ಮಂಗಳೂರು/ ಬೆಂಗಳೂರು : ಚಿತ್ರನಟಿ ಸಂಯುಕ್ತ ಹೆಗ್ಡೆ ಬೆಂಗಳೂರಿನ ಪಾರ್ಕ್ ಒಂದರಲ್ಲಿ ತನ್ನ ಇಬ್ಬರು ಸ್ನೇಹಿತರೊಂದಿಗೆ ವ್ಯಾಯಾಮ ಮಾಡುತ್ತಿದ್ದಾಗ ನಟಿ ಸಂಯುಕ್ತ ಹೆಗ್ಡೆ ಹಾಗೂ ಆಕೆಯ ಸ್ನೇಹಿತರ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿಯನ್ನು ಬಂಧಿಸಲಾಗಿದೆ.
ಹೆಚ್.ಎಸ್.ಆರ್ ಲೇಔಟ್ ಪೋಲಿಸರು ಕವಿತಾ ರೆಡ್ಡಿಯನ್ನು ಬಂಧಿಸಿದ್ದು, ಬಳಿಕ ಕವಿತಾ ರೆಡ್ಡಿ ಸ್ಟೇಷನ್ ಬೇಲ್ ಮೇಲೆ ಬಿಡುಗಡೆಯಾಗಿದ್ದಾರೆ. ಇತ್ತ ಪ್ರಕರಣದ ಎರಡನೇ ಅರೋಪಿ ಅನಿಲ್ ರೆಡ್ಡಿ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ.
ಈ ನಡುವೆಯೇ ಸಂಯುಕ್ತ ಹೆಗ್ಡೆ ಹಾಗೂ ಕವಿತಾ ರೆಡ್ಡಿ ನಡುವೆ ಸಂಧಾನ ಮಾಡಲಾಗಿತ್ತು. ಆದರೆ ಸಂಧಾನ ಪತ್ರದಲ್ಲಿ ರಾಜಿಗೆ ಒಪ್ಪಿಗೆ ಇಲ್ಲ. ಒತ್ತಾಯದಿಂದ ರಾಜಿಗೆ ಸಹಿ ಮಾಡುತ್ತಿದ್ದೇನೆ ಎಂದು ಸಂಯುಕ್ತ ಹೆಗ್ಡೆ ಬರೆದಿದ್ದರು. ಪ್ರಕರಣದ 2ನೇ ಆರೋಪಿ ಅನಿಲ್ ರೆಡ್ಡಿ ವಿರುದ್ಧ ಕ್ರಮಕ್ಕೆ ಸಂಯುಕ್ತ ಮಾಡಿದ್ದರು. ಹೀಗಾಗಿ ಪೊಲೀಸರು ಐಪಿಸಿ ಸೆಕ್ಷನ್ 264ಬಿ, 323 224, 504, 509, 506 ಅಡಿ ಎಫ್‍ಐಆರ್ ದಾಖಲು ಮಾಡಿ ಕವಿತಾ ರೆಡ್ಡಿಯನ್ನು ಬಂಧಿಸಿದ್ದರು.
ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ಆಗರ ಕೆರೆಯ ಪಕ್ಕದ ಉದ್ಯಾನವನದಲ್ಲಿ ಇಬ್ಬರು ಸ್ನೇಹಿತರೊಂದಿಗೆ ವ್ಯಾಯಾಮ ಮಾಡುತ್ತಿದ್ದಾಗ ಕವಿತಾ ರೆಡ್ಡಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಂಯುಕ್ತ ಹೆಗ್ಡೆ ಆರೋಪಿಸಿದ್ದರು.
ಉದ್ಯಾನವನದಲ್ಲಿ ನಟಿ ಸಂಯುಕ್ತಾ ಹೆಗ್ಡೆ ಧರಿಸಿದ್ದ ಬಟ್ಟೆಗೆ ಕಾಂಗ್ರೆಸ್ ಪಕ್ಷದ ವಕ್ತಾರೆ ಕವಿತಾ ರೆಡ್ಡಿ ವಿರೋಧ ವ್ಯಕ್ತಪಡಿಸಿ, ಕವಿತಾ ರೆಡ್ಡಿ ಹಾಗೂ ಇತರರು ತಮ್ಮ ಮೇಲೆ ಹಲ್ಲೆ ನಡೆಸಿ, ಅವಮಾನಿಸಿದ್ದಾರೆ ಎಂದು ಆರೋಪಿಸಿ ಸಂಯುಕ್ತಾ ಹೆಗ್ಡೆ ಎಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನಮ್ಮ ದೇಶದ ಭವಿಷ್ಯವು ಇಂದು ನಾವು ಏನು ಮಾಡುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿದೆ. ಅಗರ ಕೆರೆ ಬಳಿಯ ಉದ್ಯಾನವನದಲ್ಲಿ ಕವಿತಾ ರೆಡ್ಡಿ ನಮ್ಮನ್ನು ನಿಂದಿಸಿ, ಅಸಹ್ಯಕರವಾಗಿ ವರ್ತಿಸಿದರು. ಇದಕ್ಕೆ ಸಾಕ್ಷಿದಾರರು ಹಾಗೂ ಹೆಚ್ಚಿನ ವಿಡಿಯೋ ಪುರಾವೆಗಳು ಸಹ ಇವೆ. ಈ ಕುರಿತು ಗಮನಹರಿಸಬೇಕೆಂದು ನಾನು ವಿನಂತಿಸುತ್ತೇನೆ ಎಂದು ಬೆಂಗಳೂರು ಪೊಲೀಸರಿಗೆ ಹಾಗೂ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಟ್ಯಾಗ್ ಮಾಡಿದ್ದರು.
https://www.instagram.com/tv/CEtwP4plMhN/?utm_source=ig_embed
ಸಾರ್ವಜನಿಕರು ವಾಕಿಂಗ್ ಮಾಡುವ ಪಾರ್ಕ್‍ನಲ್ಲಿ ಸಂಯುಕ್ತ ಹೆಗ್ಡೆ ಮತ್ತವರ ಸಂಗಡಿಗರು ಹುಲಾ ಹೂಪ್ ಡ್ಯಾನ್ಸ್ ಮಾಡಿದ್ದರು. ತುಂಡು ಬಟ್ಟೆ ತೊಟ್ಟು ಡ್ಯಾನ್ಸ್ ಮಾಡಿದ್ದಾರೆ ಎಂದು ಕವಿತಾ ರೆಡ್ಡಿ ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಕವಿತಾ ರೆಡ್ಡಿ ವಿರುದ್ಧ ನಟಿ ಸಂಯುಕ್ತ ಆಕ್ರೋಶ ವ್ಯಕ್ತಪಡಿಸಿದ್ದು, ಈ ರೀತಿ ಮಾಡಿದ್ದಾರೆ ಎಂದು ವಿಡಿಯೋ ಮೂಲಕ ಕೂಗಾಡಿದ್ದರು. ಈ ವೇಳೆ ಸ್ಥಳೀಯರು ನಟಿಯ ವಿರುದ್ಧ ಧಿಕ್ಕಾರ ಕೂಗಿ, ನಂತರ ಪಾರ್ಕ್ ಗೇಟ್ ಲಾಕ್ ಮಾಡಿ ಪೊಲೀಸರಿಗೆ ಕರೆ ಮಾಡಿದ್ದರು.
ಗೇಟ್ ಓಪನ್ ಮಾಡುವಂತೆ ಸಂಯುಕ್ತ ಮತ್ತು ಕವಿತಾ ರೆಡ್ಡಿ ನಡುವೆ ವಾಗ್ವಾದ ನಡೆದಿತ್ತು. ಅಷ್ಟರಲ್ಲಿ ಪೊಲೀಸರು ಸ್ಥಳಕ್ಕೆ ಬಂದಿದ್ದರು. ಆಗ ತಕ್ಷಣ ಇನ್‍ಸ್ಟಾಗ್ರಾಮ್‍ನಲ್ಲಿ ಲೈವ್ ಬಂದ ಸಂಯುಕ್ತ, ನಾನು ಏನೂ ತಪ್ಪು ಮಾಡಿಲ್ಲ. ಸುಮ್ಮನೆ ನಮ್ಮನ್ನು ಕೂಡಿ ಹಾಕಿದ್ದಾರೆ ಎಂದು ದೂರಿದ್ದರು. ನಂತರ ಪೊಲೀಸರು ಸಂಯುಕ್ತ ಹಾಗೂ ಅವರ ಸ್ನೇಹಿತರನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದರು.
The future of our country reflects on what we do today. We were abused and ridiculed by Kavitha Reddy at Agara Lake@BlrCityPolice @CPBlr
There are witnesses and more video evidence
I request you to look into this#thisisWRONG
Our side of the storyhttps://t.co/xZik1HDYSs pic.twitter.com/MZ8F6CKqjw— Samyuktha Hegde (@SamyukthaHegde) September 4, 2020
ಕವಿತಾ ರೆಡ್ಡಿ ಹಾಗೂ ಅವರ ಸಂಗಡಿಗರಿಂದ ಬೆದರಿಕೆ : ದೂರು
ತಾನು “ಸ್ನೇಹಿತರೊಂದಿಗೆ ವ್ಯಾಯಾಮ ಮಾಡುತ್ತಿದ್ದಾಗ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ಮಾಡಿದ್ದಾಗಿ ನನ್ನ ವಿರುದ್ಧ ಆರೋಪಿಸಿ ಎಐಸಿಸಿ ಸದಸ್ಯೆ ಕವಿತಾ ರೆಡ್ಡಿ ಹಾಗೂ ಅವರ ನೇತೃತ್ವದ ಜನರ ಗುಂಪು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲದೇ ಅಲ್ಲಿ ನೆರೆದಿದ್ದ ಜನರು ನಾವು ಡ್ರಗ್ಸ್ ಸೇವಿಸಿದ್ದೇವೆ ಎಂದು ಆರೋಪಿಸಿ ನನ್ನ ವಿರುದ್ದ ಘೋಷಣೆ ಕೂಗಿದ್ದಾರೆ. ಅಷ್ಟೇ ಅಲ್ಲದೆ ಅಲ್ಲಿದ್ದ ಓರ್ವ ವ್ಯಕ್ತಿ ನಾವು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದೇವೆ ಎಂದು ಮಾಧ್ಯಮಗಳಿಗೆ ತಿಳಿಸುವುದಾಗಿ ನಮ್ಮನ್ನು ಬೆದರಿಸಿರುವುದಾಗಿ ನಟಿ ಸಂಯುಕ್ತ ಹೆಗ್ಡೆ ದೂರಿನಲ್ಲಿ ತಿಳಿಸಿದ್ದರು.
ಈ ಎಲ್ಲಾ ಘಟನೆಯ ವಿಡಿಯೋ ದೃಶ್ಯಾವಳಿಯನ್ನು ಸಂಯುಕ್ತ ಹೆಗ್ಡೆ ತಮ್ಮ ಇನ್ಸ್ಟಾಗ್ರಾಮ್ ಮೂಲಕ ಲೈವ್ ನಲ್ಲಿ ಹಂಚಿಕೊಂಡಿದ್ದರು. ಇದರಲ್ಲಿ ಕವಿತಾ ರೆಡ್ಡಿ ಹಲ್ಲೆ ಮಾಡಲು ಯತ್ನಿಸಿರುವುದು ಹಾಗೂ ವಿಡಿಯೋ ದಲ್ಲಿ ಕವಿತಾ ರೆಡ್ಡಿ ಯುವತಿಯನ್ನು ದೂಡುತ್ತಿರುವುದು ದಾಖಲಾಗಿತ್ತು. ಹಾಗೂ ಅಲ್ಲಿ ನೆರೆದಿದ್ದ ಜನರು ಅವರು ಡ್ರಗ್ಸ್ ಸೇವಿಸಿದ್ದಾರೆ ಎಂದು ಆರೋಪಿಸಿ ಅವರ ವಿರುದ್ದ ಘೋಷಣೆ ಕೂಗಿರುವುದು ಹಾಗೂ ವ್ಯಕ್ತಿಯೊಬ್ಬ ಅವರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸುವುದಾಗಿ ಅವರನ್ನು ಬೆದರಿಸಿರುವುದು ಎಲ್ಲಾ ಘಟನೆಗಳು ವಿಡಿಯೋದಲ್ಲಿ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನಟಿ ಸಂಯುಕ್ತ ಹೆಗ್ಡೆ ವಿಡೀಯೋ ದಾಖಲೆ ನೀಡಿದ ಬಳಿಕ ಕ್ಷಮೆಯಾಚಿಸಿದ ಎಐಸಿಸಿ ಸದಸ್ಯೆ ಕವಿತಾ ರೆಡ್ಡಿ ಘಟನೆಗೆ ಸಂಬಂಧಿಸಿದಂತೆ ಕವಿತಾ ರೆಡ್ಡಿ ಕ್ಷಮೆ ಕೋರಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ ಮಾಡಿದ್ದರು.
I have always opposed Moral Policing. I realize that my actions were construed as such. An argument ended up in me reacting aggressively as well, it was a mistake. As a responsible citizen n progressive woman, I own up to n sincerely apologise to @SamyukthaHegde n her Friends! pic.twitter.com/pM9UJkWESC
— Dr Kavitha Reddy #WeThe49Percent (@KavithaReddyKR) September 6, 2020
Comments are closed.