ಹಳ್ಳಿಗಳಲ್ಲಿ ಕಂಡ್ ಕಂಡಲ್ಲಿ ಇರುವ, ನಗರಗಳಲ್ಲಿ ಕಷ್ಟ ಪಟ್ಟು ಬೆಳೆಸಬೇಕಾದ ಈ ತುಂಬೆಯಲ್ಲಿ ಸಾಕಷ್ಟು ಔಷಧೀಯ ಗುಣಗಳೂ ಇವೆ. ಯಾವ ಔಷಧೀಯ ಗುಣಗಳಿವೆ ಇದರಲ್ಲಿ?
ದೇಹದ ಯಾವ ಭಾಗದಲ್ಲಾದರು ಗಾಯವಾಗಿದ್ದರೆ ತುಂಬೆ ಗಿಡವನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಕಷಾಯ ಮಾಡಿ. ಈ ಕಷಾಯವನ್ನು ಸೋಸಿ ನಂತರ ಅದರಿಂದ ಗಾಯವನ್ನು ತೊಳೆದರೆ ಗಾಯ ಬೇಗ ಮಾಯುತ್ತದೆ .ಬಿಳಿಸ್ರಾವ ಹೆಚ್ಚಾಗಿ ಆಗುತ್ತಿದ್ದರೆ ತುಂಬೆ ಎಲೆಗಳನ್ನು ಬೇಯಿಸಿ ಅನ್ನದ ಜತೆ ಸೇವಿಸಿದರೆ ಬಿಳಿಸ್ರಾವ ಕಡಿಮೆಯಾಗುತ್ತದೆ.
ಚರ್ಮದಲ್ಲಿ ತುರಿಕೆ ಅಲರ್ಜಿ ಆಗಿದ್ದರೆ ಚರ್ಮದ ಮೇಲೆ ತುಂಬೆ ಎಲೆಯ ಪೇಸ್ಟ್ ಲೇಪಿಸಿದರೆ ಅಲರ್ಜಿ ಕಡಿಮೆಯಾಗುತ್ತದೆ.ಹೆಚ್ಚಾಗಿ ಬಾಯಾರಿಕೆ ಆಗುತ್ತಿದ್ದರೆ ತುಂಬೆ ಹೂಗಳನ್ನು ಒಂದು ಲೋಟ ನೀರಲ್ಲಿ ಕುದಿಸಿ ಅರ್ಧ ಲೋಟಕ್ಕೆ ಇಳಿಸಿ. ಈ ಕಷಾಯವನ್ನು ದಿನಕ್ಕೆ 2 ರಿಂದ 3 ಬಾರಿ ಸೇವಿಸಿದರೆ ಬಾಯಾರಿಕೆ ನಿವಾರಣೆಯಾಗುತ್ತದೆ.
ಮಕ್ಕಳ ಹೊಟ್ಟೆಯಲ್ಲಿ ಹುಳುವಾಗಿದ್ದರೆ ತುಂಬೆ ಹೂವು ಮತ್ತು ಎಲೆಯ ರಸಕ್ಕೆ ಜೇನುತುಪ್ಪ ಸೇರಿಸಿ ಕುಡಿಸಿದರೆ ಹೊಟ್ಟೆ ಹುಳು ನಿವಾರಣೆಯಾಗುತ್ತದೆ.
ತುಂಬೆ ಗಿಡವನ್ನು ಬೇರು ಸಹಿತ ನೀರಲ್ಲಿ ಹಾಕಿ ಕಷಾಯ ಮಾಡಿ ಅದಕ್ಕೆ ಸೈಂಧವ ಉಪ್ಪು ಹಾಕಿ ಸೇವಿಸಿದರೆ ಜೀರ್ಣ ಶಕ್ತಿ ಹೆಚ್ಚಾಗುತ್ತದೆ.ತುಂಬೆ ಗಿಡವನ್ನು ಒಣಗಿಸಿ ಪುಡಿ ಮಾಡಿ. ಆ ಪುಡಿಗೆ ಬೇವಿನ ಪುಡಿ ಸೇರಿಸಿ ನೀರಲ್ಲಿ ಹಾಕಿ ಕಷಾಯ ತಯಾರಿಸಿ ನಿಯಮಿತವಾಗಿ ಸೇವಿಸಿದರೆ ರಕ್ತ ಶುದ್ಧಿಯಾಗುತ್ತದೆ.
ಋುತುಸ್ರಾವ ಸಮಯದಲ್ಲಿ ಅತಿ ಹೆಚ್ಚು ರಕ್ತಸ್ರಾವ ಆಗುತ್ತಿದ್ದರೆ ತುಂಬೆ ಎಲೆ ಪೇಸ್ಟ್‌ಗೆ ನಿಂಬೆರಸ ಮತ್ತು ಎಳ್ಳೆಣ್ಣೆ ಸೇರಿಸಿ ಕಲಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ರಕ್ತಸ್ರಾವ ಕಡಿಮೆಯಾಗುತ್ತದೆ. ಪದೇ ಪದೆ ಜ್ವರ ಬರುತ್ತಿದ್ದರೆ ತುಂಬೆ ಎಲೆ ರಸಕ್ಕೆ ಕಾಳುಮೆಣಸಿನ ಪುಡಿ ಸೇರಿಸಿ ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ.
-ತುಂಬೆ ಎಲೆ ರಸಕ್ಕೆ ಕಾಳುಮೆಣಸಿನ ಪುಡಿ ಸೇರಿಸಿ ಸೇವಿಸಿದರೆ ಆಗಾಗ ಕಾಡೋ ಜ್ವರ ಅತ್ಯುತ್ತಮ ಔಷಧಿಯಾಗಬಲ್ಲದು.
– ಚೆನ್ನಾಗಿ ಒಣಗಿಸಿದ ತುಂಬೆ ಗಿಡವನ್ನು ಪುಡಿ ಮಾಡಿ, ಕಷಾಯ ಮಾಡಿಕೊಂಡು ದೇಹದ ಮೇಲಿನ ಗಾಯವನ್ನು ತೊಳೆದರೆ, ಆ್ಯಂಟಿ ಸೆಪ್ಟಿಕ್ ಕ್ರೀಮ್‌ನಂತೆ ಕಾರ್ಯ ನಿರ್ವಹಿಸುತ್ತದೆ.
-ತುಂಬೆ ಎಲೆ ಪೇಸ್ಟ್ ಮಾಡಿ, ಅಲರ್ಜಿಯಾದೆಡೆ ಹಚ್ಚಿದರೆ ಉತ್ತಮ ಔಷಧಿ.
-ಪಿರಿಯಡ್ಸ್‌ನಲ್ಲಿ ಅತೀವ ರಕ್ತ ಸ್ರಾವವಾಗುತ್ತಿದ್ದರೆ, ತುಂಬೆ ಎಲೆ ಪೇಸ್ಟ್‌ನೊಂದಿಗೆ ನಿಂಬೆರಸ, ಎಳ್ಳೆಣ್ಣೆ ಸೇರಿಸಿ, ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
-ಎಷ್ಟು ನೀರು, ಜ್ಯೂಸ್ ಕುಡಿದರೂ ದಾಹ ಕಡಿಮೆಯಾಗದೇ ಹೋದಲ್ಲಿ, ತುಂಬಿ ಹೂವಿನ ಕಷಾಯ ಮಾಡಿಕೊಂಡು, ಆಗಾಗ ಕುಡಿಯುತ್ತಿದ್ದರೆ ಸಮಸ್ಯೆ ನಿವಾರಣೆಯಾಗುತ್ತದೆ.
-ಜೇನು ತುಪ್ಪದೊಂದಿಗೆ ತುಂಬೆ ಹೂ ರಸ ಕುಡಿಸಿದರೆ, ಮಕ್ಕಳ ಹೊಟ್ಟೆ ಹುಳ ತೊಲಗುತ್ತದೆ.
-ತುಂಬೆಯ ಬೇರಿನೊಂದಿಗೆ ನೀರಲ್ಲಿ ಕುದಿಸಿದ ಕಷಾಯವನ್ನು ಸೈಂಧವ ಲವಣದೊಂದಿಗೆ ಕುಡಿದರೆ, ಜೀರ್ಣ ಶಕ್ತಿ ಹೆಚ್ಚುತ್ತದೆ.
-ತುಂಬೆ ಗಿಡವನ್ನು ಒಣಿಗಿಸಿ, ಅದರ ಪುಡಿ ಕಷಾಯವನ್ನು ಆಗಾಗ ಸೇವಿಸುತ್ತಿದ್ದರೆ, ರಕ್ತ ಶುದ್ಧಿಯಾಗುತ್ತದೆ.
Comments are closed.