ಸುಳ್ಯ: ಸಾಮಾನ್ಯವಾಗಿ ಎಲೆಗಳು, ಕಡ್ಡಿ ಹಾಗೂ ಒಣ ವಸ್ತುಗಳಿಂದ ಕಾಗೆಗಳು ಗೂಡು ಕಟ್ಟುತ್ತವೆ. ಆದರೆ ಸುಳ್ಯದಲ್ಲೊಂದು ಕಾಗೆ ಬರೋಬ್ಬರಿ ಎರಡು ಕೆಜಿ ಕಬ್ಬಿಣದ ತಂತಿ ಬಳಸಿ ಗೂಡು ಕಟ್ಟಿಕೊಂಡ ಅಪರೂಪದ ವಿದ್ಯಮಾನ ನಡೆದಿದೆ.
ಚೊಕ್ಕಾಡಿಯ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರದ ಆವರಣದಲ್ಲಿ ಕಾಗೆ ಕಬ್ಬಿಣದ ಗೂಡು ಕಟ್ಟಿ ವಾಸ ಮಾಡುತ್ತಿದೆ. ಕಾಗೆಯ ಎರಡು ಗೂಡುಗಳು ಕಬ್ಬಿಣದಿಂದಲೇ ಮಾಡಲ್ಪಟ್ಟಿರುವುದು ಇಲ್ಲಿ ಕಂಡು ಬಂದಿದೆ.
ಕಾಗೆಗಳು ಗೂಡಿನಲ್ಲಿ ವಾಸ್ತವ್ಯ ಇಲ್ಲದಿರುವಾಗ ಈ ಗೂಡು ಕಬ್ಬಿಣದ ತಂತಿಗಳಿಂದ ಮಾಡಿರುವುದು ತಿಳಿದುಬಂದಿದೆ. ಸುಮಾರು ಎರಡು ಕೆಜಿಯಷ್ಟು ಕಬ್ಬಿಣದ ತಂತಿ ಬಳಸಲಾಗಿದೆ. ಪ್ರಸ್ತುತ ಕಾಗೆಗಳ ವಾಸ್ತವ್ಯ ಇಲ್ಲದ ಒಂದು ಗೂಡನ್ನು ತೆಗೆಯಲಾಗಿದ್ದು ಆ ಗೂಡನ್ನು ವಿದ್ಯಾಸಂಸ್ಥೆಯ ವಿಜ್ಞಾನ ವಸ್ತು ಸಂಗ್ರಹಾಲಯದಲ್ಲಿ ಸುರಕ್ಷಿತವಾಗಿ ಇಡಲಾಗಿದೆ. ಇನ್ನೊಂದನ್ನು ಮರದಲ್ಲೇ ಉಳಿಸಲಾಗಿದೆ ಎಂದು ತಿಳಿದುಬಂದಿದೆ.
Comments are closed.