ವಯನಾಡ್: ಭೂಕುಸಿತದಿಂದ ಕೊಚ್ಚಿ ಹೋಗಿರುವ ವಯನಾಡಿನ ಮುಂಡಕೈಗೆ ತೆರಳಲು ಭಾರತೀಯ ಸೇನೆ ಬೈಲಿ ಸೇತುವೆಯನ್ನು ಸಂಪೂರ್ಣ ಸಿದ್ಧಪಡಿಸಿದೆ. ವಯನಾಡ್‌ನ ಚೂರಲ್‌ವುಲದಿಂದ ಮುಂಡಕೈಗೆ ಸಂಪರ್ಕ ಕಲ್ಪಿಸಲು 31 ಗಂಟೆಗಳಲ್ಲಿ ಸೇತುವೆ ನಿರ್ಮಿ ಸಲಾಗಿದೆ. ಎಂಇಜಿ ಗ್ರೂಪ್‌ನ ಯೋಧರು ಈ ಸಾಧನೆ ಮಾಡಿದ್ದಾರೆ. ಜನರ ರಕ್ಷಣೆ ಗಾಗಿ ಬೈಲಿ ಸೇತುವೆ ಫಲಕಗಳನ್ನು ಬಳಸಿ 190 ಅಡಿ ಉದ್ದದ ಸೇತುವೆ ನಿರ್ಮಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಎಂಇಜಿಯ ಹಿರಿಯ ಅಧಿಕಾರಿ ವಯನಾಡ್‌ನಲ್ಲಿ ನಡೆಸುತ್ತಿರುವ ಕಾರ್ಯಾಚರಣೆ ಸವಾಲಿನದ್ದಾಗಿದೆ ಈ ಸೇತುವೆಯಿಂದ ಚೂರಲ್‌ವುಲ ಮತ್ತು ಮುಂಡಕೈಯಲ್ಲಿ ಸಿಲುಕಿರುವ ಸಂತ್ರಸ್ತರನ್ನು ಪಾರು ಮಾಡಲು, ಪರಿಹಾರ ಸಾಮಗ್ರಿಗಳನ್ನು ಕೊಂಡೊಯ್ಯಲು ನೆರವಾಗಲಿದೆ ಎಂದರು.
ಸೇತುವೆ 190 ಅಡಿ ಉದ್ದವಿದ್ದು ಬೈಲಿ ಸೇತುವೆ ಒಂದು ಬಾರಿಗೆ 24 ಟನ್ ತೂಕವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಹಿಟಾಚಿ ಸೇರಿದಂತೆ ದೊಡ್ಡ ರಕ್ಷಣಾ ಸಾಧನಗಳನ್ನು ಬೈಲಿ ಸೇತುವೆಯ ಮೂಲಕ ಮುಂಡಕೈಗೆ ಸಾಗಿಸಬಹುದು. 140 ಮಂದಿ ಯೋಧರು ಅದರ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ.
ಬೈಲಿ ಸೇತುವೆ ಎಂಬ ವಿಶಿಷ್ಟವಾದ ಮಿಲಿಟರಿ ಸೇತುವೆಯನ್ನು 2ನೇ ಮಹಾಯುದ್ಧ ಸಮಯದಲ್ಲಿ ಬ್ರಿಟಿಷ್ ಎಂಜಿನಿಯರ್ ಸರ್ ಡೊನಾಲ್ಡ್ ಬೈಲಿ ಅಭಿವೃದ್ಧಿ ಪಡಿಸಿದರು. ಯುದ್ಧ ವಲಯಗಳಲ್ಲಿ ತ್ವರಿತವಾಗಿ ನಿಯೋಜಿಸಬಹುದಾದ ತ್ವರಿತ- ಜೋಡಣೆ, ಪೋರ್ಟಬಲ್ ಸೇತುವೆಗಳ ಅಗತ್ಯಕ್ಕೆ ಅನುಸಾರವಾಗಿ ವಿನ್ಯಾಸ ಮಾಡಲಾಗುತ್ತದೆ.
Comments are closed.