(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಅಗ್ನಿಪಥ ಯೋಜನೆಯ ಆಕಾಂಕ್ಷಿ ಅಭ್ಯರ್ಥಿಗಳ ನೇಮಕಾತಿ ರ್ಯಾಲಿಗೆ ಕುಂದಾಪುರ ಗಾಂಧಿಮೈದಾನದಲ್ಲಿ ಕೆಲ ತಿಂಗಳಿನಿಂದ ತರಬೇತಿ ನಡೆಯುತ್ತಿದ್ದು ಬುಧವಾರ ಬೆಳಿಗ್ಗೆ ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು ಭೇಟಿ ನೀಡಿದರು.
ಮಾಜಿ ಸೈನಿಕ ರವಿಚಂದ್ರ ಶೆಟ್ಟಿ ತೆಕ್ಕಟ್ಟೆಯವರು ನೇಮಕಾತಿ ರ್ಯಾಲಿಗೆ ತೆರಳುವ ಅಭ್ಯರ್ಥಿಗಳಿಗೆ ಬೆಳಿಗ್ಗೆ ಕುಂದಾಪುರ ಗಾಂಧಿಮೈದಾನದಲ್ಲಿ ಹಾಗೂ ಸಂಜೆ ಕೋಟದಲ್ಲಿ ಉಚಿತ ತರಬೇತಿ ನೀಡುತ್ತಿದ್ದು ನಿವೃತ್ತ ಸೈನಿಕರು ಹಾಗೂ ಕುಂದಾಪುರ ಉಪವಿಭಾಗಾಧಿಕಾರಿ ಯಾದ ಕೆ. ರಾಜು ಅವರು ಗಾಂಧಿಮೈದಾನಕ್ಕೆ ಮುಂಜಾನೆ ಭೇಟಿ ನೀಡಿ 35 ಕ್ಕೂ ಅಧಿಕ ಅಭ್ಯರ್ಥಿಗಳ ಜೊತೆ ಮಾತನಾಡಿದರು.
ದೈಹಿಕ ಸಾಮರ್ಥ್ಯ ಚಟುವಟಿಕೆ ವೀಕ್ಷಿಸಿ, ಅಭ್ಯರ್ಥಿಗಳ ಓಟವನ್ನು ಗಮನಿಸಿದ ಅವರು ಅರ್ಹ ಸಲಹೆ ಸೂಚನೆ ನೀಡಿದರು. ಅಲ್ಲದೆ ಅಭ್ಯರ್ಥಿಗಳು ಏಕಾಗೃತೆವಹಿಸಬೇಕು, ನಿಯಮಿತವಾಗಿ ಹಿತಮಿತ ಆಹಾರ ಸೇವಿಸಬೇಕು. ಯಾವುದೇ ಕಾರಣಕ್ಕೂ ದೃತಿಗೆಡುವ ಅಗತ್ಯವಿಲ್ಲ ಎಂದು ನೈತಿಕ ಧೈರ್ಯ ತುಂಬಿ ಅಭ್ಯರ್ಥಿಗಳನ್ನು ಹುರಿದುಂಬಿಸಿದರು.
ಈ ವೇಳೆ ಯೋಧ ಸುಧಾಕರ್ ಹಾಗೂ ತೆಕ್ಕಟ್ಟೆ ಫ್ರೆಂಡ್ಸ್ ನ ಪ್ರಕಾಶ್ ಶೆಟ್ಟಿ ತೆಕ್ಕಟ್ಟೆ, ಸದಸ್ಯರು ಉಪಸ್ಥಿತರಿದ್ದರು.
Comments are closed.