ಯಾವುದೇ ದಂಪತಿಗಳಿಗೆ ತಮ್ಮ ಲೈಂಗಿಕ ಜೀವನದ ಬಗ್ಗೆ ಆಸಕ್ತಿ ಕಡಿಮೆಯಾಗುವುದು ಸಹಜವಾದ ಸಂಗತಿಯಾಗಿದೆ. ತಮಗೆ ಯಾವುದೋ ದೈಹಿಕ ಮತ್ತು ಮಾನಸಿಕ ಒತ್ತಡದಿಂದ ತಮ್ಮ ಲೈಂಗಿಕ ಜೀವನವು ಸಪ್ಪೆ ಆಗುತ್ತಿದೆ ಎಂದು ಅನ್ನಿಸುವುದು ಕೂಡ ಸಹಜ.ಇದನ್ನು ಕೆಲವರು ತುಂಬಾ ಗಂಭೀರವಾಗಿ ತೆಗೆದುಕೊಂಡು ತಮ್ಮ ಲೈಂಗಿಕ ಜೀವನ ಉತ್ತಮ ಪಡಿಸಿಕೊಳ್ಳಲು ಬೇರೆ ಬೇರೆ ಮಾರ್ಗಗಳನ್ನು ಅನುಸರಿಸುತ್ತಾರೆ, ಇನ್ನೂ ಕೆಲವರು ಅವರಿಗಿರುವ ಒತ್ತಡವನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಪರದಾಡುತ್ತಾರೆ. ತಮ್ಮ ಲೈಂಗಿಕ ಜೀವನದಲ್ಲಿ ನಿರಾಸಕ್ತಿ ಮೂಡುತ್ತಿದೆ, ಅದರಿಂದಾಗಿ ಗಂಡ ಹೆಂಡತಿ ಮಧ್ಯೆ ಅನೇಕ ಮನಸ್ತಾಪಗಳಿಗೆ ಕಾರಣವಾಗುತ್ತಿದೆ ಮತ್ತು ಕೆಲವೊಮ್ಮೆ ವೈವಾಹಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಈ ರೀತಿಯ ಯಾವುದೇ ಪರಿಣಾಮಕ್ಕೆ ತುತ್ತಾಗಬಾರದು ಎಂದರೆ ನಿಮಗಾಗಿ ಇಲ್ಲಿವೆ ಕೆಲವು ಟಿಪ್ಸ್.
“ಪರಿಚಿತವಿರುವುದು ಬಹಳಷ್ಟು ಬಾರಿ ಲೈಂಗಿಕ ಜೀವನದ ಬಗ್ಗೆ ಆಸಕ್ತಿ ಕಡಿಮೆ ಮಾಡುತ್ತದೆ” ಎಂದು ಲೇಖಕಿ ಆಲಿಸನ್ ಮೂನ್ ಹೇಳಿದ್ದಾರೆ.
1. ನಿಮ್ಮ ದೇಹದಲ್ಲಿರುವ ಶಕ್ತಿಯನ್ನು ಹೊಸ ರೀತಿಯಲ್ಲಿ ಬಿಡುಗಡೆಗೊಳಿಸಿ…
“ನೀವು ನೃತ್ಯ ಮಾಡಿ ಅಥವಾ ಯೋಗವನ್ನೂ ಪ್ರಯತ್ನಿಸಬಹುದು, ಇದರಿಂದ ನೀವು ನಿಮ್ಮ ದೇಹದಲ್ಲಿರುವಂತಹ ಶಕ್ತಿಯನ್ನು ಹೊಸ ರೀತಿಯಲ್ಲಿ ಬಿಡುಗಡೆ ಮಾಡಬಹುದಾಗಿದೆ” ಎಂದು ಮೂನ್ ಹೇಳುತ್ತಾರೆ.
ನಿಮ್ಮ ಸ್ವಂತ ದೇಹವನ್ನು ಅರ್ಥ ಮಾಡಿಕೊಂಡು ನಂತರ ನಿಮ್ಮ ಸಂಗಾತಿಯ ದೇಹವನ್ನು ಅರ್ಥ ಮಾಡಿಕೊಳ್ಳಿ, ಎಂದು ಇವರು ಹೇಳುತ್ತಾರೆ. ಒಂದು ಸಮೀಕ್ಷೆಯ ಪ್ರಕಾರ, ಜನರು ತಮಗಿರುವ ದುಃಖದಿಂದ ಮತ್ತು ಆಕರ್ಷಿತರಾಗದ ಕಾರಣಲೈಂಗಿಕವಾಗಿ ಆಸಕ್ತಿಯನ್ನುಕಳೆದುಕೊಳ್ಳುತ್ತಾರೆ. ಈ ಆಸಕ್ತಿಯನ್ನು ಮತ್ತೆ ಪಡೆಯಲು ನೀವು ನಿಮ್ಮ ದೇಹಕ್ಕೆ ಹೊಸ ಅಭ್ಯಾಸಗಳನ್ನು ಮಾಡಿಸಿ.
2. ತಾಜಾ ಅನುಭವದೊಂದಿಗೆ ಡೋಪಮೈನ್ ಅನ್ನು ಮರುಪಡೆಯಿರಿ…
“ಹೊಸ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ನಿಮ್ಮ ಮಧ್ಯೆ ಇರುವಂತಹ ಬಾಂಧವ್ಯ ಮತ್ತು ಆತ್ಮೀಯತೆ ಹೆಚ್ಚಾಗುತ್ತದೆ. ನಿಮ್ಮನ್ನು ಹೆದರಿಸುವ ಅಥವಾ ಪ್ರಚೋದಿಸುವಂತಹ ಚಟುವಟಿಕೆಯನ್ನು ಮಾಡಿ,” ಎಂದು ಲೈಂಗಿಕ ಶಿಕ್ಷಕಿ ಸನ್ನಿ ಮೆಗಾಟ್ರಾನ್ ಸಲಹೆ ನೀಡುತ್ತಾರೆ.
ನಿಮ್ಮಮೆದುಳಿನಲ್ಲಿರುವ ಡೋಪಮೈನ್ ಮತ್ತು ಇತರ ರಾಸಾಯನಿಕಗಳು ದೈಹಿಕ ಆಕರ್ಷಣೆ ಮತ್ತು ಪ್ರಣಯದ ಉತ್ಸಾಹಕ್ಕೆ ನೇರವಾಗಿ ಸಂಬಂಧ ಹೊಂದಿವೆ ಎಂದು ತಜ್ಞರು ಹೇಳುತ್ತಾರೆ. “ನೀವು ಡೋಪಮೈನ್ ಅನ್ನು ಮರುಜಾಗ್ರತೆ ಗೊಳಿಸಿದರೆ ಮತ್ತೆ ನಿಮ್ಮ ಹನಿಮೂನ್ ಹಂತದಲ್ಲಿದ್ದಂತಹ ಭಾವನೆ ಪಡೆಯಬಹುದು” ಎಂದು ತಜ್ಞರು ಹೇಳುತ್ತಾರೆ.
3. ಸೆಕ್ಸ್ ಬಗ್ಗೆ ನಿಮಗಿರುವ ಅನಿಸಿಕೆಗಳನ್ನು ಪರಸ್ಪರ ಪರೀಕ್ಷಿಸಿಕೊಳ್ಳಲು ಸಮಯ ನಿಗದಿಪಡಿಸಿಕೊಳ್ಳಿ…
“ನೀವು ಲೈಂಗಿಕ ಜೀವನದ ಬಗ್ಗೆ ಏನು ಇಷ್ಟಪಡುತ್ತೀರಿ ಮತ್ತು ಏನನ್ನು ಇಷ್ಟಪಡುವುದಿಲ್ಲ. ಈ ಎಲ್ಲಾ ವಿಚಾರಗಳ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಚರ್ಚಿಸಲು ಒಂದು ರಾತ್ರಿ ಸಮಯ ನಿಗದಿಪಡಿಸಿಕೊಳ್ಳಿ” ಎಂದು ತಜ್ಞರು ತಿಳಿಸುತ್ತಾರೆ”. ನೀವು ನಿಮ್ಮ ಸಂಗಾತಿಗೆ ತುಂಬಾ ಸೆಕ್ಸಿಯಾಗಿ ಕಾಣಿಸಲು ಒತ್ತಡ ಹೇರಬೇಡಿ,” ಎಂದು ಸನ್ನಿ ಹೇಳುತ್ತಾರೆ.
2016ರ ಆನ್‌ಲೈನ್ ಸಂಶೋಧನಾ ಸಮೀಕ್ಷೆಯನ್ನು 18 ರಿಂದ 25 ವಯಸ್ಸಿನ 1,200 ಪುರುಷರು ಮತ್ತು ಮಹಿಳೆಯರ ಮೇಲೆ ನಡೆಸಲಾಗಿದ್ದು, ಪುರುಷರು ಮತ್ತು ಮಹಿಳೆಯರು ವಿಭಿನ್ನ ಲೈಂಗಿಕ ನಿರೀಕ್ಷೆಗಳನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಈ ನಿರೀಕ್ಷೆಗಳು ರಾತ್ರೋರಾತ್ರಿ ಬದಲಾಗುವುದಿಲ್ಲ, ಆದ್ದರಿಂದ ದಂಪತಿ ಪರಸ್ಪರ ಇಷ್ಟ ಕಷ್ಟಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.
4. ಸೆಕ್ಸ್ ಕ್ಲಾಸ್ ತೆಗೆದುಕೊಳ್ಳಿ ಮತ್ತು ಅಭ್ಯಾಸ ಮಾಡಲು ವಾರಾಂತ್ಯವನ್ನು ಬಳಸಿ…
“ದಂಪತಿ ಸೆಕ್ಸ್ ಕ್ಲಾಸ್ ತೆಗೆದುಕೊಳ್ಳುವುದರಿಂದ ಲೈಂಗಿಕ ಕ್ರಿಯೆಯ ಹೊಸ ಮಾರ್ಗಗಳನ್ನು ತಿಳಿದುಕೊಳ್ಳಬಹುದು” ಎಂದು ಮೆಗಾಟ್ರಾನ್ ಹೇಳುತ್ತಾರೆ.
ಈ ರೀತಿಯ ಕ್ಲಾಸ್ ತೆಗೆದುಕೊಳ್ಳುವುದರಿಂದ ದಂಪತಿ ಹೊಸ ಲೈಂಗಿಕ ತಂತ್ರಗಳನ್ನು ಅರಿತುಕೊಳ್ಳಬಹುದಾಗಿದೆ. ಈ ರೀತಿಯ ಕ್ಲಾಸ್ನಲ್ಲಿ ಹೇಳಿದಂತಹ ತಂತ್ರಗಳನ್ನು ಅಭ್ಯಾಸ ಮಾಡಲು ನಿಮ್ಮ ವಾರಾಂತ್ಯದ ರಜೆ ಬಳಸಿಕೊಳ್ಳಿ ಎಂದು ಇವರು ಹೇಳುತ್ತಾರೆ.
5. ಪ್ರಚೋದನಕಾರಿ ವಿಡಿಯೋಗಳನ್ನು ನೋಡಿ ಪರಸ್ಪರ ಹತ್ತಿರವಾಗಿ…
ಪರಸ್ಪರರ ಲೈಂಗಿಕ ಪ್ರಚೋದಕವನ್ನು ತಿಳಿದುಕೊಳ್ಳಿರಿ ಮತ್ತು ಮಲಗುವುದಕ್ಕೂ ಮುಂಚಿತವಾಗಿ ಲೈಂಗಿಕ ಕ್ರಿಯೆಗೆ ಪ್ರಚೋದಿಸುವಂತಹ ವಿಡಿಯೋಗಳನ್ನು ಇಬ್ಬರು ಕುಳಿತು ನೋಡುವುದರಿಂದಲೂ ಲೈಂಗಿಕಾಸಕ್ತಿ ಬರಬಹುದು” ಎಂದು ಮೂನ್ ಹೇಳುತ್ತಾರೆ.
6.ಒತ್ತಡ ಹೊರಹಾಕಲು ಒಬ್ಬರಿಗೊಬ್ಬರು ಮಾತನಾಡಿಕೊಳ್ಳಿ…
ಪರಸ್ಪರರು ಮಾತನಾಡಿಕೊಳ್ಳದೆ ಇರುವುದರಿಂದಲೂ ಒತ್ತಡ ಹೆಚ್ಚಾಗಿ ಅದರ ಪರಿಣಾಮ ಲೈಂಗಿಕ ಜೀವನದ ಮೇಲೆ ಬೀರುತ್ತದೆ. ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ಯಾವ ದಂಪತಿ ಹೆಚ್ಚಾಗಿ ಮಾತನಾಡುತ್ತಾರೆಯೋ ಅಂತಹವರು ಪರಸ್ಪರ ಮಾತನಾಡದೆ ಇರುವಂತಹ ದಂಪತಿಗಿಂತ 10 ಪಟ್ಟು ಹೆಚ್ಚು ಸಂತೋಷವಾಗಿರುವುದು ಕಂಡು ಬಂದಿದೆ ಎಂದು ಮೂನ್ ಹೇಳುತ್ತಾರೆ.
Comments are closed.