ಕರಾವಳಿ

ಸತ್ತ ವ್ಯಕ್ತಿಯ ಮನೆಯಲ್ಲಿ ಒಲೆ ಹಚ್ಜಬಾರದು ಅಡುಗೆ ಮಾಡಬಾರದು ಯಾಕೆ?

Pinterest LinkedIn Tumblr

ಸಾವಾದ ಮನೆಯಲ್ಲಿ ಏಕೆ ಒಲೆ ಹಚ್ಚುವುದಿಲ್ಲ ಕಾರಣ ಇಲ್ಲಿದೆ ಓದಿ. ನಮ್ಮ ಹಿರಿಯರು ಆಚರಿಸಿಕೊಂಡು ಬರುವ ಆಚರಣೆಗಳು ಆಚಾರ ವಿಚಾರಗಳು ಕೆಲವೊಮ್ಮೆ ವಿಚಿತ್ರ ಎನಿಸಿದರೂ ಅದರ ಹಿಂದೆ ಸೂಕ್ತ ಕಾರಣಗಳಿರುತ್ತವೆ. ಮನುಷ್ಯನ ಜನನದಿಂದ ಹಿಡಿದು ಮರಣದವರೆಗೂ ಹಲವಾರು ಬಗೆಯ ಆಚಾರ ವಿಚಾರಗಳನ್ನು ಮಾಡಿಕೊಂಡು ಬರ್ತಾಇದೇವೆ. ಆದರೆ ಕೆಲವೊಮ್ಮೆ ಅಂತಹ ಆಚರಣೆಗಳು ಮೂಢನಂಬಿಕೆ ಎನಿಸಬಹುದು ಆದರೆ ಅದರ ಹಿಂದೆ ನಮಗೆ ತಿಳಿಯದೆ ಏನೋ ಒಂದು ಅರ್ಥ ಇರುತ್ತದೆ. ಹಾಗಂತ ಪ್ರತಿಯೊಂದು ಮೂಢನಂಬಿಕೆಯನ್ನು ನಂಬಲೇಬೇಕು ಅಂತ ಹೇಳುತ್ತಿಲ್ಲ ಒಂದೊಂದು ವಿಚಾರವು ಅವರವರ ನಂಬಿಕೆಗೆ ಬಿಟ್ಟಿದ್ದು ಆದ್ದರಿಂದ ನೀವು ನಂಬುವುದಾದರೆ ಅದು ಸತ್ಯ ನಂಬದಿದ್ದರೆ ಅದು ಅಸತ್ಯ. ಇನ್ನು ಈ ವಿಚಾರ ನಮಗೆ ಸಾಮಾನ್ಯವಾಗಿ ಗೊತ್ತಿರುತ್ತದೆ.

ಸತ್ತ ವ್ಯಕ್ತಿಯ ಮನೆಯಲ್ಲಿ ಒಲೆ ಹಚ್ಜಬಾರದು ಅಡುಗೆ ಮಾಡಬಾರದು ಎನ್ನುವುದು ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಕೆಲವರ ಸಂಪ್ರದಾಯದಲ್ಲಿ 3 ದಿನ 7 ದಿನ 11 ದಿನ ಹೀಗೆ ದಿನಗಳ ಶೋಕಾಚರಣೆಯನ್ನು ಮಾಡುತ್ತಾರೆ. ಮನೆಯಲ್ಲಿ ಒಬ್ಬ ವ್ಯಕ್ತಿ ಅಸುನೀಗಿದ್ದಾರೆ ಅನ್ನೋ ಕಾರಣಕ್ಕೆ ಮನೆ ಮಂದಿ ಉಪವಾಸ ಇರಬೇಕು ಅಂತ ಏನು ಇಲ್ಲ ಆದರೆ ಮನೆಯವರು ಅಡುಗೆ ಮಾಡುವ ಹಾಗಿಲ್ಲ ಬೇರೆ ಮನೆಯವರು ಅಡುಗೆ ಮಾಡಿದ್ದನ್ನು ನಾವು ತಿನ್ನಬಹುದು ಅಂದರೆ ಇದರ ಹಿಂದಿರುವ ಅರ್ಥ ಮನೆಯವರು ಅಡುಗೆ ಮಾಡುವುದರಿಂದ ಮೃತ ದೇಹದ ಜೊತೆಗೆ ಅದರ ಆತ್ನವು ಸತ್ತುಹೋಗುತ್ತದೆ ಅಂತ ಕೆಲವು ನಂಬಿಕೆಗಳು ಈಗಲೂ ಸಹ ಇವೆ. ಅದು ಮೂಢನಂಬಿಕೆ ಅಷ್ಟೇ ವಾಸ್ತವವಾಗಿ ಹೀಗೆ ಮನೆಯವರು ಅಡುಗೆ ಮಾಡಬಾರದು ಎಂಬುದಕ್ಕೆ ಕಾರಣ ಅವರಿಗೆ ದುಕ್ಕಿಸಲು ಹಾಗು ಮೃತರಿಗೆ ಸಂತಾಪ ವ್ಯಕ್ತಪಡಿಸಲು ಸ್ವಲ್ಪ ಸಮಯ ಸಿಗಲಿ ಅಂತ ಹೀಗೆ ಮಾಡುತ್ತಾರೆ.

ಬೇರೆಯವರು ಅಡುಗೆ ಮಾಡಿಕೊಂಡು ಆ ಮನೆಯವರಿಗೆ ಬಡಿಸುವ ಮೂಲಕ ನಿಮ್ಮ ಮನೆಯಲ್ಲಿ ಒಬ್ಬರು ಹೊರಟು ಹೋಗಿದ್ದರು ನಿಮ್ಮ ಜೊತೇಲಿ ನಾವಿದ್ದೆವಿ ಎಂದು ಒಂದು ಸಂಕೇತವಾಗಿ ಮಾಡುತ್ತಾರೆ. 11 ದಿನದ ಸೂತಕದ ಆಶಯವೂ ಸಹ ಇದೆ ಆಗಿರುತ್ತದೆ. ಇದು ಕೇವಲ ಮಡಿ ಮೈಲಿಗೆಗೆ ಸಂಬಂಧಿಸಿದ್ದಲ್ಲ ಬದಲಿಗೆ ಮೃತರ ಸಮೀಪದ ಸಂಬಂದಿಗಳಿಗೆ ದುಃಖ ನಿಗಿಸಿಕೊಳ್ಳಲು ಒಂದಷ್ಟು ಸಮಯಾವಕಾಶ ನೀಡಲು ಇರೀತಿ ಮಾಡಲಾಗುತ್ತದೆ. ಸ್ನೇಹಿತರೆ ಒಂದೊಂದು ಧರ್ಮದಲ್ಲಿ ಒಂದೊಂದು ಆಚರಣೆ ಇರುತ್ತದೆ. ಒಬ್ಬ ವ್ಯಕ್ತಿ ಸತ್ತರೆ ಹಿಂದೂ ಧರ್ಮದಲ್ಲಿ 11 ದಿನಗಳ ಕಾಲ ಶೋಕಾಚರಣೆ ಮಾಡುತ್ತಾರೆ. ಮುಸ್ಲಿಮ್ ಧರ್ಮದಲ್ಲಿ 3 ದಿನಗಳ ಕಾಲ ಹಾಗೇನೇ ಕ್ರಿಶ್ಚಿಯನ್ ಧರ್ಮದಲ್ಲಿ 30 ದಿನಗಳ ಕಾಲ ಶೋಕಾಚರಣೆಯನ್ನು ಮಾಡುವುದನ್ನು ನಾವು ಕಾಣಬಹುದು.

ಹೆಚ್ಚು ದುಃಖ ನೀಡುವ ಸಾವಿಗೆ ಹೆಚ್ಚು ಸೂತಕ ಕಡಿಮೆ ದುಃಖ ನೀಡುವ ಸಾವಿಗೆ ಕಡಿಮೆ ಸೂತಕ ಅಂದರೆ ಮನೆಯಲ್ಲಿ ಗಂಡ ಹೆಂಡತಿ ಮಕ್ಕಳು ಯಾರೇ ಸತ್ತರು ಹೆಚ್ಚು ದುಃಖ ನೀಡುವ ಸಾವು ಎಂದು ಅರ್ಥ ಹೊರಗಿನವರು ದೂರದವರು ಸತ್ತರೆ ಕಡಿಮೆ ದುಃಖ ನೀಡುವ ಸಾ ವು ಎಂದು ಅರ್ಥ ಹೀಗೆ ಅವರವರ ಸಮುದಾಯದಲ್ಲಿ ಅವರವರದ್ದೇ ಆದಂತಹ ಪದ್ಧತಿಗಳು ಇರುತ್ತವೆ ಆದ್ದರಿಂದ ಸತ್ತ ಮನೆಯಲ್ಲಿ ಯಾಕೆ ಒಲೆ ಹಚ್ಚುವುದಿಲ್ಲ ಎನ್ನುವ ಕಾರಣ ಈಗ ನಿಮಗೆಲ್ಲ ತಿಳಿಯಿತಲ್ಲ ಸ್ನೇಹಿತರೆ

Comments are closed.