ಕುಂದಾಪುರ: ಕಳೆದ ಎರಡು ದಿನದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಸೋಮವಾರ ಕುಬ್ಜಾ ನದಿ ಕಮಲಶಿಲೆಯ ದೇವಸ್ಥಾನ ಪ್ರವೇಶ ಮಾಡಿದ್ದು, ಮಂಗಳವಾರ ಸಂಜೆ ದೇವಸ್ಥಾನಕ್ಕೆ ಬಂದ ಕುಬ್ಜಾ ನದಿ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿಗೆ ತೀರ್ಥ ಸ್ನಾನ ಮಾಡಿಸಿದೆ.
ಕುಬ್ಜಾ ನದಿ ದೇವಿ ಪಾದ ತೊಳೆದಿದ್ದರಿಂದ ದೇವಸ್ಥಾನದ ಅರ್ಚಕರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಪ್ರತೀ ವರ್ಷ ಕುಬ್ಜಾ ನದಿ ದೇವಸ್ಥಾನ ಪ್ರವೇಶಿಸಿ ದೇವಿ ಪಾದ ತೊಳೆಯುತ್ತಾಳೆ ಎನ್ನೋದು ಭಕ್ತರ ನಂಬಿಕೆ ಜೊತೆ ವಾಡಿಕೆಯೂ ಹೌದು. ಸಂಜೆ ದೇವಸ್ಥಾನ ಪ್ರವೇಶಿಸಿದ ನದಿ ನೀರಿನ ಹಿನ್ನೆಲೆಯಲ್ಲಿ ದೇವರ ದರ್ಶನ ಭಕ್ತರು ಪಡೆದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.