ಕುಂದಾಪುರ: ತಾಲೂಕಿನ ಕೋಟೇಶ್ವರದಲ್ಲಿರುವ ಯುವ ಮೆರಿಡಿಯನ್ ಗ್ರೂಪ್ಸ್ ನ ಸೇವೆ, ಸಾಧನೆಗೆ “ಪ್ರತಿಷ್ಠಿತ ದಿ ಟೈಮ್ಸ್ ಗ್ರೂಪ್ ಎಕ್ಸಲೆನ್ಸಿ ಇನ್ ಲಕ್ಷುರಿ ಎಂಡ್ ಲೈಸುರ್ ಸ್ಟೇಗಾಗಿ ಅಂತರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ. ಅದೇ ರೀತಿ ನಿಟ್ಟೆ-ಕೆಬಿಎಲ್ ಎಂಎಸ್‍ಎಂಇ ಬ್ಯುಸಿನೆಸ್ ಎಕ್ಸಲೆನ್ಸಿ ಅವಾರ್ಡ್-2022 ಲಭಿಸಿದೆ. ಬೆಸ್ಟ್ ಇನೋವೇಟಿವ್ ಎಂಟರ್ಪ್ರೈಸಸ್ ಅವಾರ್ಡ್ ಅನ್ನು ಎಐಸಿ ನಿಟ್ಟೆ ಹಾಗೂ ಕರ್ಣಾಟಕ ಬ್ಯಾಂಕ್ ಜಂಟಿಯಾಗಿ ಪ್ರದಾನ ಮಾಡಿದೆ ಎಂದು ಯುವ ಮೆರಿಡಿಯನ್ ಸಂಸ್ಥೆಯ ಆಡಳಿತ ಪಾಲುದಾರರಾದ ಉದಯಕುಮಾರ್ ಶೆಟ್ಟಿ ತಿಳಿಸಿದರು.
ಅವರು ಬುಧವಾರ ಯುವ ಮೆರಿಡಿಯನ್ ಸಂಶ್ತೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಕೋಟೇಶ್ವರದಂತಹ ಗ್ರಾಮೀಣ ಪ್ರದೇಶದಲ್ಲಿ ದಶಕಗಳಿಂದ ಅಂತರಾಷ್ಟ್ರೀಯ ಗುಣಮಟ್ಟದ ಸೇವೆ ನೀಡಿಕೊಂಡು ಬರುತ್ತಿರುವ ಸಂಸ್ಥೆಯು ಅಂತರಾಷ್ಟ್ರೀಯ ಖ್ಯಾತಿಯ ಯುವ ಮೆರಿಡಿಯನ್ ಸ್ಫಾ ವಿಭಾಗವು ನೀಡುತ್ತಿರುವ ಸೇವೆಯಿಂದಾಗಿ ಅಂತರಾಷ್ಟ್ರೀಯ ಮನ್ನಣೆ, ಗೌರವಕ್ಕೆ ಪಾತ್ರವಾಗಿದ್ದಲ್ಲದೆ ರಾಜ್ಯದ ಪ್ರತಿಷ್ಠಿತ ಮುಂಚೂಣಿಯ ಹೋಟೆಲ್‍ಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಪ್ರವಾಸೋದ್ಯಮಕ್ಕೆ ನೀಡುತ್ತಿರುವ ಉತ್ತಮ ಸಹಕಾರಕ್ಕಾಗಿ ಯುವ ಮೆರಿಡಿಯನ್ ಗ್ರೂಪ್ ಸತತ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನವಾಗುತ್ತಿದೆ ಎಂದರು.
ಆತಿಥ್ಯ, ಕರಾವಳಿ ತೀರಗಳ ದರ್ಶನ, ವಿಶ್ವದರ್ಜೆಯ ವಸತಿಗೃಹ ಹೊಂದಿರುವ ಮೆರಿಡಿಯನ್ ಬೇ ರೆಸಾರ್ಟ್ ಎಂಡ್ ಸ್ಪಾ ವಿಶ್ವಖ್ಯಾತಿಗೆ ಪಾತ್ರವಾಗಿದೆ. ಐಶಾರಾಮಿ ಫೋರ್ ಸ್ಟಾರ್ ಡಿಲಕ್ಸ್ ರೆಸಾರ್ಟ್ ಇದಾಗಿದ್ದು ಲಕ್ಸೂರಿಯಸ್ ರೂಮ್ಸ್ ಮತ್ತು ವಿಶಾಲ ಕನ್‍ವೆನ್ಶನ್ ಸವಲತ್ತು ಹೊಂದಿರುವ ಕರ್ನಾಟಕ ಕರಾವಳಿಯ ಏಕೈಕ ಸಂಸ್ಥೆ ಪ್ರತಿಯೊಂದು ರೂಮುಗಳು ಆರೋಗ್ಯಪೂರ್ಣ ವಾತಾವರಣದಿಂದ ಕೂಡಿದೆ. ಎಕ್ಸಿಕ್ಯೂಟಿವ್ ರೂಮ್, ಸೂಪರಿಯರ್ ರೂಮ್, ಕ್ಲಬ್ ರೂಮ್ಸ್, ಡಿಲಕ್ಸ್ ರೂಮ್ಸ್, ಸೂಟ್ ರೂಮುಗಳು ಇಲ್ಲಿವೆ. ಸ್ಥಳೀಯ ಆಹಾರ ಖಾದ್ಯಗಳು ಲಭಿಸುತ್ತವೆ. ಸ್ವಾಸ್ಥ್ಯ ಮೆರಿಡಿಯನ್ ನೇಚರ್ ಕ್ಯೂರ್ ಯೋಗ ಕೇಂದ್ರ ಇಲ್ಲಿದೆ. ಪ್ರವಾಸಿಗರಿಗೆ ಪ್ರಕೃತಿ ಚಿಕಿತ್ಸೆ, ಯೋಗ ಸೌಕರ್ಯ ಒದಗಿಸಲಾಗಿದೆ. 30 ಸಾವಿರ ಚದರ ವಿಸ್ತೀರ್ಣದ ಬೇ ರೇಸಾರ್ಟ್ ಎಂಡ್ ಸ್ಟಾ ವೀಕ್ಷಣೆಗೆ ಮನಸ್ಸಿಗೆ ಮುದ ನೀಡುತ್ತದೆ. ಸ್ಟಾದಲ್ಲಿ ಅತ್ಯಾಧುನಿಕ ಸ್ವಿಮ್ಮಿಂಗ್ ಪೂಲ್, ಜಿಮ್ ಜತೆಯಲ್ಲಿ ಚೆಸ್, ಕ್ಯಾರಮ್, ಸೂಕರ್, ಲಾಂಗ್ ಟೆನ್ನಿಸ್, ಪುಟ್ಬಾಲ್, ಬ್ಯಾಡ್ಮಿಂಟನ್, ವಾಲಿಬಾಲ್, ಕ್ರಿಕೆಟ್, ಎಟಿವಿ ಬೈಕ್ ರೈಡ್, ಗಾಲ್ಫ್ ಕಾರ್‍ರೈಡ್ ಮತ್ತು ಸೈಕ್ಲಿಂಗ್‍ಗೆ ಅವಕಾಶವಿದೆ ಎಂದರು.
2012ರಲ್ಲಿ ಯುವ ಇನ್ಪ್ರಾಸ್ಟ್ರಕ್ಟರ್ ಆರಂಭಗೊಂಡಿದ್ದು ವಿಶ್ವಖ್ಯಾತಿಯ ಕನ್ವೆನ್ಸನ್ ಸೆಂಟರ್, ಅಮ್ಯೂಸ್‍ಮೆಂಟ್ ಪಾರ್ಕ್, ಮಿನಾಲ್ ಬಾಂಕ್ವೆಟ್ ಮಿನಿ ಹಾಲ್, ಓಪೆರಾ ಪಾರ್ಕ್ ಅಲ್ಲದೆ ವಿಶಾಲ ಪಾರ್ಕಿಂಗ್ ಒಳಗೊಂಡಿದೆ. ಬಾನಯಾನ ಟ್ರೀ ಆವರಣದಲ್ಲಿ ತೆರೆದ ಅಂಕಣದಲ್ಲಿ 3 ಸಾವಿರ ಮಂದಿ ಕುಳಿತು ವೀಕ್ಷಿಸಬಹುದಾದ ಸುಂದರ ಪರಿಸರ ರೂಪಿಸಿದ್ದೇವೆ. ಪ್ರಸಕ್ತ ಸಾಲಿನಲ್ಲಿ ವಿಶ್ವದರ್ಜೆಯ ಸೌಂಡ್ ಪ್ರೂಪ್ ಬಾಂಕ್ವೆಟ್ ಹಾಲ್ ಗ್ರಾಮೀ ಬಾಲ್ ರೂಮ್ ಸೇವೆಗೆ ಸಜ್ಜುಗೊಂಡಿದೆ. 1200 ಮಂದಿ ಏಕಕಾಲದಲ್ಲಿ ಕುಳಿತು ವೀಕ್ಷಿಸಬಹುದಾದ ಸಭಾಂಗಣವಿದು. ಯುವ ಕನ್‍ವೆನ್ಶನ್ ಸೆಂಟರ್ ಮತ್ತು ಅಮ್ಯೂಸ್ ಮೆಂಟ್ ಅತಿ ಹೆಚ್ಚು ಜನಪ್ರಿಯತೆ ಗಳಿಸಿದೆ. ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಆಸ್ವಾದಿಸುತ್ತಿದ್ದಾರೆ. ಕುಟುಂಬ ಸಮೇತರಾಗಿ ಸಮಯ ಕಳೆಯಲು ಅನುಕೂಲವಾಗಿದೆ. ಕರಾವಳಿ ಜಿಲ್ಲೆಯಲ್ಲೇ ಸಂಸ್ಥೆಯ ಹೋಟೆಲ್ ಸಹಿತ ಇನ್ನಿತರ ವ್ಯವಸ್ಥೆಗಳು ಅತ್ಯಾಧುನಿಕ ಸೌಕರ್ಯಗಳಿಂದ ಕೂಡಿರುವ ಬಗ್ಗೆ ಪ್ರವಾಸಿಗರು ಮೆಚ್ಚುಗೆ ಸೂಚಿಸುತ್ತಿರುವುದು ಅತೀವ ಸಂತಸ ತಂದಿದೆ. ಸಂಸ್ಥೆಯು ದೇಶದ ಪ್ರವಾಸೋದ್ಯಮ ಬೆಳವಣಿಗೆಯಲ್ಲಿ ಕೈಜೋಡಿಸುತ್ತಿರುವ ಬಗ್ಗೆ ಹೆಮ್ಮೆಯಿದೆ ಎಂದರು.
ಈವರೆಗಿನ ಸಂಸ್ಥೆ ಕಾರ್ಯಚಟುವಟಿಕೆ ಗುರುತಿಸಿ 2015ರಿಂದ 2018ರ ತನಕ ನಿರಂತರವಾಗಿ ಅಂತರಾಷ್ಟ್ರೀಯ ಗಾಲ್ ಬಿಬೋ ಅವಾರ್ಡ್, 2016 ಮತ್ತು 17ರಲ್ಲಿ ಇಂಡಿಯಾ ಬೆಸ್ಟ್ ಹಾಸ್ಪಿಟಾಲಿಟಿ ಹಾಗೂ ಸೌತ್ ಬೆಸ್ಟ್ ರೆಸಾರ್ಟ್ ಪ್ರಶಸ್ತಿ, 2021ರಲ್ಲಿ ಟೈಮ್ಸ್ ಆಫ್ ಇಂಡಿಯಾದ ಬ್ಯುಸಿನೆಸ್ ಅವಾರ್ಡ್, ಅಗೋಧ ಬೆಸ್ಟ್ ರೆಸಾರ್ಟ್ ಅವಾರ್ಡ್, ಟ್ರಿಪ್ ಎಡ್ವೈಸರ್ ಬೆಸ್ಟ್ ಅವಾರ್ಡ್, ಬುಕ್ಕಿಂಗ್ ಡಾಟ್ ಕಾಮ್ ಟ್ರಾವೆಲ್ಲರ್ ಅವಾರ್ಡ್, ಕೊಚ್ಚಿ ಐಐಟಿಎಂ 2018ರಲ್ಲಿ ಇಂಡಿಯಾ ಇಂಟರ್‍ನೇಶನಲ್ ವೆಡ್ಡಿಂಗ್ ಡೆಸ್ಟಿನೇಶನ್ ಅವಾರ್ಡ್ ನೀಡಿ ಗೌರವಿಸಿದೆ ಎಂದರು.
ಯುವ ಮೆರಿಡಿಯನ್ ಬೇ ರೇಸಾರ್ಟ್ ಎಂಡ್ ಸ್ಟಾ ನಿಂದಾಗಿ ಬೆಳೆಯುತ್ತಿರುವ ನಗರಕ್ಕೆ ಪೂರಕವಾಗಿದೆ, ವಿಶಾಲ 1,58,000ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ಯುವ ಮೆರಿಡಿಯನ್ ಕನ್ವೆನ್ಸನ್ ಸೆಂಟರ್, ಮೆರಿಡಿಯನ್ ಬೇ ರೆಸಾರ್ಟ್ ಎಂಡ್ ಸ್ಪಾ, ಮಿನಾಲ್, ಓಪೆರಾ ಪಾರ್ಕ್, ರಾಯಲ್ ಪಾಮ್ (ತೆರೆದ ಸಭಾಂಗಣ), ಮೀಟಿಂಗ್ ಹಾಲ್, ಸೆನೆಟ್, ಪೂಲ್ ಡೆಕ್, ಬೋರ್ಡ್ ರೂಮ್ ಒಳಗೊಂಡಿದೆ. ಪ್ರವಾಸಿಗರಿಗೆ ಕುಂದಾಪುರ ಸುತ್ತಮುತ್ತಲಿನ ಅತ್ಯುತ್ತಮ ಬೀಚ್, ಪ್ರಾಚೀನ ದೇಗುಲ, ವಿಪುಲ ಸೌಂದರ್ಯದ ಪಶ್ಚಿಮಘಟ್ಟಗಳ ದರ್ಶನ ಮಾಡಿಸಲಾಗುತ್ತಿದೆ. ಹೆಲಿಟೂರಿಸಂ ಕುಂದಾಪುರಕ್ಕೆ ಮೊದಲಿಗೆ ಪರಿಚಯಿಸಿರುವ ಸಂಸ್ಥೆಯೂ ವಿಶ್ವದ ನಾನಾ ಕಡೆಯ ಪ್ರವಾಸಿಗರನ್ನು ಹೆಲಿಕಾಪ್ಟರ್ ಮೂಲಕ ಕುಂದಾಪುರದ ಬೀಚ್, ಪಶ್ಚಿಮಘಟ್ಟಗಳ ದರ್ಶನ ಮಾಡಿಸಿದೆ. ಹೋಟೆಲ್‍ನಲ್ಲಿ ತಂಗುವ ಪ್ರವಾಸಿಗರಿಗೆ ಸೀಸ್ಪೋರ್ಟ್ಸ್‍ನ ಅವಕಾಶವನ್ನು ಕೂಡ ಕಲ್ಪಿಸಲಾಗಿದೆ. ಪರಿಸರ ಸ್ನೇಹಿ ವಾತಾವರಣ ಇಲ್ಲಿಯದು. ಇಲ್ಲಿನ ಪ್ರಕೃತಿಯ ರಮ್ಯತೆಗಾಗಿ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಇದೀಗ ಆಗಮಿಸುತ್ತಿದ್ದಾರೆ ಎಂದರು.
ಯುವ ಮೆರಿಡಿಯನ್ ಗ್ರೂಫ್‌ನ ಮೆರಿಡಿಯನ್ ಬೇ ರೆಸಾರ್ಟ್ ಎಂಡ್ ಸ್ಟಾ ಪ್ರವಾಸಿಗರಿಗೆ, ಗ್ರಾಹಕರಿಗೆ ನೀಡುತ್ತಿರುವ ಸೇವೆಯಿಂದ ಕುಂದಾಪುರದ ಖ್ಯಾತಿ ಜಗದಗಲ ಪಸರಿಸಿದೆ. ಪ್ರಪಂಚದ ನಾನಾ ಕಡೆಯ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿರುವ ಹೆಮ್ಮೆಯ ನಡುವೆ ನಮ್ಮ ಸಂಸ್ಕೃತಿ, ಕಲೆ ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ.
ದೂರದರ್ಶನದ ಚಂದನವಾಹಿನಿಯ ಮಧುರ ಮಧುರ ವೀ ಮಂಜುಳಗಾನ ನಡೆದಿದೆ. ಯುವ ಮೆರಿಡಿಯನ್ ಗ್ರೂಫ್‌ನ ಮೆರಿಡಿಯನ್ ರೇಸಾರ್ಟ್ ಎಂಡ್ ಸ್ಪಾ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕುಂದಾಪುರ ನಾಗರಿಕರ ಸಹಕಾರ, ತುಂಬು ಪ್ರೋತ್ಸಾಹವೇ ಕಾರಣ. ಸಂಸ್ಥೆಯ ಸೇವೆಯ ಜತೆಯಲ್ಲಿ ಕುಂದಾಪುರದ ಎಲ್ಲಾ ಸಾಂಸ್ಕೃತಿಕ, ಸಾಮುದಾಯಿಕ ಚಟುವಟಿಕೆಯಲ್ಲಿ ಸಕ್ರೀಯವಾಗಿದೆ. ಕಳೆದ ಸಾಲಿನಲ್ಲಿ ಕೋಡಿ ಬೀಚ್ ಉತ್ಸವ ಅತ್ಯಂತ ಯಶಸ್ವಿಯಾಗಲು ಸಂಸ್ಥೆ ಶ್ರಮಿಸಿತ್ತು. ಕುಂದಾಪುರ ಉಡುಪಿ ಜಿಲ್ಲೆಯಲ್ಲಿಯೇ ಅತ್ಯಂತ ವಿಶಿಷ್ಟ ಪ್ರವಾಸೋದ್ಯಮ ತಾಣ. ಸಂಸ್ಥೆಯ ಮೂಲಕ ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಜಗತ್ತಿನ ನಾನಾ ಭಾಗದ ಜನರಿಗೆ ಉಣಬಡಿಸಬೇಕೆಂಬುವುದು ನಮ್ಮ ಧೈಯೋದ್ದೇಶವಾಗಿದೆ. ಕೇಂದ್ರ ಪ್ರವಾಸೋದ್ಯಮ ಸಚಿವರು, ಕೇಂದ್ರ ಸರಕಾರದ ಪ್ರವಾಸೋದ್ಯಮ ಇಲಾಖೆಯ ಜಂಟಿ ಕಾರ್ಯದರ್ಶಿ ಈಗಾಗಲೆ ಸಂಸ್ಥೆಯ ಸೇವೆಯನ್ನು ಮುಕ್ತಕಂಠದಿಂದ ಪ್ರಶಂಸಿದೆ. ಕುಂದಾಪುರ ವಿಪುಲ ಪ್ರವಾಸಿ ತಾಣ ಹೊಂದಿರುವ ಸ್ಥಳ. ಸಂಸ್ಥೆಗೆ ಲಂಡನ್, ಅಮೆರಿಕ, ಯುರೋಪ್ ದೇಶದ ಪ್ರವಾಸಿಗರು ನಿರಂತರವಾಗಿ ಬರುತ್ತಲಿದ್ದಾರೆ. ಅವರಿಗೆ ಇಲ್ಲಿನ ಪ್ರವಾಸಿತಾಣ, ಸಂಸ್ಕೃತಿ, ಆಚಾರ ವಿಚಾರ ತಿಳಿಸಿಕೊಡುವ ಮತ್ತು ಉತ್ತಮ ಸೇವೆ ಒದಗಿಸುವ ಕೆಲಸ ಮಾಡಿಕೊಂಡು ಬರಲಾಗುತ್ತಿದೆ. ಪ್ರವಾಸೋದ್ಯಮ ಆತಿಥ್ಯ ಉದ್ಯಮಕ್ಕೆ ಪ್ರಶಸ್ತಿ ಪ್ರೇರಣೆ ಒದಗಿಸಿದೆ. ಈ ಪ್ರಶಸ್ತಿ ಕುಂದಾಪುರಕ್ಕೆ ಸಲ್ಲುತ್ತದೆ. ಇದು ಇಲ್ಲಿಯ ಜನಸಮುದಾಯ ನೀಡಿರುವ ಪ್ರೋತ್ಸಾಹದಿಂದ ಸಾಧ್ಯವಾಗಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಯುವ ಮೆರಿಡಿಯನ್ ಸಮೂಹ ಸಂಸ್ಥೆಯ ಆಡಳಿತ ಪಾಲುದಾರರಾದ ವಿನಯ ಕುಮಾರ್ ಶೆಟ್ಟಿ, ಜನರಲ್ ಮ್ಯಾನೇಜರ್ ಶರತ್ ದಾಸ್ ಉಪಸ್ಥಿತರಿದ್ದರು.
Comments are closed.