ಕರಾವಳಿ

ದ್ವಿತೀಯ ಪಿಯು ಫಲಿತಾಂಶ: ಉಡುಪಿ ಜಿಲ್ಲೆಯ ಕೊರಗ ಸಮುದಾಯದ ವಿದ್ಯಾರ್ಥಿನಿಯರಿಬ್ಬರ ಸಾಧನೆ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಶುಕ್ರವಾರ ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಉಡುಪಿಗೆ ದ್ವಿತೀಯ ಸ್ಥಾನ ಲಭಿಸಿದ್ದು ಉಡುಪಿ ಜಿಲ್ಲೆಯ ವಿದ್ಯಾರ್ಥಿನಿಯರಿಬ್ಬರು 600ಕ್ಕೆ 511 ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

ಕುಂದಾಪುರ ಜ್ಯೂನಿಯರ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ, ಪಡುಕೋಣೆ ನಿವಾಸಿ ಸ್ನೇಹಾ 511 ಅಂಕ ಪಡೆದಿದ್ದು ಕನ್ನಡದಲ್ಲಿ 93, ಇಂಗ್ಲೀಷ್‌ನಲ್ಲಿ 75, ಎಕನಾಮಿಕ್ಸ್ 75, ಬಿಸಿನೆಸ್ ಸ್ಟಡೀಸ್ 89, ಅಕೌಂಟೆನ್ಸಿ 85, ಕಂಪ್ಯೂಟರ್ ಸೈನ್ಸ್‌ನಲ್ಲಿ 64 ಅಂಕ ಪಡೆದಿದ್ದಾರೆ. ಸ್ನೇಹಾ ಪಡುಕೋಣೆ ನಿವಾಸಿ ದಿವಂಗತ ಸುಧೀರ್, ಹಾಗೂ ಕೂಲಿ ಮಾಡುವ ಮಮತಾ ಅವರ ಇಬ್ಬರು ಪುತ್ರಿಯರ ಪೈಕಿ ಕಿರಿಯವಳು. ಮುಂದೆ ಬ್ಯಾಂಕಿಗ್ ಕ್ಷೇತ್ರದಲ್ಲಿ ಮುಂದುವರಿಯುವ ಇಂಗಿತ ಸ್ನೇಹಳದ್ದು.

ಬಾರ್ಕೂರು ನೇಶನಲ್ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ, ಬಾರ್ಕೂರು ನಿವಾಸಿ ಭಾಗ್ಯಶ್ರೀ 511 ಅಂಕ ಪಡೆದಿದ್ದು ಕನ್ನಡದಲ್ಲಿ 97, ಇಂಗ್ಲೀಷ್ 60, ಹಿಸ್ಟರಿ 92, ಎಕನಾಮಿಕ್ಸ್ 77, ಸೋಶಿಯಾಲಜಿ 92, ಪೊಲಿಟಿಕಲ್ ಸೈನ್ಸ್‌ನಲ್ಲಿ 93 ಅಂಕ ಪಡೆದಿದ್ದಾರೆ. ಭಾಗ್ಯಶ್ರೀ ತಂದೆ ರಾಜು ಪೌರಕಾರ್ಮಿಕ. ತಾಯಿ ಸುಗುಣಾ ಗೃಹಿಣಿ. ಮುಂದೆ ಬಿಎ ಮಾಡುವ ಕನಸು ಭಾಗ್ಯಳದ್ದು.

Comments are closed.