ಬೆಂಗಳೂರು: ಸಾಲುಮರದ ತಿಮ್ಮಕ್ಕ ಅವರಿಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ಜೂ.25ಶನಿವಾರ) ನಿವೇಶನ ಪತ್ರವನ್ನು ಹಸ್ತಾಂತರಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೆ ಬೊಮ್ಮಾಯಿ ಅವರನ್ನು ಸಾಲುಮರದ ತಿಮ್ಮಕ್ಕ ಭೇಟಿಯಾಗಿದ್ದರು. ಈ ವೇಳೆ ಒಂದು ಸೈಟು ಹಾಗೂ ಮತ್ತಷ್ಟು ಮರ ಬೆಳೆಸಿ ಪೋಷಿಸಲು ಸೂಕ್ತ ಜಮೀನು ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಅದರಂತೆ ತಿಮ್ಮಕ್ಕ ಅವರಿಗೆ ಬಿಡಿಎ ವತಿಯಿಂದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 50X80 ಅಳತೆಯ ಸೈಟ್ ನೀಡಲಾಗಿದ್ದು, ಇಂದು ನಿವೇಶನ ಪತ್ರವನ್ನು ಹಸ್ತಾಂತರಿಸಿದ್ದಾರೆ.
ಸಾಲುಮರದ ತಿಮ್ಮಕ್ಕ ಅವರು ಜೂನ್ 22ರಂದು ಬೆಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದ ವೇಳೆ ಒಂದು ಸೈಟು ಹಾಗೂ ಮರಗಳನ್ನು ಬೆಳೆಸಲು ತಿಮ್ಮಕ್ಕ ಅವರಿಗೆ ಸೂಕ್ತ ಜಮೀನು ನೀಡಲು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದರು.
ಸಿಎಂ ಸೂಚನೆಯಂತೆ ಬಿಡಿಎ ಅಧ್ಯಕ್ಷ ಎಸ್ಆರ್ ವಿಶ್ವನಾಥ್, ಬಿಡಿಎ ಆಯುಕ್ತರಾದ ರಾಜೇಶ್ ಗೌಡ ಸೈಟ್ ನೋಂದಣಿ ಮಾಡಿದ್ದು, ಜೂನ್ 22ಕ್ಕೆ ಸಾಲುಮರದ ತಿಮ್ಮಕ್ಕನಿಗೆ ನಿವೇಶನ ಹಂಚಿಕೆಯಾಗಿದೆ.
ಕೆಂಪೇಗೌಡ ಬಡಾವಣೆಯ 7ನೇ ಬ್ಲಾಕ್ನಲ್ಲಿರುವ ನಿವೇಶನದ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಸಾಲುಮರದ ತಿಮ್ಮಕ್ಕನಿಗೆ ಬಿಡಿಎ ವತಿಯಿಂದ ನಿವೇಶನ ಪತ್ರ ನೀಡಲಾಗಿತ್ತು. ಇಂದು ಸಿಎಂ ರೇಸ್ ಕೋರ್ಸ್ ನಿವಾಸದಲ್ಲಿ ಸ್ವತಃ ತಾವೇ ಹಸ್ತಾಂತರಿಸಿದ್ದಾರೆ. ನಿವೇಶನಕ್ಕಾಗಿ ಸಮಾಜ ಕಲ್ಯಾಣ ಇಲಾಖೆ 1.12 ಕೋಟಿ ರೂ ಹಣ ಪಾವತಿಸಿದೆ ಎಂದು ಬಿಡಿಎ ಆಯುಕ್ತ ರಾಜೇಶ್ ಗೌಡ ತಿಳಿಸಿದ್ದಾರೆ
Comments are closed.