ಉಡುಪಿ: ಎರಡು ವರ್ಷಗಳ ಕೊರೋನಾ ನಿರ್ಬಂಧಗಳ ಬಳಿಕ ಈ ವರ್ಷ ಉಡುಪಿ ಜಿಲ್ಲೆಯಲ್ಲಿ ಉತ್ತಮ ಮೀನುಗಾರಿಕೆ ಆಗುತ್ತಿದೆ. ಅಂಜಲ್, ಪಾಂಪ್ರಟ್, ಸಿಗಡಿ ಸಹಿತ ದುಬಾರಿ ಬೆಲೆಯ ಮೀನುಗಳು ಮೀನುಗಾರರ ಬಲೆಗೆ ಬಿದ್ದಿವೆ. ಅಲ್ಲದೆ ಬಂಗುಡೆ, ಬೂತಾಯಿ ಮೀನು ಯತೇಚ್ಚ ಪ್ರಮಾಣದಲ್ಲಿ ಸಿಕ್ಕ ಹಿನ್ನೆಲೆ ಅಗ್ಗದ ದರಕ್ಕೆ ಮಾರಾಟವಾಗಿದ್ದು ವರದಿಯಾಗಿತ್ತು. ಇದೀಗಾ ಮಲ್ಪೆಯಲ್ಲಿ ಮೀನುಗಾರರೊಬ್ಬರ ಬಲೆಗೆ 2 ಲಕ್ಷಕ್ಕೂ ಅಧಿಕ ಮೌಲ್ಯದ 22 ಕೆ.ಜಿಯ ಒಂದೇ ಮೀನು ಸಿಕ್ಕಿದೆ.
ಸ್ಥಳೀಯವಾಗಿ ಗೋಳಿ ಮೀನು ಎಂದು ಕರೆಯಲ್ಪಡುವ ಈ ಮೀನು ಆಳ ಸಮುದ್ರ ಮೀನುಗಾರರ ಬಲೆಗೆ ಬಿದ್ದಿದ್ದು ಬರೋಬ್ಬರಿ 2,34080 ರೂ.ಗೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ. ಈ ಮೀನು ಔಷಧಿ ತಯಾರಿಕೆಗೆ ಬಳಕೆಯಾಗುತ್ತದೆ ಎಂದು ಮೀನುಗಾರರು ಹೇಳಿದ್ದಾರೆ.
ಮಲ್ಪೆ ಬಂದರಿನಲ್ಲಿ ಹರಾಜು ಹಾಕುವಾಗ ವ್ಯಕ್ತಿಯೊಬ್ಬರು ಈ ದುಬಾರಿ ಮೀನನ್ನು ಖರೀದಿಸಿದ್ದು ಇದರ ವಿಡಿಯೋ ವೈರಲ್ ಆಗುತ್ತಿದೆ.
Comments are closed.