ಕರಾವಳಿ

ಸೌಹಾರ್ದತೆಗೆ ಸಾಕ್ಷಿಯಾಗಿ ಸಂಭ್ರಮದಿಂದ ಜರುಗಿದ ಕುಂದಾಪುರ ಉರೂಸ್..!

Pinterest LinkedIn Tumblr

ಕುಂದಾಪುರ: ನಗರದ ಫೆರ್ರಿ ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ಹಝ್ರತ್ ಸುಲ್ತಾನ್ ಸಯ್ಯಿದ್ ಯೂಸೂಫ್ ವಲಿಯುಲ್ಲಾಹಿ ದರ್ಗಾದ ವಾರ್ಷಿಕ ಉರೂಸ್ ಮುಬಾರಕ್ ಮತ್ತು ಸಂಜೆ ಬೃಹತ್ ಸಂದಲ್ ಮೆರವಣಿಗೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು.

2 ಸಾವಿರಕ್ಕೂ ಅಧಿಕ ಮಂದಿ ಒಗ್ಗೂಡುವಿಕೆಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಹಝ್ರತ್ ಸುಲ್ತಾನ್ ಯೂಸೂಫ್ ವಲಿಯುಲ್ಲಾಹಿ ವಂಶಸ್ಥರಾದ ಬಶೀರ್ ತಂಙಳ್ ಹಾಗೂ ವಂಶಸ್ಥರು ಲಕ್ಷದ್ವೀಪದಿಂದ ಆಗಮಿಸಿ ಅವರ ದುವಾ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮೂರು ದಿನಗಳ ಕಾಲ ನಡೆದ ಉರೂಸ್ ಕಾರ್ಯಕ್ರಮದ ನೇತೃತ್ವವನ್ನು ಕಾಸೀಂ ಕೋಯಾ ವಹಿಸಿದ್ದರು. ಜಾಮೀಯಾ ಮಸೀದಿ ಕಾರ್ಯದರ್ಶಿ ತಬ್ರೇಝ್, ಉಪಾಧ್ಯಕ್ಷ ಅಬು ಮಹಮ್ಮದ್, ಸಿದ್ಧಿಕ್ ಹಂಗಳೂರು, ಅಯೂಬ್ ಕೋಯಾ, ಕೋಡಿ ಸಲೀಂ ಮೊದಲಾದವರು ಉಪಸ್ಥಿತರಿದ್ದರು. ಒಂದೆಡೆ ನಗರದಲ್ಲಿ ನವರಾತ್ರಿ ಸಂಭ್ರಮವಿದ್ದರೆ ಮತ್ತೊಂದೆಡೆ ಉರೂಸ್ ಸಂಭ್ರಮವಿದ್ದು ಸೌಹಾರ್ದಯುತವಾಗಿ ಎರಡು ಕಾರ್ಯಕ್ರಮಗಳು ಜರುಗಿದವು.

Comments are closed.