ಮಂಗಳೂರು: ಕಿರಣ್ ರಾಜ್ ನಿರ್ದೇಶನದ, ನಟ ರಕ್ಷಿತ್ ಶೆಟ್ಟಿ ಅಭಿಯನದ ‘ಚಾರ್ಲಿ 777’ ಸಿನಿಮಾದಲ್ಲಿ ಮನುಷ್ಯ ಹಾಗೂ ನಾಯಿಯ ನಡುವಿನ ಒಡನಾಟ ನೋಡಿದ ಮಂಗಳೂರು ನಗರದ ಪೊಲೀಸರು ಶ್ವಾನ ದಳದ ಹೊಸ ಸದಸ್ಯ ಲ್ಯಾಬ್ರಡಾರ್ ತಳಿಯ ನಾಯಿಮರಿಗೆ ‘ಚಾರ್ಲಿ’ ಎಂದು ಶುಕ್ರವಾರ ಹೆಸರಿಟ್ಟಿದ್ದಾರೆ.
ಕಳೆದ ಮಾರ್ಚ್ ನಲ್ಲಿ ಲ್ಯಾಬ್ರಡಾರ್ ರಿಟ್ರೀವರ್ ನಾಯಿ ಮರಿ ಪೊಲೀಸ್ ಶ್ವಾನದಳಕ್ಕೆ ಸೇರ್ಪಡೆಯಾಗಿತ್ತು. ಬಂಟ್ವಾಳದ ಮಾಲೀಕರೊಬ್ಬರಿಂದ ಈ ನಾಯಿಮರಿಯನ್ನು ಶ್ವಾನ ಪಡೆಗಾಗಿ ಖರೀದಿಸಲಾಗಿತ್ತು. ಮುಂದಿನ ನಾಲ್ಕು ತಿಂಗಳ ಬಳಿಕ ಬೆಂಗಳೂರಿನ ಸೌತ್ ಸಿ ಆರ್ ನಲ್ಲಿ ಆರು ತಿಂಗಳ ಕಾಲ ಈ ಶ್ವಾನಕ್ಕೆ ತರಬೇತಿ ನೀಡಲು ನಿರ್ಧರಿಸಲಾಗಿದೆ. ಬಳಿಕ ಈ ಶ್ವಾನ ಬಾಂಬ್ ನಿಷ್ಕ್ರೀಯ ಹಾಗೂ ಪತ್ತೆ ಮಾಡಲು ಇಲಾಖೆಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ.
Comments are closed.