ಅಂತರಾಷ್ಟ್ರೀಯ

ಹತ್ತು ವರ್ಷದ ಬಾಲಕನಿಂದ ಗರ್ಭಿಣಿಯಾದ13 ವರ್ಷದ ಬಾಲಕಿ : ಅಸಲಿ ಸತ್ಯ ಏನು?

Pinterest LinkedIn Tumblr

ಮಾಸ್ಕೋ: 16 ವರ್ಷದ ಹುಡಗನಿಂದ ಅತ್ಯಾಚಾರ ನಡೆದಿರುವುದನ್ನು ಮುಚ್ಚಿಟ್ಟು ತಾನು ಹತ್ತು ವರ್ಷದ ತನ್ನ ಬಾಯ್ ಫ್ರೆಂಡ್‌ನಿಂದ ಗರ್ಭಿಣಿಯಾಗಿರುವುದಾಗಿ ಹೇಳಿಕೆ ನೀಡುವ ಮೂಲಕ ಸುದ್ಧಿಯಾಗಿದ್ದ 13 ವರ್ಷದ ಬಾಲಕಿಯ ಹೆಣ್ಣು ಮಗುವಿನ ತಂದೆ ಯಾರೆಂಬುದು ಇದೀಗ ಬಹಿರಂಗಗೊಂಡಿದೆ.

ಬಾಲಕಿಯ ಹೆಸರು ದರ್ಯಾ ಸುಡ್ನಿಶ್ನಿಕೋವಾ (ಪ್ರಸ್ತುತ 14 ವರ್ಷ). ತನ್ನ ಹತ್ತು ವರ್ಷದ ಬಾಯ್ ಫ್ರೆಂಡ್‌ ಇವಾನ್ (ಪ್ರಸ್ತುತ 11 ವರ್ಷ) ನಿಂದ ತಾನು ಗರ್ಭಿಣಿಯಾಗಿದ್ದೇನೆಂದು ಮಾಧ್ಯಮವೊಂದರ ಮುಂದೆ ಹೇಳಿಕೆ ನೀಡಿದ ಬೆನ್ನಲ್ಲೇ ದರ್ಯಾ ರಷ್ಯಾದಲ್ಲಿ ಪ್ರಖ್ಯಾತಿ ಗಳಿಸಿದ್ದಳು.

ದರ್ಯಾ ಆಗಸ್ಟ್ 16ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗುವಿಗೆ ಬಾಲಕ ಇವಾನ್ ತಂದೆಯೆಂದು ಆಕೆ ಹೇಳಿಕೊಂಡಿದ್ದಾಳೆ. ಹೆರಿಗೆ ಚಿಕಿತ್ಸೆ ಮುಗಿದು ಚೇತರಿಸಿಕೊಂಡಿದ್ದರಿಂದ ದರ್ಯಾ ಇದೀಗ ಕ್ರಾಸ್ನೋಯಾರ್ಸ್ಕ್ನಲ್ಲಿರುವ ಕ್ಲಿನಿಕ್ ನಿಂದ ತನ್ನ ತವರುರಾದ ಹೆಲೆಜ್ನೋಗೊರ್ಸ್ಕ್ನಲ್ಲಿರುವ ಮನೆಗೆ ಮರಳಿದ್ದಾರೆ.

ಆಸ್ಪತ್ರೆಯಿಂದ ಹೊರಡುವಾಗ ಬಾಗಿಲ ಬಳಿ ದರ್ಯಾ ಮತ್ತು ಇವಾನ್ ತಮ್ಮ ತಾಯಂದಿರ ಜತೆ ನಿಂತು ನಗು ಮುಖದಿಂದಲೇ ಕ್ಯಾಮೆರಾಗೆ ಪೋಸ್ ನೀಡಿದ್ದು, ಫೋಟೋ ವೈರಲ್ ಆಗಿತ್ತು.

ಆದರೆ, ಇವಾನ್‌ ದರ್ಯಾಳನ್ನು ಗರ್ಭಿಣಿಯಾಗಿಸುವುದು ಜೈವಿಕವಾಗಿ ಅಸಾಧ್ಯವೆಂದು ಈ ಮೊದಲೇ ವೈದ್ಯರು ಮತ್ತು ತಜ್ಞರು ಹೇಳಿದ್ದರು. ಅಚ್ಚರಿಯ ಸಂಗತಿಯೆಂದರೆ ಪೊಲೀಸರು ಮಗು ಎಮಿಲಿಯಾ ಡಿಎನ್ಎ ಪರೀಕ್ಷೆ ಮಾಡಿಸಿದ್ದು, ಮಗುವಿನ ತಂದೆ 10 ವರ್ಷದ ಇವಾನ್ ಎಂದು ಖಚಿತವಾಗಿಲ್ಲ. ಬದಲಾಗಿ ಹದಿಹರೆಯದ (15 ರಿಂದ 20 ವರ್ಷ) ಹುಡುಗನೆಂಬುದು ಖಚಿತವಾಗಿದೆ.

ಆದರೆ ಅಸಲಿ ವಿಷಯ ಏನೆಂದರೆ, ಈ ಹಿಂದೆ ದರ್ಯಾ ಮೇಲೆ 16 ವರ್ಷದ ಬಾಲಕನೋರ್ವ ಎಸಗಿದ ಅತ್ಯಾಚಾರದಿಂದ ಆಕೆ ಗರ್ಭಿಣಿಯಾಗಿದ್ದಳು. ಆದರೆ ಈ ಮುಜುಗರದಿಂದ ತಪ್ಪಿಸಿಕೊಳ್ಳಲು 10 ವರ್ಷ ಬಾಯ್ ಫ್ರೆಂಡ್‌ ತನ್ನ ಮಗುವಿನ ತಂದೆ ಎಂದು ಹೇಳಿಕೊಂಡಿದ್ದಳು.

ಆದರೆ ತೀವ್ರ ವಿಚಾರಣೆ ವೇಳೆ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಸ್ವತಃ ದರ್ಯಾ ಸಹ ಒಪ್ಪಿಕೊಂಡಿದ್ದಳು. ಹೆಲೆಜ್ನೋಗೊರ್ಸ್ಕ್ನಲ್ಲಿರುವ ತನ್ನ ಮನೆಯ ಮೆಟ್ಟಿಲುಗಳ ಮೇಲೆ 16 ವರ್ಷದ ಹುಡುಗನಿಂದ ಅತ್ಯಾಚಾರಕ್ಕೆ ಒಳಗಾಗಿದ್ದೆ. ಆತ ತನ್ನ ವಯಸ್ಸಿಗಿಂತ ತುಂಬಾ ದಪ್ಪಗೆ, ಎತ್ತರವಾಗಿದ್ದ ಎಂದು ದರ್ಯಾ ಹೇಳಿದ್ದಾಳೆ. ಇದೀಗ ಡಿಎನ್ಎ ವರದಿಯಿಂದ ಕೊನೆಗೂ ಮಗುವಿನ ತಂದೆ ಯಾರೆಂಬ ಅಸಲಿ ಸತ್ಯ ಬಹಿರಂಗವಾಗಿದೆ.

ದರ್ಯಾ ವಯೋಸಹಜವಲ್ಲದ ಗರ್ಭಾವಸ್ಥೆ. ಹಾಗೂ 10 ವರ್ಷದ ಬಾಯ್ ಫ್ರೆಂಡ್‌ ಇದ್ದಾನೆ ಎಂಬ ಹೇಳಿಕೆ ಆಕೆಗೆ ರಷ್ಯಾದಲ್ಲಿ ಪ್ರಖ್ಯಾತಿ ತಂದುಕೊಟ್ಟಿದ್ದು, ಇದೀಗ ದರ್ಯಾ ಸಾಮಾಜಿಕ ಜಾಲತಾಣದಲ್ಲಿ ಬರೋಬ್ಬರಿ 474,000 ಹಿಂಬಾಲಕರನ್ನು ಹೊಂದಿದ್ದಾಳೆ.

ಇದೀಗ ಮಗುವಿನ ಪಾಲನೆಯಲ್ಲಿ ದರ್ಯಾ ತೊಡಗಿಕೊಂಡಿದ್ದು, ನಾನು ಸದ್ಯ 57 ಕೆ.ಜಿ ಇದ್ದೇನೆ. ತೂಕ ಇಳಿಸಿಕೊಳ್ಳುತ್ತಿದ್ದೇನೆ. ಹೀಗಾಗಿ ಮಿತ ಆಹಾರ ಸೇವಿಸುತ್ತಿದ್ದೇನೆ. ಮಗು ಚೆನ್ನಾಗಿದೆ. ಇಬ್ಬರು ಆರೋಗ್ಯವಾಗಿದ್ದೇವೆಂದು ಮಗುವಿನ ಜತೆ ಆಟವಾಡುತ್ತಿರುವ ವಿಡಿಯೋವನ್ನು ದರ್ಯಾ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾಳೆ. ಇದು ಆಕೆಗೆ ಮತ್ತಷ್ಟು ಪ್ರಚಾರ ತಂದುಕೊಡಲಿದೆ.

Comments are closed.