ಉಡುಪಿ: ಮಲ್ಪೆ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದ ವೇಳೆ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಗರಗಸ ಮೀನು ಬೋಟ್ ಬಲೆಗೆ ಸಿಲುಕಿಕೊಂಡಿದೆ.
ಈ ಮೀನಿನ ತೂಕ ಸುಮಾರು 250 ಕೆಜಿ ಇದ್ದು, ಮೀನನ್ನು ನೋಡಲೆಂದು ಬಂದರಿನೊಳಗೆ ಹಲವಾರು ಮಂದಿ ಸೇರಿದ್ದರು. ಬಳಿಕ ಕ್ರೈನ್ ಸಹಾಯದಿಂದ ಬೋಟ್ ನಿಂದ ಮೀನನ್ನು ಮೇಲಕೆತ್ತಿ ಲಾರಿಯಲ್ಲಿ ತುಂಬಿಸಿ ಮಂಗಳೂರಿಗೆ ಕಳುಹಿಸಿಕೊಡಲಾಯಿತು ಎಂದು ತಿಳಿದು ಬಂದಿದೆ.
ಈ ಜಾತಿಯ ಮೀನುಗಳು ಸಮುದ್ರದಲ್ಲಿ ವಿರಳವಾಗಿ ಕಂಡುಬರುತ್ತದೆ. ಇದನ್ನು ಸಾ ಪಿಶ್ ಎಂದು ಕರೆಯಲಾಗುತ್ತದೆ.
Comments are closed.