ಕುಂದಾಪುರ: ರಾತ್ರಿ ರಾಣಿ ಎಂದೇ ಪ್ರಸಿದ್ಧವಾಗಿರುವ ಬ್ರಹ್ಮ ಕಮಲ ಪುಷ್ಪ ಹಂತ ಹಂತವಾಗಿ ಅರಳಿದ ಅಪರೂಪದ ದೃಶ್ಯ ಸೆರೆಯಾಗಿದೆ.
ಕುಂದಾಪುರ ತಾಲೂಕಿನ ಗಣೇಶ್ ಕಾಂಚನ್ ಪಡುಚಾವಡಿ ಬೆಟ್ಟು ಗೋಪಾಡಿ ಎನ್ನುವರ ಮನೆಯಲ್ಲಿ ಒಂದೇ ಬಾರಿಗೆ 53 ಬ್ರಹ್ಮಕಮಲ ಹೂ ಅರಳಿದೆ.
ವರ್ಷಕ್ಕೊಮ್ಮೆ ಅರಳುವ ಈ ಸುಂದರ ಹೂ ರಾತ್ರಿ ಸುಮಾರು 9 ಗಂಟೆಗೆ ಅರಳಲು ಶುರುವಾಗಿ 12 ಗಂಟೆವರಗೆ ಸಂಪೂರ್ಣವಾಗಿ ಅರಳುತ್ತದೆ. ಬೆಳಗ್ಗಿನ ಜಾವದಲ್ಲಿ ಮುದುಡಿಹೋಗುತ್ತದೆ. ಈ ಅಪರೂಪದ ಹೂ ಅರಳುವಾಗ ಸುತ್ತಲೂ ಸುವಾಸನೆ ಬೀರುವುದು ಮತ್ತೊಂದು ವಿಶೇಷ.
ಈ ಅಪರೂಪದ ಮನಮೋಹಕ ಬ್ರಹ್ಮಕಮಲದ ಸೊಬಗನ್ನು, ಮನೆಯವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ವಿಡಿಯೋದಲ್ಲಿ ಹೂ ಮೊದಲು ಮುಗ್ಗಾಗಿತ್ತು. ಬಳಿಕ ನಿಧಾನವಾಗಿ ಅರಳಿಕೊಂಡು ಬಂದಿದೆ. ಈ ಬ್ರಹ್ಮ ಕಮಲ ಪುಷ್ಪ ರಾತ್ರಿ ವೇಳೆ ಮಾತ್ರ ಅರಳುತ್ತದೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.