ಮದುವೆ ಆಗಬೇಕು ಅನ್ನುವ ತರಾತುರಿ ಪುರುಷರಷ್ಟು ಮಹಿಳೆಯರಿಗೆ ಇಲ್ಲ ಅಂತ ಇತ್ತೀಚಿನ ಸಂಶೋಧನೆಯೊಂದು ಹೇಳಿದೆ. ಮಹಿಳೆಯರು ಮದುವೆ ಅಂತೆಲ್ಲ ಕನಸು ಕಾಣುವುದನ್ನು ಬಿಟ್ಟು ಸ್ವಾವಲಂಬಿ ಬದುಕಿನತ್ತ ಹೆಚ್ಚು ಯೋಚಿಸುತ್ತಾರಂತೆ. ಉದ್ಯೋಗವನ್ನು ಗಂಭೀರವಾಗಿ ತೆಗೆದುಕೊಂಡವರು ಅಂದರೆ ಆರ್ಥಿಕವಾಗಿ ಸ್ವಾವಲಂಬಿಯಾಗಿರುವ, ತಮ್ಮದೇ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕು ಅನ್ನುವ ಮಹಿಳೆಯರು ಮದುವೆಯ ವಿಷಯದಲ್ಲಿ ಜಾಸ್ತಿ ತಲೆ ಕೆಡಿಸಿಕೊಳ್ಳುವುದಿಲ್ಲವಂತೆ.
ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ವಾಸಿಸುವ ಪುರುಷರು ತಮ್ಮ ಜೀವನ ಸಂಗಾತಿ ವಿಷಯದಲ್ಲಿ ಅವಳ ಸೌಂದರ‍್ಯಕ್ಕಿಂತ ಅವಳು ಎಷ್ಟು ಸ್ವತಂತ್ರವಾಗಿ ಎಲ್ಲವನ್ನು ನಿಭಾಯಿಸಬಲ್ಲಳು , ಅವಳ ಧೈರ‍್ಯ, ಬುದ್ಧಿವಂತಿಕೆ ನೋಡಿ ಮಣೆ ಹಾಕುತ್ತಾರಂತೆ. ಹಾಗಂತ ಸಮೀಕ್ಷೆಯೊಂದು ಹೇಳಿದೆ. ಮಹಾನಗರಗಳಲ್ಲಿ ಬದುಕಲು ಸ್ವತಂತ್ರ ವ್ಯಕ್ತಿತ್ವ ಮುಖ್ಯ. ಎಲ್ಲವನ್ನು ಒಬ್ಬಳೇ ನಿಭಾಯಿಸುವಂತಹ ಆತ್ಮಸ್ಥೈರ‍್ಯ ಬೇಕು. ಬಹುಶಃ ಅದೇ ಕಾರಣಕ್ಕೆ ತಮ್ಮ ಜೀವನ ಸಂಗಾತಿಯಲ್ಲಿ ಅಂಥದ್ದೊಂದು ಗುಣ ಬಯಸುತ್ತಾರೆ.
Comments are closed.