ಕರಾವಳಿ

ನೀಟ್ ಸೂಪರ್ ಸ್ಪೆಷಾಲಿಟಿ ಪರೀಕ್ಷೆಯಲ್ಲಿ ಕುಂದಾಪುರ ಮೂಲದ ಡಾ.ಆತೀಶ್ ಶೆಟ್ಟಿ ದೇಶಕ್ಕೆ ಪ್ರಥಮ

Pinterest LinkedIn Tumblr

ಕುಂದಾಪುರ: ಗುರುವಾರ ಪ್ರಕಟವಾದ ಅಖಿಲ ಭಾರತ ವೈದ್ಯಕೀಯ ವಿಶೇಷ ಅಧ್ಯಯನ (ಸೂಪರ್ ಸ್ಪೆಷಾಲಿಟಿ) ನೀಟ್ ಎಮ್.ಸಿ.ಎಚ್ ಪ್ರವೇಶ ಪರೀಕ್ಷೆಯಲ್ಲಿ ಕುಂದಾಪುರದ ಡಾ.ಆತೀಶ್ ಬಿ ಶೆಟ್ಟಿ ದೇಶದಲ್ಲೇ ಪ್ರಥಮ‌ ಸ್ಥಾನ‌ ಪಡೆದುಕೊಂಡಿದ್ದಾರೆ.

ಕುಂದಾಪುರದ ಚಿನ್ಮಯಿ ಆಸ್ಪತ್ರೆಯ ಹಿರಿಯ ಶಸ್ತೃ ಚಿಕಿತ್ಸಕ ತಜ್ಞ ಡಾ. ಬಾಲಕೃಷ್ಣ ಶೆಟ್ಟಿ ಹಾಗೂ ಕಂದಾವರ ಸುನೀತಾ ಶೆಟ್ಟಿ ದಂಪತಿಗಳ ಪುತ್ರರಾಗಿರುವ ಇವರು ಸಿಇಟಿ ಪ್ರವೇಶ ಪರೀಕ್ಷೆಯಲ್ಲಿ 13ನೇ ಸ್ಥಾನ ಪಡೆದುಕೊಂಡಿದ್ದರು.

ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸದ ಬಳಿಕ ಅವರು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪದವಿ ಪಡೆದಿದ್ದರು. ಬೆಂಗಳೂರಿನ ಬಿ.ಎಮ್.ಸಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿಯನ್ನು ಪಡೆದು, ಆಗಸ್ಟ್ ನಲ್ಲಿ ನಡೆದ ನೀಟ್ ಪರೀಕ್ಷೆಯನ್ನು ಬರೆದಿದ್ದರು.

Comments are closed.