಜೇನುತುಪ್ಪದೊಂದಿಗೆ ಸೇವಿಸಿದರೆ ಕಡಿಮೆಯಾಗುವುದು.

27.ಬಾಳೆಹಣ್ಣಿನ ತಿರುಳನ್ನು ಚೆನ್ನಾಗಿ ಕಿವುಚಿ ಕುರುವಿನ ಮೇಲೆ ಲೇಪಿಸಿದರೆ ವ್ರಣ ಬೇಗ ಮಾಯುವುದು.

28.ಬಾಳೆಹಣ್ಣಿನ ತಿರುಳನ್ನು ಹುಣಸೇಹಣ್ಣಿನೊಂದಿಗೆ ಚೆನ್ನಾಗಿ ಅರೆದು ಸೇವಿಸಿದ್ದಲ್ಲಿ ಮಲಬದ್ಧತೆ ನಿವಾರಣೆಯಾಗುವುದು.

29.ಈರುಳ್ಳಿಯನ್ನು ನುಣ್ಣಗೆ ಅರೆದು ವಸಡಿಗೆ ಹಚ್ಚಿ ಮೆದುವಾಗಿ ತಿಕ್ಕಿದರೆ ವಸಡಿನಿಂದಾಗುವ ರಕ್ತಸ್ರಾವ ನಿಲ್ಲುವುದು.

30.ಈರುಳ್ಳಿ ತಿನ್ನುವುದರಿಂದ ರೋಗಾಣುಪೂರಿತ ಆಮಶಂಕೆ ಗುಣವಾಗುವುದು.

31.ಸುಟ್ಟ ಹಸಿ ಈರುಳ್ಳಿಯನ್ನು ಅಗೆದು ತಿನ್ನುವುದರಿಂದ ದಂತಕ್ಷಯ ನಿವಾರಣೆಯಾಗುವುದು.

32.ಜಜ್ಜಿದ ಈರುಳ್ಳಿಯನ್ನು ಜೇನು ಅಥವಾ ಚೇಳು ಕಚ್ಚಿದ ಬಾಗಕ್ಕೆ ಹಚ್ಚಿದರೆ ನೋವು ಶಮನವಾಗುವುದು.

33.ಜಜ್ಜಿದ ಈರುಳ್ಳಿಯನ್ನು ಒಡೆದಿರುವ ಅಂಗಾಲಿಗೆ ಕಟ್ಟಿದರೆ ಬಿರುಕು ಕಡಿಮೆಯಾಗುತ್ತದೆ.

34.ಜಜ್ಜಿದ ಈರುಳ್ಳಿಯನ್ನು ಮೂಸುತ್ತಿದ್ದರೆ ವಾಂತಿ, ನೆಗಡಿ ತಲೆನೋವು ಗುಣವಾಗುವುದು.

35.ದೇಹದ ತೂಕ ಹೆಚ್ಚಲು ಈರುಳ್ಳಿಯನ್ನು ಬೆಲ್ಲದ ಸಮೇತ ತಿನ್ನಬೇಕು.

36.ಅರಿಶಿನ ಕಾಮಾಲೆ, ಮೂಲವ್ಯಾಧಿ ಇರುವ ರೋಗಿಗಳು ಈರುಳ್ಳಿ ಎಲೆಯನ್ನು ತಿಂದಲ್ಲಿ ಉತ್ತಮ ಗುಣ ಕಂಡುಬರುವುದು.

37.ಕಣ್ಣು ನೋವು, ಕಣ್ಣುರಿ, ಕಣ್ಣು ಚುಚ್ಚುವಿಕೆ, ತಲೆನೋವು ಇವುಗಳ ನಿವಾರಣೆಗೆ ಪ್ರತಿದಿನ ಊಟದ ಜೊತೆ ಒಂದು ಈರುಳ್ಳಿ ಗಡ್ಡೆ ಸೇವಿಸಬೇಕು.

38.ಪ್ರತಿದಿನವೂ ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಸ್ನಾಯು ಮಂಡಲಕ್ಕೆ ಚೈತನ್ಯ ಒದಗಿ ನಿದ್ರೆ ವಿಶೇಷವಾಗಿ ಬರುತ್ತದೆ.

39.ಶುಂಠಿ ಸೇವಿಸುತ್ತಿದ್ದರೇ ಜಠರದ/ಕರುಳಿನ ಜಂತು ಹುಳುಗಳ ತೊಂದರೆ ನಿವಾರಣೆಯಾಗುತ್ತದೆ.

40.ತಲೆ ನೋವು ಇದ್ದಲ್ಲಿ ಹಸಿ ಶುಂಠಿಯನ್ನು ನೀರಿನಲ್ಲಿ ತೇದು, ಆ ಗಂಧವನ್ನು ಹಣೆಗೆ ಹಚ್ಚಿದ್ದಲ್ಲಿ ನೋವು ಶಮನವಾಗುತ್ತದೆ.

41.ಕಫ ನಿವಾರಣೆಗೆ: ಮೆಂತ್ಯೆ ಸೊಪ್ಪಿನ ಕಷಾಯಕ್ಕೆ ಒಂದು ಟೀ ಚಮಚ ಹಸಿ ಶುಂಠಿ ಕಷಾಯ ಬೆರೆಸಿ ಜೇನುತುಪ್ಪದೊಂದಿಗೆ ಸೇವಿಸಿದರೆ ಕಫ ನಿವಾರಣೆಯಾಗುತ್ತದೆ.

42.ಹಿಂಗು ಲೈಂಗಿಕ ಕ್ರಿಯೆಯನ್ನು ಪ್ರಚೋದಿಸಿ ನಪುಂಸಕತೆಯನ್ನು ನಿವಾರಿಸುತ್ತದೆ.

43.ಉಷ್ಣದ ತಲೆನೋವಿಗೆ ಹುಣಸೆಹಣ್ಣಿನ ಸಕ್ಕರೆ ಪಾನಕ ಸೇವಿಸಬೇಕು.

44.ಬಾಯಿಹುಣ್ಣಿದ್ದರೆ ಹುಣಸೆ ಎಲೆಗಳನ್ನು ಕುದಿಸಿ ಆ ನೀರಿನಿಂದ ಬಾಯಿ ಮುಕ್ಕಳಿಸಬೇಕು.

45.ಮುಖದಲ್ಲಿ ಮೊಡವೆಗಳು ಕಾಣಿಸಿಕೊಂಡರೆ ಮೆಣಸನ್ನು ನೀರಿನಲ್ಲಿ ತೇದು ಲೇಪಿಸಿಕೊಳ್ಳಬೇಕು.

46.ಗಾಯಗಳಾಗಿರುವ ಭಾಗವನ್ನು ಬೆಳ್ಳುಳ್ಳಿ ಬೇಯಿಸಿದ ನೀರಿನಲ್ಲಿತೊಳೆದರೆ ರೋಗಾಣುಗಳು ನಾಶ ಹೊಂದುವವು.

47.ರಕ್ತದೊತ್ತಡದಿಂದ ಬಳಲುತ್ತಿರುವವರು ದಿನವೂ ಬೆಳ್ಳುಳ್ಳಿಯನ್ನು ಸೇವಿಸಿದ್ದಲ್ಲಿ ರಕ್ತ ನೀರಾಗಿ ಒತ್ತಡ ಕಡಿಮೆಯಾಗುತ್ತದೆ.

48.ಕ್ಷಯರೋಗಿಗಳು ರೋಗ ಮುಕ್ತರಾದ ಮೇಲೆ ಎರಡು ವರ್ಷಗಳ ಕಾಲ ಪ್ರತಿದಿನವೂ ಬೆಳ್ಳುಳ್ಳಿ ಬಳಸಿದ್ದಲ್ಲಿ ರೋಗ ಮರುಕಳಿಸುವುದಿಲ್ಲ.

49.ಬೆಳ್ಳುಳ್ಳಿಯನ್ನು ಬೆಣ್ಣೆಯೊಂದಿಗೆ ಬೆರೆಸಿ ಕುರುವಿರುವ ಜಾಗಕೆ ಹಚ್ಚಿದರೆ ಗಾಯ ಒಣಗುತ್ತದೆ.

50.ಒಂದು ಟೀ ಚಮಚ ಬೆಳ್ಳುಳ್ಳಿ ರಸವನ್ನು ಅಷ್ಟೇ ಪ್ರಮಾಣದ ಜೇನುತುಪ್ಪದೊಂದಿಗೆ ಸೇವಿಸಿದ್ದಲ್ಲಿ ಹೊಟ್ಟೆಯ ಜಂತುಗಳು ನಾಶವಾಗುತ್ತದೆ.

51.ಉಬ್ಬಸವಿರುವವರು ಪ್ರತಿದಿನ ೩-೪ ಬೆಳ್ಳುಳ್ಳಿ ತೊಳೆಗಳನ್ನು ಹಲ್ಲಿನೊಂದಿಗೆ ಸೇವಿಸದರೆ ರೋಗ ಉಲ್ಬಣವಾಗುವುದಿಲ್ಲ.

52.ಬೆಳ್ಳುಳ್ಳಿಯನ್ನು ಬಿಡಿಸಿ ಚೂರು ಮಾಡಿ ಹಟ್ಟಿಯಲ್ಲ ಸುತ್ತಿ ಕಿವಿಗೆ ಇಟ್ಟುಕೊಂಡರೆ ಶೀತದಿಂದ ಕಿವುಡಾಗುವ ಭಯವಿರುವುದಿಲ್ಲ.

53.ಬೆಳ್ಳುಳ್ಳಿಯನ್ನು ಒಂದು ಬಟ್ಟಲು ನೀರಿನಲ್ಲಿ ಚೆನ್ನಾಗಿ ಬೇಯಿಸಿ ಆ ನೀರನ್ನು ಕುದಿದ್ದಲ್ಲಿ ಮುಟ್ಟಿನ ನೋವು ಗುಣವಾಗುವುದು.

54.ಬೆಳ್ಳುಳ್ಳಿಯನ್ನು ಪ್ರತಿದಿನ ಆಹಾರದಲ್ಲಿ ಸೇವಿಸಿದರೆ ಕೊಲೆಸ್ಟ್ರಾಲ್ ಕಡಿಮೆಯಾಗುವುದು.

55.ಅಜೀರ್ಣ ಮತ್ತು ಹೊಟ್ಟೆ ಉಬ್ಬರವಾದರೆ ಬಿಸಿ ಬೆಳ್ಳುಳ್ಳಿಯನ್ನು ತಿನ್ನಬೇಕು.

56.ಬೆಳ್ಳುಳ್ಳಿಯ ಸತತ ಸೇವನೆಯಿಂದ ಧೀರ್ಘಕಾಲದ ಕೆಮ್ಮು ನೆಗಡಿ ಗುಣವಾಗುವುದು.

57.ಮೆಂತ್ಯದ ಸೊಪ್ಪು ಸೇವಿಸುವುದರಿಂದ ಮೈಕೈ ನೋವು,ಬೆನ್ನು ನೋವು, ಸೊಂಟನೋವು ಗುಣವಾಗುವುದು.

58.ಮೆಂತ್ಯದ ಸೊಪ್ಪನ್ನು ಮೂಲಂಗಿಯೊಡನೆ ಬೆರೆಸಿ ಸೇವಿಸಿದರೆ ಜ್ಞಾಪಕ ಶಕ್ತಿ ಹೆಚ್ಚುವುದು.

59.ಆಮಶಂಕೆ ನಿವಾರಣೆಗೆ ಒಂದು ಟೀ ಚಮಚ ಮೆಂತ್ಯೆಯನ್ನು ಗಟ್ಟಿ ಮೊಸರಿನ ಜೊತೆ ಸೇವಿಸಬೇಕು.

60.ಅಂಗೈ ಅಂಗಾಲುಗಳಲ್ಲಿ ಉರಿ ಬಂದರೆ ಮೆಂತ್ಯೆಯನ್ನು ನೀರಿನಲ್ಲಿ ನೆನೆಹಾಕಿ ನುಣ್ಣಗೆ ಅರೆದು ಪಟ್ಟು ಹಾಕಿದರೆ ಶಮನವಾಗುತ್ತದೆ.

61.ನಾಲ್ಕು ಟೀ ಚಮಚ ಹಾಲಿಗೆ ಒಂದು ಚಿಟಿಕೆ ಅಡುಗೆ ಉಪ್ಪು ಸೇರಿಸಿ ಮುಖಕ್ಕೆ ಆ ಮಿಶ್ರಣವನ್ನು ಹಚ್ಚಿದ್ದಲ್ಲಿ ಸುಕ್ಕುಗಟ್ಟುವುದನ್ನು ನಿವಾರಿಸಬಹುದು.

Comments are closed.