ಮದುವೆಯಾದ ಗಂಡಸರಿಗಿಂತ ಬ್ರಹ್ಮಚಾರಿಗಳಿಗೆ ಅತಿ ಹೆಚ್ಚು ಕನಸುಗಳು ಇರುತ್ತವೆ. ಅದರಲ್ಲೂ ಅವರಿಗೆ ಮುಂದೆ ಭವಿಷ್ಯದಲ್ಲಿ ತಮ್ಮ ಬಾಳ ಸಂಗಾತಿಯಾಗಿ ಬರುವ ಹೆಣ್ಣಿನ ಬಗ್ಗೆ ಹಲವಾರು ಕಲ್ಪನೆಗಳು ಮತ್ತು ಕನವರಿಕೆಗಳು ಇರುತ್ತವೆ. ಅದಕ್ಕೆ ಒಂದು ರೋಲ್ ಮಾಡೆಲ್ ಅವರಿಗೆ ಬೇಕಾಗಿರುತ್ತದೆ. ಅವರ ರೋಲ್ ಮಾಡೆಲ್ ಆಗಿ, ಅಥವಾ ಅವರ ಮನಸೂರೆಗೊಳ್ಳುವ ಒಂದು ಕಲ್ಪನೆಯಾಗಿ ಅವರಿಗೆ ಮೊದಲು ಕಾಣಿಸುವುದು ಒಂದು ಮದುವೆಯಾದ ಹೆಂಗಸು.
ಹೌದು, ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಮದುವೆಯಾದ ಹೆಂಗಸರ ಮೇಲೆ ಬ್ರಹ್ಮಚಾರಿಗಳಿಗೆ ಅದೇನೋ ಸೆಳೆತವಿರುತ್ತದೆ. ಅದು ಕೇವಲ ಸೌಂದರ್ಯವಷ್ಟೇ ಅಲ್ಲ, ಮದುವೆಯಾದ ಹೆಂಗಸರಲ್ಲಿ ಕಾಣುವ ಆ ಗತ್ತು, ಆತ್ಮವಿಶ್ವಾಸ, ಜೀವನೋಲ್ಲಾಸ ಮತ್ತು ಅವರು ತಮ್ಮ ಪತಿಯ ಜೊತೆಗೆ ನಗು ನಗುತ್ತಾ ಅಲ್ಲಿ ಇಲ್ಲಿ ವಿಹರಿಸುವುದನ್ನು ನೋಡಿ ಇವರು ಸಹ ಕನಸುಗಳನ್ನು ಕಾಣುತ್ತಿರುತ್ತಾರೆ. ಬಹುತೇಕ ಸಮೀಕ್ಷೆಗಳಲ್ಲಿ ಹುಡುಗರು ತಮಗೆ ತಮ್ಮ ನೆರೆಹೊರೆಯ ಮದುವೆಯಾದ ಹೆಂಗಸಿನ ಮೇಲೆ ಅಥವಾ ಕಚೇರಿಯಲ್ಲಿರುವ ಸಹೋದ್ಯೋಗಿಯ ಮೇಲೆ ತಮಗೆ ಕ್ರಷ್ ಇದೆ ಎಂದು ತಿಳಿಸಿದ್ದಾರೆ.
ಗಂಡಸರು ತಮಗೆ ಯಾಕೆ ಮದುವೆಯಾದ ಹೆಂಗಸರ ಕುರಿತಾಗಿ ಯಾಕೆ ಇಂತಹ ಸೆಳೆತ ಬರುತ್ತದೆ ಎಂಬುದಕ್ಕೆ ಹಲವಾರು ಕಾರಣಗಳು ಇರುತ್ತವೆ. ಜೊತೆಗೆ ಮದುವೆಯಾದ ಹೆಂಗಸರಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಗಂಡಸರು ಹಿಂಜರಿಯುತ್ತಾರಾದರು, ಮನಸ್ಸಿನಲ್ಲಿಯೇ ಅವರನ್ನು ನೋಡಿಕೊಂಡು ಮಂಡಿಗೆ ತಿನ್ನುತ್ತಾ ಇರುತ್ತಾರೆ. ಅದು ಅವರ ಕೈಗೆಟುಕದ ದ್ರಾಕ್ಷಿ ಎಂದು ಗೊತ್ತಿದ್ದರು ಅದರ ಮೇಲೆ ಆಸೆಯನ್ನು ಮಾತ್ರ ಇರಿಸಿಕೊಂಡಿರುತ್ತಾರೆ.
ಮದುವೆಯಾದ ಹೆಂಗಸು ಆತ್ಮ ವಿಶ್ವಾಸವನ್ನು ಹೊಂದಿರುತ್ತಾಳೆ
ಒಂಟಿಯಾಗಿರುವ ಹೆಂಗಸರು ಡೇಟಿಂಗ್ ಮಾಡಲು ಹಿಂದೇಟು ಹಾಕುತ್ತಾರೆ. ಆದರೆ ಅದೇ ಮದುವೆಯಾದ ಹೆಂಗಸರು ಡೇಟಿಂಗ್ ಮಾಡಲು ಸ್ವಲ್ಪ ಅಳುಕು ಇರುವುದಿಲ್ಲ. ಹೀಗಾಗಿ ಹುಡುಗರು ಮದುವೆಯಾದ ಹೆಂಗಸರತ್ತ ಹೆಚ್ಚಿಗೆ ಗಮನ ಹರಿಸುತ್ತಾರೆ.
ಗಂಡಸರಿಗೆ ಏನು ಬೇಕು ಎಂದು ಅವರಿಗೆ ಗೊತ್ತಿರುತ್ತದೆ
ಮದುವೆಯಾದ ಹೆಂಗಸರಿಗೆ ಅನುಭವ ಇರುತ್ತದೆ. ಅವರಿಗೆ ಗಂಡಸರ ಇಷ್ಟಾನಿಷ್ಟಗಳ ಬಗ್ಗೆ ತಿಳುವಳಿಕೆ ಇರುತ್ತದೆ. ಹೀಗಾಗಿ ಗಂಡಸರು ಅವರನ್ನು ಇಷ್ಟಪಡುತ್ತಾರೆ ಎಂದು ಮನೋವಿಜ್ಞಾನಿಗಳು ತಿಳಿಸುತ್ತಾರೆ. ಇದು ಅವರ ಭಾವನಾತ್ಮಕ ಅಗತ್ಯವಾಗಿರುತ್ತದೆ ಎಂಬುದು ಅವರ ಅಭಿಮತ.
ಅವರು ತುಂಬಾ ಆರಾಮವಾಗಿರುತ್ತಾರೆ
ಮದುವೆಯಾದ ಹೆಂಗಸರು ಆರಾಮವಾಗಿ ಇರುತ್ತಾರೆ. ಮುಜುಗರ, ನಾಚಿಕೆ ಸಂಕೋಚ ಇತ್ಯಾದಿ ಅವರನು ಭಾದಿಸುವುದಿಲ್ಲ ಎಂಬ ನಂಬಿಕೆ ಹುಡುಗರಿಗೆ ಇರುತ್ತದೆ. ಇತರರ ಜೊತೆಗೆ ಬೆರೆಯಲು ಅವರು ಹಿಂದೇಟು ಹಾಕುವುದಿಲ್ಲ. ಹೀಗೆ ಅವರಿಗೆ ಅಳುಕು, ಅಂಜಿಕೆಗಳು ಇರುವುದಿಲ್ಲವಾದ್ದರಿಂದ ಹುಡುಗರಿಗೆ ಆ ಗುಣ ಇಷ್ಟವಾಗುತ್ತದೆ.
ಅವರಿಗೆ ಅಭದ್ರತೆಯ ಭಾವ ಇರುವುದಿಲ್ಲ
ಮದುವೆಯಾದ ಹೆಂಗಸರು ಹುಡುಗಿಯರಂತೆ ಅಭದ್ರತೆಯ ಭಾವನೆಯನ್ನು ಹೊಂದಿರುವುದಿಲ್ಲ. ಅವರು ಜೀವನದಲ್ಲಿ ತಮಗೆ ಒಂದು ಭದ್ರತೆಯನ್ನು ಏರ್ಪಡಿಸಿಕೊಂಡಿರುವ ಭಾವನೆಯನ್ನು ಹೊಂದಿರುತ್ತಾರೆ. ಇದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವ ಮಾತು ಸಹ ಆಗಿರುತ್ತದೆ.
ಅವರನ್ನು ಪಡೆಯಲು ಆಗುವುದಿಲ್ಲ
ಮದುವೆಯಾದ ಹೆಂಗಸರನ್ನು ಪಡೆಯುವುದು ಅಷ್ಟು ಸುಲಭವಲ್ಲ. ಇದು ಅವರನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಸಿಗದೆ ಇರುವ ವಸ್ತುಗಳ ಬಗ್ಗೆ ಗಂಡಸರಿಗೆ ಒಂದು ಬಗೆಯ ಮೋಹ ಇರುತ್ತದೆ. ಅದು ಈ ಹೆಂಗಸರ ವಿಚಾರದಲ್ಲಿ ಸಹ ಇರುತ್ತದೆ.
ಅವರು ಸಣ್ಣಗೆ ಇರುವುದಿಲ್ಲ….
ಮದುವೆಯಾದ ಹೆಂಗಸರು ತೆಳ್ಳಗೆ, ಸಣ್ಣಗೆ ಇರುವುದಿಲ್ಲ. ಅವರು ನೋಡಲು ಚೆನ್ನಾಗಿರುತ್ತಾರೆ. ದಪ್ಪ ಎಂದು ಹೇಳಲು ಬಾರದಷ್ಟು ಸ್ವಲ್ಪ ದಪ್ಪಗೆ ಇರುತ್ತಾರೆ. ಅದರಲ್ಲಿಯೂ ಸೀರೆ ಉಟ್ಟು ಹೆಂಗಸು ಎಂಬ ಪದಕ್ಕೆ ಅರ್ಥ ತರುವಂತೆ ಓಡಾಡುವ ಅವರನ್ನು ಕಂಡರೆ ಹುಡುಗರಿಗೆ ಬಿಸಿಯುಸಿರು ಬರುತ್ತದೆ.
Comments are closed.