ದೇಹದ ಮೇಲಿನ ಹುಟ್ಟುಮಚ್ಚೆಗಳನ್ನು ಅವಲಂಭಿಸಿ ಯಾರು ಎಂತಹವರು, ಯಾರ ವ್ಯಕ್ತಿತ್ವ, ಮನಸ್ಥಿತಿ ಹೇಗಿರುತ್ತದೋ ತಿಳಿದುಕೊಳ್ಳುವ ಸಾಮುದ್ರಿಕ ಶಾಸ್ತ್ರದ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತೇ ಇರುತ್ತದೆ. ದೇಹದ ಮೇಲೆ ವಿವಿಧ ಜಾಗಗಳಲ್ಲಿ ಇರುವ ಮಚ್ಚೆಗಳನ್ನು ಅವಲಂಭಿಸಿ ವ್ಯಕ್ತಿ ಗುಣಗುಣಾಗಳನ್ನು, ಆತನ ಸ್ಥಿತಿ, ಇತರೆ ವಿವರಗಳನ್ನು ಹೇಳುತ್ತಾರೆ. ಯಾವ ಭಾಗದಲ್ಲಿ ಹುಟ್ಟುಮಚ್ಚೆ ಇದ್ದರೆ ಯಾವ ರೀತಿಯ ಪ್ರತಿಫಲ ಇರುತ್ತದೆ ಎಂಬುದನ್ನೂ ತಿಳಿಸುತ್ತಾರೆ. ಈಗ ಸಾಮುದ್ರಿಕ ಶಾಸ್ತ್ರದ ಪ್ರಕಾರ ಯಾವುದೇ ವ್ಯಕ್ತಿಯ ರೊಮ್ಯಾಂಟಿಕ್ ಲೈಫ್, ಪ್ರೇಮ ಜೀವನ ಸಹ ಹೇಗಿರುತ್ತದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಅದು ಹೇಗೆಂದರೆ….
1. ಕೆಳಗಿನ ತುಟಿ ಮೇಲೆ ಹುಟ್ಟುಮಚ್ಚೆ ಇರುವವರು ಬಹಳ ರೊಮ್ಯಾಂಟಿಕ್ ಆಗಿ ಇರುತ್ತಾರೆ. ಇವರು ಬಹಳ ಶೀಘ್ರವಾಗಿ ಪ್ರೀತಿಯಲ್ಲಿ ಬೀಳುತ್ತಾರೆ. ಅಷ್ಟೇ ಅಲ್ಲದೆ, ಅನೇಕ ಬಾರಿ ಲವ್‌ನಲ್ಲಿ ಬೀಳುತ್ತಾರೆ. ಹೆಚ್ಚಿನ ಮಂದಿಯನ್ನು ಪ್ರೀತಿಸುತ್ತಾರಂತೆ. ಶೃಂಗಾರ ಸಾಮರ್ಥ್ಯ ಸಹ ಹೆಚ್ಚಾಗಿಯೇ ಇರುತ್ತದಂತೆ.
2. ಬಲ ಕೆನ್ನೆ ಮೇಲೆ ಹುಟ್ಟುಮಚ್ಚೆ ಇರುವವರು ಇತರರನ್ನು ಹಾಗೆಯೇ ಆಕರ್ಷಿಸುತ್ತಾರಂತೆ. ಶ್ರೀಮಂತರಾಗುತ್ತಾರಂತೆ. ಪ್ರೀತಿಯಲ್ಲಿ ಸಫಲರಾಗುತ್ತಾರಂತೆ. ಆದರೆ ಕೆಲವು ತೊಂದರೆಗಳನ್ನೂ ಎದುರಿಸುತ್ತಾರಂತೆ.
3. ಗಡ್ಡದ ಮೇಲೆ ಎಡಗಡೆ ಹುಟ್ಟುಮಚ್ಚೆ ಇದ್ದರೆ ಇವರು ಯಾವುದೇ ತರಹದವರಾದರೂ ತಮ್ಮ ಕಡೆಗೆ ಸೆಳೆದುಕೊಳ್ಳುವ ಸಾಮರ್ಥ್ಯ ಉಳ್ಳವರಾಗಿರುತ್ತಾರಂತೆ. ಬಹಳಷ್ಟು ಮಂದಿ ಇಂತಹವರ ಸಾಂಗತ್ಯವನ್ನು ಬಯಸುತ್ತಾರಂತೆ. ಆದರೆ ಒಬ್ಬರ ಬಳಿ ಮಾತ್ರ ಇವರು ತುಂಬಾ ಆತ್ಮೀಯವಾಗಿ ಇರುತ್ತಾರಂತೆ.
4. ಎಡಗಿವಿ ಮೇಲೆ ಮಚ್ಚೆ ಇದ್ದರೆ ಅವರ ವೈವಾಹಿಕ ಜೀವನ ಚೆನ್ನಾಗಿರುತ್ತದಂತೆ. ದಂಪತಿಗಳ ನಡುವೆ ಸಮಸ್ಯೆಗಳು ಬರಲ್ಲವಂತೆ. ಬಂದರೂ ಹೊಂದಿಕೊಂಡು ಹೋಗುತ್ತಾರಂತೆ. ಬಹಳ ಅನ್ಯೋನ್ಯವಾಗಿ ಸಂಸಾರ ಮಾಡುತ್ತಾರೆ. ಆದರೆ ಎರಡು ಕಿವಿಗಳ ಮೇಲೆ ಹುಟ್ಟುಮಚ್ಚೆ ಇದ್ದರೆ ಮಾತ್ರ ವೈವಾಹಿಕ ಜೀವನ ಯಾವುದೇ ಕಾರಣಕ್ಕೂ ಚೆನ್ನಾಗಿರಲ್ಲ. ಎಲ್ಲವೂ ಸಮಸ್ಯೆಗಳೇ ಬರುತ್ತವಂತೆ.
5. ಬಲಗಡೆ ಕಣ್ಣಿನ ಕೆಳಗೆ ಹುಟ್ಟುಮಚ್ಚೆ ಇದ್ದರೆ ಇವರು ಬಹಳ ರೊಮ್ಯಾಂಟಿಕ್ ವ್ಯಕ್ತಿಗಳಾಗಿರುತ್ತಾರಂತೆ. ಒಬ್ಬರಿಗಿಂತಲೂ ಹೆಚ್ಚು ಮಂದಿಯೊಂದಿಗೆ ಇವರು ಲವ್‌ನಲ್ಲಿ ಬೀಳುತ್ತಾರಂತೆ.
6. ಎಡಗೈ ಭುಜದ ಮೇಲೆ ಹುಟ್ಟುಮಚ್ಚೆ ಇದ್ದರೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಇರುತ್ತವಂತೆ. ಅದೇ ಬಲಗೈ ಭುಜದ ಮೇಲೆ ಹುಟ್ಟುಮಚ್ಚೆ ಇದ್ದರೆ ದಾಂಪತ್ಯ ಜೀವನ ಸುಖಮಯವಾಗಿ ಇರುತ್ತದಂತೆ.
7. ಎಡಗಣ್ಣಿನಲ್ಲಿ ಬಿಳಿ ಭಾಗದ ಮೇಲೆ ಹುಟ್ಟುಮಚ್ಚೆ ಇದ್ದರೆ ಇವರ ದಾಂಪತ್ಯ ಜೀವನ ಎಲ್ಲಾ ಸಮಸ್ಯೆಗಳಿಂದ ಕೂಡಿರುತ್ತದಂತೆ. ಅದೇ ಬಲಗಣ್ಣಿನ ಬಿಳಿ ಭಾಗದ ಮೇಲೆ ಹುಟ್ಟುಮಚ್ಚೆ ಇದ್ದರೆ ಇವರ ಜೀವನ ಅನ್ಯೋನ್ಯವಾಗಿ ಇರುತ್ತದಂತೆ. ಸಂಗಾತಿಯನ್ನು ಇವರು ಹೆಚ್ಚಾಗಿ ಪ್ರೇಮಿಸುತ್ತಾರಂತೆ.
8. ಬಲಗಣ್ಣು ಹುಬ್ಬಿನ ಮೇಲೆ ಹಣೆ ಮೇಲೆ ಹುಟ್ಟುಮಚ್ಚೆ ಇದ್ದರೆ ಇವರು ತಮ್ಮ ಲೈಫ್ ಪಾರ್ಟ್‌ನರ್ ವಿಷಯದಲ್ಲಿ ಬಹಳ ನಂಬಿಕೆಯಿಂದ ಇರುತ್ತಾರಂತೆ. ಜೀವನ ಸಂಗಾತಿಯನ್ನು ಇವರು ಚೆನ್ನಾಗಿ ಪ್ರೀತಿಸುತ್ತಾರಂತೆ. ಆದರೆ ಕೆಲವು ಸಲ ತೊಂದರೆಗಳು ತಲೆಯೆತ್ತುತ್ತವಂತೆ.
Comments are closed.