ಕನ್ನಡಿಯ ಮುಖ್ಯ ಕೆಲಸವೆಂದರೆ ತನ್ನ ಮುಂದೆ ಇರುವ ಬಿಂಬವನ್ನು ಪ್ರತಿಬಿಂಬಿಸುವುದು ಅಲ್ಲವೇ ಕನ್ನಡಿ ಬಿಂಬವನ್ನು ಪ್ರತಿ ಬಿಂಬಿಸುವು ದಿಲ್ಲದೆ ವೈಜ್ಞಾನಿಕವಾಗಿಯೂ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ ಕೇವಲ ಮನುಷ್ಯರು ಆನೆ ಇನ್ನು ಕೆಲವೇ ಕೆಲವು ಜೀವಿಗಳು ಮಾತ್ರ ಪ್ರತಿಬಿಂಬವನ್ನು ಗುರುತಿಸಬಲ್ಲವು.
ಹಿಂದಿನ ಶಾಸ್ತ್ರಗಳಲ್ಲಿ ಕನ್ನಡಿ : ಹೊಡೆದ ಕನ್ನಡಿಯಲ್ಲಿ ಮುಖವನ್ನು ನೋಡಿಕೊಳ್ಳಬಾರದು ಮುಖ ನೋಡಿಕೊಂಡರೆ ಏಳು ವರ್ಷ ಕಷ್ಟ ಬರುತ್ತದೆ ಎಂಬ ಮೂಢನಂಬಿಕೆಯೂ ಸಹಾಯದ, ಕನ್ನಡಿ ಲಕ್ಷ್ಮಿ ದೇವತೆಯ ಪ್ರತಿರೂಪ. ಕನ್ನಡಿ ಲಕ್ಷ್ಮಿ ಇಬ್ಬರೂ ಚಂಚಲ ಒಂದು ವ್ಯಕ್ತಿ ಯ ಹಲವು ಮುಖಗಳು ಕಾಣುತ್ತವೆ ಅಲ್ಲಿ ಲಕ್ಷ್ಮಿ ನೆಲೆಸಿರುವುದು ಇಲ್ಲ ಎಂಬ ಮೂಢನಂಬಿಕೆ ಇದೆ, ಕನ್ನಡಿಯೋ ನೋಡುಗನ ಆತ್ಮವನ್ನು ಸೆರೆಹಿಡಿಯುತ್ತದೆ ಎಂದು ನಂಬಲಾಗಿದೆ, ದೇವತೆಗಳು ಮತ್ತು ರಾಕ್ಷಸರು ತಮ್ಮ ರೂಪವನ್ನು ಒಂದು ಪ್ರಕಾರದಿಂದ ಮತ್ತೊಂದು ಪ್ರಕಾರಕ್ಕೆ ಬದಲಿಸುತ್ತಿದ್ದರು ಎನ್ನುವ ಮೂಢನಂಬಿಕೆಯಿಂದ ಒಡೆದ ಕನ್ನಡಿಯನ್ನು ಮನೆಯ ಒಳಗೆ ಇಟ್ಟರೆ ಮನೆಮಂದಿಗೆಲ್ಲಾ ಇದೇ ರೀತಿಯ ಸಮಸ್ಯೆಗಳು ಬರಬಹುದು ಎಂದು ನಂಬಿಕೆ ಇರುವುದರಿಂದ ಒಡೆದ ಕನ್ನಡಿಯನ್ನು ಮನೆಯಲ್ಲಿ ಇಟ್ಟುಕೊಳ್ಳಲು ಬಯಸುವುದಿಲ್ಲ.
ವೈಜ್ಞಾನಿಕ ಕಾರಣಗಳು : ಕನ್ನಡಿ ಒಡೆದಾಗ ಕನ್ನಡಿಯ ಸಣ್ಣ ಗಾಜಿನ ತುಣುಕುಗಳು ಕಾಲಿಗೆ ಚುಚ್ಚಿಕೊಂಡು ಗಾಯವಾಗಬಹುದು ಮತ್ತು ಸಣ್ಣ ಗಾಜಿನ ತುಂಡುಗಳನ್ನು ಕಾಲಿನಿಂದ ಹೊರ ತೆಗೆಯಲು ಕಷ್ಟವಾಗುವುದಲ್ಲದೆ ರಕ್ತಸ್ರಾವವಾಗಬಹುದು.
ಕನ್ನಡಿಯನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಿಲ್ಲದವರು ಜೀವನವನ್ನು ಹೇಗೆ ತಾನೇ ನಿಭಾಯಿಸುತ್ತಾರೆ ಅನ್ನುವ ಕಾರಣದಿಂದ ಏಕಾಗ್ರತೆಯನ್ನು ಹೆಚ್ಚಿಸಲು ಕನ್ನಡಿಯನ್ನು ಬಳಸುತ್ತಾರೆ.
ಹಿಂದಿನ ಕಾಲದಲ್ಲಿ ಕನ್ನಡಿಯನ್ನು ತಯಾರಿಸುವುದು ತುಂಬಾ ಕಷ್ಟವಾಗಿತ್ತು ಮರಳಿನಿಂದ ಗಾಜಿನ ಅಂಶಗಳನ್ನು ತೆಗೆದು ಅದರಿಂದ ಗಾಜನ್ನು ಅಂದರೆ ಕನ್ನಡಿಯನ್ನು ತಯಾರಿಸುವುದು ಕಷ್ಟವಾಗಿತ್ತು ಮತ್ತು ದುಬಾರಿಯಾಗಿತ್ತು ಅನ್ನುವ ಕಾರಣದಿಂದ ಕನ್ನಡಿಯನ್ನು ನಾಜೂಕಾಗಿ ಬಳಸುತ್ತಿದ್ದರು.
Comments are closed.