ರಕ್ತಸಂಬಂಧಿಗಳೊಳಗಿನ ವಿವಾಹದ ಕುರಿತು ಅಧ್ಯಯನ ನಡೆಸಿರುವ ಅಂತಾರಾಷ್ಟ್ರೀಯ ತಂಡ ಒಂದು, ಇಂತಹ ದಂಪತಿಗಳಿಗೆ ಜನಿಸುವ ಮಕ್ಕಳಲ್ಲಿ ನ್ಯೂನ್ಯತೆಯ ಅಪಾಯವು ನಲ್ವತ್ತರ ಹರೆಯದಲ್ಲಿ ಗರ್ಭವತಿಯಾಗುವ ಮಹಿಳೆಯರಿಗೆ ಜನಿಸುವ ಮಕ್ಕಳಿಗಿಂತ ಕಡಿಮೆ ಪ್ರಮಾಣದ್ದಾಗಿದೆ.
ನಲ್ವತ್ತರ ಹರೆಯದ ಮಹಿಳೆಯರು ಮಗು ಹಡೆಯುವುದಕ್ಕೆ ಪಶ್ಚಾತ್ತಾಪ ಪಡುವುದಿಲ್ಲವೆಂದಾದರೆ, ರಕ್ತಸಂಬಂಧಿಗಳು ವಿವಾಹವಾಗುವುದಕ್ಕೂ ಇದೇ ಅನ್ವಯವಾಗುತ್ತದೆ ಎಂದು ಮೆಸಾಚುಸೆಟ್ಸ್ ವಿಶ್ವವಿದ್ಯಾನಿಲಯದ ಪ್ರೊ. ಡೀನ್ ಪೌಲ್ ಹೇಳಿದ್ದಾರೆ. ಅವರು ಈ ಅಧ್ಯಯನ ತಂಡದ ನೇತೃತ್ವ ವಹಿಸಿದ್ದರು.
ರಕ್ತಸಂಬಂಧಿಗಳಲ್ಲಿ ಜನಿಸುವ ಮಕ್ಕಳಲ್ಲಿ ನ್ಯೂನ್ಯತೆಯ ಸಂಭಾವ್ಯತೆಯು ಶೇ.2ರಷ್ಟು ಹೆಚ್ಚಿದೆ. ಆದರೆ 40ರ ಹರೆಯದ ಮೇಲಿನ ಮಹಿಳೆಯರಲ್ಲಿ ಜನಿಸುವ ಮಕ್ಕಳಲ್ಲಿ ಈ ಅಪಾಯದ ಸಂಭಾವ್ಯತೆಯು ಶೇ 4.4ರಷ್ಟಿದೆ.
ನಲ್ವತ್ತು ವಯಸ್ಸಿನ ಮಹಿಳೆಯರು ಮಕ್ಕಳು ಹಡೆಯುವಲ್ಲಿ ಇಂತಹುದೇ ಅಪಾಯವನ್ನು ಎದುರಿಸುತ್ತಿರುವಾಗ, ಅಂತಹವರು ಮಕ್ಕಳನ್ನು ಹಡೆಯಬಾರದು ಎಂದು ಯಾರೂ ಸಲಹೆ ನೀಡುವುದಿಲ್ಲ ಎಂದು ತಂಡದ ಸದಸ್ಯ ನ್ಯೂಜಿಲ್ಯಾಂಡಿನ ಒಟಾಗೊ ವಿಶ್ವವಿದ್ಯಾನಿಲಯದ ಪ್ರೋ. ಹಮೀಶ್ ಸ್ಪೆನ್ಸರ್ ಅವರು ಹೇಳಿದ್ದಾರೆ.
ರಕ್ತಸಂಬಂಧಿಗಳಲ್ಲಿ ಹುಟ್ಟುವ ಮಕ್ಕಳು ದೈಹಿಕ ನ್ಯೂನತೆಗಳನ್ನು ಹೊಂದುತ್ತವೆ ಎಂಬ ಹಿನ್ನೆಲೆಯಲ್ಲಿ ರಕ್ತಸಂಬಂಧಿಗಳಲ್ಲಿ ಮದುವೆ ಸೂಕ್ತವಲ್ಲ ಎಂಬ ಹಿನ್ನೆಲೆಯಲ್ಲಿ ಇಂತಹ ವಿವಾಹಗಳಿಗೆ ಉತ್ತೇಜನ ನೀಡಲಾಗುತ್ತಿರಲಿಲ್ಲ.
Comments are closed.