ಕರಾವಳಿ

ಅಂಗನವಾಡಿ ಮಕ್ಕಳೊಂದಿಗೆ ಬೆರೆತು ಖುಷಿಪಟ್ಟ ಉಡುಪಿ ಡಿಸಿ ಜಿ.ಜಗದೀಶ್

Pinterest LinkedIn Tumblr

ಉಡುಪಿ: ಕುಂದಾಪುರ ತಾಲೂಕು ಹೊಂಬಾಡಿ-ಮಂಡಾಡಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಗುರುವಾರ ಅನಿರೀಕ್ಷಿತ ಭೇಟಿ ನೀಡಿದ್ದು ಅಂಗನವಾಡಿಯ ಸ್ವಚ್ಛತೆ, ಆಹಾರದ ಗುಣಮಟ್ಟ ಪರಿಶೀಲನೆ ನಡೆಸಿದರು.

ಉಡುಪಿ ಡಿಸಿ ಜಿ. ಜಗದೀಶ್ ಅವರು ಮಕ್ಕಳ ಆಟ-ಪಾಠದ ಬಗ್ಗೆ ತಿಳಿದು ಖುಷಿಪಟ್ಟರು. ಎಬಿಸಿಡಿ, ಅ.ಆ.ಇ.ಈ ಬಗ್ಗೆಯೂ ಮಕ್ಕಳ ಅಕ್ಷರ ಜ್ಞಾನದ ಕುರಿತು ಒಂದಷ್ಟು ಹೊತ್ತು ಶಿಕ್ಷಕರಂತೆ ಇದ್ದ ಡಿಸಿ ಮಕ್ಕಳೊಂದಿಗೆ ಕುಳಿತರು. ತನ್ನ ಕಾರ್ಯವ್ಯಾಪ್ತಿಯಲ್ಲಿ ಸದಾ ವಿಭಿನ್ನವಾಗಿ ಜನಸ್ನೇಹಿಯಾಗಿ ಉಡುಪಿ ಡಿಸಿ ಅವರು ಜನರ ಶಹಬ್ಬಾಸ್ ಗಿರಿಗೆ ಪಾತ್ರರಾಗಿದ್ದಾರೆ.

ಅಂಗನವಾಡಿ ಮಕ್ಕಳೊಂದಿಗೆ ಮಗುವಾಗಿದ್ದೆ ಎಂದು ಡಿಸಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Comments are closed.