ಕರಾವಳಿ

ಕಾಮಧೇನು ಸ್ವರೋಪಿ ಗೋವಿಗೆ ಉಪ್ಪನ್ನು ತಿನ್ನಿಸುವುದರ ಹಿಂದಿರುವ ಸತ್ಯ ಕಥೆ ತಿಳಿಯಿರಿ..!

Pinterest LinkedIn Tumblr

ನಾವು ಚಿಕ್ಕಂದಿನಿಂದಲೂ ಗೋವಿನ ಬಗ್ಗೆ ಕೇಳುತ್ತಲೇ ಇರುತ್ತೇವೆ. ಗೋವಿನ ಬಗ್ಗೆ ಅನೇಕ ಲೇಖನಗಳು ಬಂದಿವೆ. ಗೋವು ನಮಗೆ ತಾಯಿಯಿದ್ದಂತೆ, ಗೋವಿನಲ್ಲಿ ದೇವತೆಗಳು ನೆಲೆಸಿರುತ್ತಾರೆ. ಒಂದು ಗೋವನ್ನು ಪೂಜಿಸಿದರೆ ಎಲ್ಲಾ ದೇವಾನು ದೇವತೆಗಳನ್ನು ಪೂಜಿಸಿದಂತೆ ಎಂದು ಪಂಡಿತರು ಹೇಳುತ್ತಾರೆ. ಹಾಲು ಅಮೃತವೆಂತಲೂ ಹೇಳುತ್ತಾರೆ. ಗೋವಿಗೆ ಕೆಲವರು, ಕಡಲೆಯನ್ನು ,ಬೆಲ್ಲ, ಹುಲ್ಲು, ರೊಟ್ಟಿ ತಿನ್ನಿಸುತ್ತಾರೆ. ಇದೆಲ್ಲವೂ ಸರಿ…ಆದರೆ…ಆ ಒಂದನ್ನು ತಿನ್ನಿಸಿದರೆ ಬಹಳ ಒಳ್ಳೆಯದಂತೆ.

ಹೌದು. ಗೋವಿಗೆ ಉಪ್ಪನ್ನು ತಿನ್ನಿಸಬೇಕಂತೆ. ಉಪ್ಪು ತಿಂದವರು ವಿಶ್ವಾಸ ತೋರಿಸಿದರೂ ತೋರಿಸದಿದ್ದರೂ…ಗೋವು ಮಾತ್ರ ಉಪ್ಪಿನ ಋಣ ತೀರಿಸುತ್ತದಂತೆ. ಕಾಮಧೇನು ರೂಪದಲ್ಲಿ ಉಪ್ಪಿನ ಋಣ ತೀರಿಸುತ್ತದೆಂದು ಪುರಾಣಗಳು ಹೇಳುತ್ತವಂತೆ. ಬಹಳಷ್ಟು ಶಕ್ತಿಯುತವಾದ ಪ್ರಭಾವ ಬೀರುತ್ತದೆಂದು, ಹೀಗೆ ಗೋವಿಗೆ ಉಪ್ಪು ತಿನ್ನಿಸಿ ಬಹಳಷ್ಟು ಮಂದಿ ಸುಖ ಜಿವನ ನಡೆಸುತ್ತಿದ್ದ್ದಾರಂತೆ. ಮಿತವಾಗಿ ಗೋವಿಗೆ ಉಪ್ಪನ್ನು ತಿನ್ನಿಸಬೇಕಂತೆ. ಗೋಶಾಲೆಯಲ್ಲಾಗಲೀ, ದೇವಾಲಯದ ಮುಂದಾಗಲೀ ಗೋವು ಕಾಣಿಸಿದಲ್ಲಿ, ರೊಟ್ಟಿಯಲ್ಲಿ ಸ್ವಲ್ಪ ಉಪ್ಪನ್ನಿಟ್ಟು ತಿನ್ನಿಸಬೇಕಂತೆ.

ಗೋವಿನ ಶರೀರಕ್ಕೆ ಉಪ್ಪು ಬಹಳಷ್ಟು ಉಪಯೋಗಕರ. ಉಪ್ಪನ್ನು ತಿನ್ನಿಸುವುದರಿಂದ ಗೋವಿಗೆ ಯಾವುದೇ ನಷ್ಟವುಂಟಾಗುವುದಿಲ್ಲ. ನಮಗೆ ಮಾತ್ರ ಲಾಭವೇ ಉಂಟಾಗುತ್ತದೆ. ಸಾಲದ ಬಾಧೆಯಿಂದ ನರಳುತ್ತಿರುವವರು, ನಿರುದ್ಯೋಗಿಗಳು ಗೋವಿಗೆ ಉಪ್ಪನ್ನು ತಿನ್ನಿಸಿದರೆ… ತಿನ್ನಿಸಿದವರಿಗೆ ಎಲ್ಲಾ ಕಷ್ಟಗಳು ನಿವಾರಣೆಯಾಗಿ ಪ್ರಶಾಂತವಾದ ಜೀವನ ನಡೆಸುತ್ತಿದ್ದಾರೆ.

Comments are closed.