ಕರ್ನಾಟಕ

ಶಿವಮೊಗ್ಗ ವಿಮಾನ ನಿಲ್ದಾಣ ಅತ್ಯಂತ ಭವ್ಯ, ಸುಂದರವಾಗಿ ನಿರ್ಮಾಣವಾಗಿದೆ: ಏರ್‌ಪೋರ್ಟ್ ಉದ್ಘಾಟಿಸಿ ಪ್ರಧಾನಿ ಮೋದಿ

Pinterest LinkedIn Tumblr

ಶಿವಮೊಗ್ಗ: ಶಿವಮೊಗ್ಗ–ಭದ್ರಾವತಿ ನಗರಗಳ ಮಧ್ಯದ ಸೋಗಾನೆ ಬಳಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಫೆ.27 ಸೋಮವಾರ ಉದ್ಘಾಟಿಸಿದರು. 449 ಕೋಟಿ ವೆಚ್ಚದಲ್ಲಿ 778 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ.

ಹವಾಯಿ ಚಪ್ಪಲಿ ಹಾಕುವವರು ವಿಮಾನದಲ್ಲಿ ಓಡಾಟ ನಡೆಸಬೇಕು ಎಂಬ ಆಶಯದೊಂದಿಗೆ ಉಡಾನ್ ಯೋಜನೆ ಆರಂಭಿಸಲಾಗಿದೆ ಎಂದು ಪ್ರಧಾನಿ ಹೇಳುವ ಮಾತಿನೊಂದಿಗೆ ಕಿರುಚಿತ್ರ ಆರಂಭವಾಗಿ ವಿಮಾನ ನಿಲ್ದಾಣ ಹೊಂದಿರುವ ಸವಲತ್ತುಗಳ ಬಗ್ಗೆಯೂ ಮಾಹಿತಿ ಆರಂಭವಾಯಿತು. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ₹3600 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಆರಂಭದಲ್ಲಿಯೇ ಕನ್ನಡದಲ್ಲಿ ಮಾತು ಆರಂಭಿಸಿದರು. ರಾಷ್ಟ್ರಕವಿ ಕುವೆಂಪು ಅವರ ಪುಣ್ಯಭೂಮಿಗೆ ನಮಿಸುತ್ತೇನೆ. ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ ಸಾವಿರಾರು ಕೋಟಿ ಯೋಜನೆಗಳ ಶಿಲಾನ್ಯಾಸ ಮಾಡುವ ಅವಕಾಶ ಸಿಕ್ಕಿದೆ. ಇಂದು ಶಿವಮೊಗ್ಗಕ್ಕೆ ತನ್ನದೇ ಏರ್​​ಪೋರ್ಟ್​ ಸಿಕ್ಕಿದೆ. ಇಲ್ಲಿಯ ಜನರ ಬಹುದಿನಗಳ ಕನಸು ಈಡೇರಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಅತ್ಯಂತ ಭವ್ಯ ಮತ್ತು ಸುಂದರವಾಗಿ ನಿರ್ಮಾಣವಾಗಿದೆ. ನಿರ್ಮಾಣದಲ್ಲಿ ಕರ್ನಾಟಕದ ತಂತ್ರಜ್ಞಾನ ಹೊಂದಿದೆ. ಈ ವಿಮಾನ ನಿಲ್ದಾಣ ಯುವ ಪೀಳಿಗೆಯ ಕನಸು ನನಸು ಮಾಡಲಿದೆ. ಇಂದು ಕುಡಿಯುವ ನೀರಿನ ಯೋಜನೆಗಳು ಸೇರಿದಂತೆ ಹಲವು ಯೋಜನೆಗಳಿಗೆ ಶಿಲಾನ್ಯಾಸ ಮಾಡಲಾಗಿದೆ ಎಂದರು.

Comments are closed.