ಕರಾವಳಿ

ವಕ್ವಾಡಿ ಫ್ರೆಂಡ್ಸ್ ವಕ್ವಾಡಿಯ ವಾರ್ಷಿಕ ಸಂಭ್ರಮಾಚರಣೆ ‘ಸ್ಪಂದನ-2023’; ಸಾಧಕರಿಗೆ ಅಭಿನಂದನೆ

Pinterest LinkedIn Tumblr

ಕುಂದಾಪುರ: ಗ್ರಾಮೀಣ ಪ್ರದೇಶದಲ್ಲಿ ಸಮಾನ ಮನಸ್ಕಾರ ತಂಡ ಒಂದು ಜನ ಮೆಚ್ಚುಗೆಯ ಕಾರ್ಯಕ್ರಮ ಮಾಡುತ್ತಿರುವುದು ಪ್ರಶಂಸನೀಯವಾಗಿದೆ. ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ ಎಲ್ಲ ಕ್ಷೇತ್ರದ ಸಾಧಕರನ್ನು ಗುರುತಿಸುವುದು ಕಷ್ಟದ ಕೆಲಸ ಈ ರೀತಿಯ ಒಂದು ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವ ಈ ಸಂಸ್ಥೆ ಇನ್ನೂ ಒಳ್ಳೆ ಕೆಲಸಗಳು ಈ ಸಂಸ್ಥೆಯಿಂದ ನಡೆಯಲಿ. ಪ್ರತಿಯೊಂದು ಮನೆಯಲ್ಲಿಯೂ ಒಬ್ಬ ಸಮಾನಮನಸ್ಕರು ಈ ತಂಡವನ್ನು ಸೇರಿಕೊಳ್ಳಲಿ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು.

ವಕ್ವಾಡಿ ಫ್ರೆಂಡ್ಸ್ ವಕ್ವಾಡಿ ಸಂಭ್ರಮಾಚರಣೆಯ ಅಂಗವಾಗಿ ವಕ್ವಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಭಾನುವಾರ ರಾತ್ರಿ ನಡೆದ ಸ್ಪಂದನ-2023 ಕಾರ್ಯಕ್ರಮದಲ್ಲಿ ವಕ್ವಾಡಿ ಪರಿಸರದ 14 ಮಂದಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು‌.

ನಿಟ್ಟೆಯ ಪ್ರೊಫೆಸರ್ ಸುರೇಂದ್ರ ಶೆಟ್ಟಿ, ಅಬಕಾರಿ ಇಲಾಖೆಯ ಸಬ್ ಇನ್ಸ್‌ಪೆಕ್ಟರ್ ರಾಘವೇಂದ್ರ ದೇವಾಡಿಗ, ದಿಕ್ಸೂಚಿ ಭಾಷಣಕರರಾಗಿ ಆಗಮಿಸಿದ ರಾಜ್ಯ ಪ್ರಶಸ್ತಿ ಪುರಸ್ಕೃತ ನರೇಂದ್ರ ಕುಮಾರ್ ಕೋಟ ಉಪಸ್ಥಿತರಿದ್ದರು.

ವಕ್ವಾಡಿ ಫ್ರೆಂಡ್ಸ್ ವಕ್ವಾಡಿ ಅಧ್ಯಕ್ಷ ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಗಿರೀಶ್ ಐತಾಳ್ ಸ್ವಾಗತಿಸಿ, ಕೀರ್ತಿ ಶೆಟ್ಟಿ ಪ್ರಸ್ತಾವನೆಗೈದರು. ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಕುಮಾರ್ ವಂದಿಸಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ಚಂಡೆ ಬಳಗ ಮತ್ತು ಪರಿಸರದ ಸ್ಥಳೀಯ ಪುಟಾಣಿಗಳ ವಿನೋದಾವಳಿ ಪ್ರಮುಖ ಆಕರ್ಷಣೆಯಾಗಿತ್ತು.
ನಂತರ ಓಂಕಾರ ಫ್ರೆಂಡ್ಸ್ ಕನ್ನುಕ್ಕೆರೆ ಅವರಿಂದ ನಾಟಕ ಪ್ರದರ್ಶನಗೊಂಡಿತು.

Comments are closed.