(ವರದಿ- ಯೋಗೀಶ್ ಕುಂಭಾಸಿ)
ಉಡುಪಿ: 102 ವರ್ಷ ವಯಸ್ಸಿನ ಬ್ರಹ್ಮಾವರ ತಾಲೂಕಿನನೈಲಾಡಿ ಸಂಪಿಕಟ್ಟೆ ಮನೆ ಸಂಕಿಯಜ್ಜಿ ಜ.16 ಸೋಮವಾರ ಸ್ವಗೃಹದಲ್ಲಿ ಕೊನೆಯುಸಿರೆಳೆದರು.
5 ತಲೆಮಾರುಗಳನ್ನು ಕಂಡ ಸಂಕಿಯಜ್ಜಿ 8 ಮಂದಿ ಮಕ್ಕಳು, ನಾಲ್ವರು ಅಳಿಯಂದಿರು, ಮೂವರು ಸೊಸೆಯರು, 33 ಮಂದಿ ಮೊಮ್ಮಕ್ಕಳು, 20 ಮರಿಮಕ್ಕಳು, ಓರ್ವ ಮರಿ ಮಗಳ ಮಗಳು ಸಹಿತ ಅಪಾರ ಬಂಧು ಬಾಂದವರನ್ನು ಅಗಲಿದ್ದಾರೆ.
ಕರಾವಳಿಯ ಖ್ಯಾತ ನಿರೂಪಕ, ಕಲಾವಿದ ಚೇತನ್ ನೈಲಾಡಿ ಸಂಕಿಯಜ್ಜಿಯವರ ಮರಿಮೊಮ್ಮಗ. ಇವರಿಬ್ಬರ ‘ಹಳಿ ಹಂಬ್ಲ್’ (ಹಳೆಯ ನೆನಪು) ಎಂಬ ಕುಂದಾಪುರ ಕನ್ನಡದ ಸಂದರ್ಶನ ಭೂಮಿಕೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗಿತ್ತು. ಅದರಲ್ಲಿ ಸಂಕಿಯಜ್ಜಿ ತಮ್ಮ ಹಳೆ ಜೀವನ ಶೈಲಿಯ ನೆನಪುಗಳನ್ನು ಯಾವುದೇ ಮರೆವಿಲ್ಲದೆ ತೆರೆದಿಟ್ಟಿದ್ದರು.
Comments are closed.