ಕರ್ನಾಟಕ

ಹುಲಿ ಸಂರಕ್ಷಣೆ ಯೋಜನೆಗೆ ಸುವರ್ಣ ಸಂಭ್ರಮ: ಬಂಡೀಪುರ ಅಭಯಾರಣ್ಯದಲ್ಲಿ ಪ್ರಧಾನಿ ಮೋದಿ ಸಫಾರಿ

Pinterest LinkedIn Tumblr

ಚಾಮರಾಜನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು (ಭಾನುವಾರ) ಬಂಡೀಪುರ ಅಭಯಾರಣ್ಯದಲ್ಲಿ ಸಫಾರಿ ನಡೆಸಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಸಫಾರಿ ನಡೆಸಿದ ಪ್ರಧಾನಿ ಮೋದಿಯವರು ಬಂಡೀಪುರ ಕ್ಯಾಂಪ್ ನ, ವನ್ಯಜೀವಿ, ಅರಣ್ಯ ಸಂಪತ್ತು ವೀಕ್ಷಿಸಿದರು.

ಪ್ರಧಾನಿ ಮೋದಿಯವರು ಬಂಡೀಪುರದಲ್ಲಿ ಹುಲಿ ಸಂರಕ್ಷಣೆ ಯೋಜನೆಯ ಸುವರ್ಣ ವರ್ಷಾಚರಣೆ ಅಂಗವಾಗಿ ಅಂಚೆಚೀಟಿ ಬಿಡುಗಡೆ ಮಾಡಿದರು. ಮೈಸೂರು-ಚಾಮರಾಜನಗರ ಜಿಲ್ಲೆಯಲ್ಲಿ ನಾನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವ ಮೋದಿಯವರು ಇಂದು ಬೆಳಗ್ಗೆ ಬಂಡೀಪುರ ಅಭಯಾರಣ್ಯದಲ್ಲಿ ಸುಮಾರು 2 ಗಂಟೆಗಳ ಕಾಲ ಹುಲಿ ಸಫಾರಿಯಲ್ಲಿ ಭಾಗವಹಿಸಿ 20 ಕಿಲೋ ಮೀಟರ್ ಸಾಗಿದರು. ಹುಲಿ ವೀಕ್ಷಣೆಯನ್ನು ಮಾಡಿದರು.

ಸಫಾರಿಗೆ ಸೂಕ್ತವಾಗುವ ವಿಶೇಷ ಉಡುಪಿನಲ್ಲಿ ಪ್ರಧಾನಿ ಮೋದಿ ಪಯಣ ಮಾಡಿದ್ದು ಅದರ ಫೋಟೋ, ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಬಂಡೀಪುರಕ್ಕೆ ಪ್ರಧಾನಿಯೊಬ್ಬರು ಬರುತ್ತಿರುವುದು ಇದೇ ಮೊದಲಾಗಿದ್ದು ಹುಲಿ ಸಂರಕ್ಷಣೆ ಯೋಜನೆಯ ಸುವರ್ಣ ಸಂಭ್ರಮದಲ್ಲಿ ವಿಶೇಷವಾಗಿದೆ.

ಬಂಡೀಪುರ, ಮಧುಮಲೈ ಕಾಡಿಗೆ ಭೇಟಿ ನೀಡಿದ ನಂತರ ಪ್ರಧಾನಿ ಮೋದಿಯವರು ಮೈಸೂರಿಗೆ ತೆರಳಲಿದ್ದಾರೆ. ಅಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಹುಲಿ ಯೋಜನೆ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Comments are closed.