ಕರಾವಳಿ

ಶಿರ್ವದಲ್ಲಿ ಶ್ರೀ‌ ಸಿದ್ದಿವಿನಾಯಕ ದೇವಳ‌‌ ನಿರ್ಮಿಸಿದ ಕ್ರೈಸ್ತ ಉದ್ಯಮಿ‌ ಗ್ಯಾಬ್ರಿಯಲ್ ನಜ್ರತ್ ಕಾರ್ಯಕ್ಕೆ ಸಚಿವ ಕೋಟ ಮೆಚ್ಚುಗೆ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಶಿರ್ವ-ಮೂಡುಬೆಳ್ಳೆ ಕ್ರಾಸ್ ರಸ್ತೆಯ ಜಂಕ್ಷನ್‌ನಲ್ಲಿ ಶ್ರೀಸಿದ್ದಿವಿನಾಯಕನ ಪರಮಭಕ್ತ ಉದ್ಯಮಿ ಗ್ಯಾಬ್ರಿಯಲ್ ಎಫ್. ನಜ್ರತ್‌ರವರು ಸ್ವಂತ ಜಮೀನಿನಲ್ಲಿ ತಮ್ಮ ತಂದೆ ತಾಯಿ‌ ಸವಿನೆನಪಿಗಾಗಿ ಅಂದಾಜು ಒಂದೂವರೆ ಕೋಟಿಗೂ ಅಧಿಕ ರೂ. ವೆಚ್ಚದಲ್ಲಿ ನಿರ್ಮಿಸಿದ ಶ್ರೀಸಿದ್ದಿವಿನಾಯಕ ದೇವಾಲಯಕ್ಕೆ‌ ಹಿಂದೂ ಧಾರ್ಮಿಕ ಮತ್ತು ಧರ್ಮದಾಯ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿದರು.

ಈ ಬಗ್ಗೆ ಬರೆದುಕೊಂಡಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ, ‘ಮುಂಬೈ ಮೂಲದ ಕ್ರೈಸ್ತ ಉದ್ಯಮಿಯೊಬ್ಬರು ತಮ್ಮ ಸ್ವಂತ ವೆಚ್ಚದಲ್ಲಿ ನಿರ್ಮಿಸಿ ಸಮಾಜಕ್ಕೆ ಅರ್ಪಿಸಿದ ಶ್ರೀ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದೆ. ಉಡುಪಿ ಜಿಲ್ಲೆಯ ಶಿರ್ವ ದಲ್ಲಿರುವ ಈ ದೇವಸ್ಥಾನ ಕಲಾತ್ಮಕವಾಗಿ ಮೂಡಿಬಂದಿದೆ. ದೇವಳ ನಿರ್ಮಿಸಿದ ಗ್ಯಾಬ್ರಿಯಲ್ ಫೇಬಿಯನ್ ನಜರತ್ ಅವರು ಅಭಿನಂದನೆಗೆ ಅರ್ಹರು. ಧರ್ಮ ಧರ್ಮಗಳ ನಡುವೆ ಸಾಮರಸ್ಯ ಮೂಡಲು ಇಂತಹ ವ್ಯಕ್ತಿಗಳು ಕಾರಣರಾಗುತ್ತಾರೆ’.

ಸಚಿವರ ಭೇಟಿ ವೇಳೆ ದೇವಾಲಯ ನಿರ್ಮಿಸಿಕೊಟ್ಟ ಗ್ಯಾಬ್ರಿಯಲ್ ಎಫ್. ನಜ್ರತ್ ಸೇರಿದಂತೆ ಮತ್ತಿತರರು‌ ಉಪಸ್ಥಿತರಿದ್ದರು.

Comments are closed.