ಕುಂದಾಪುರ: ರಾಜ್ಯ ಮಟ್ಟದ 18ನೇ ಅಭಾಕಸ್ ಮತ್ತು ವೇದಿಕ್ ಮಾಥ್ಸ್ ಸ್ಪರ್ಧೆಯಲ್ಲಿ ಕುಂದಾಪುರ ಸೆಂಟರ್ ನ ತ್ರಿಷಾ ಆರ್. ದೇವಾಡಿಗ ಮೊದಲ ಸುತ್ತಿನಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಕ್ಟೋಬರ್ 29ರಂದು ಐಡಿಯಲ್ ಪ್ಲೇ ಅಭಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಹಾಸನದಲ್ಲಿ ನಡೆದ ಸ್ಪರ್ಧೆಯಲ್ಲಿ ತ್ರಿಷಾ ಸಾಧನೆ ಮಾಡಿದ್ದಾಳೆ. ರಾಜ್ಯ ವಿವಿಧ ಪ್ರದೇಶದಿಂದ ಸುಮಾರು 1600 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತ್ರಿಷಾ ಕುಂದಾಪುರದ ಐಡಿಯಲ್ ಪ್ಲೇ ಅಭಾಕಸ್ ಸೆಂಟರ್ ಮುಖ್ಯಸ್ಥ ಪ್ರಸನ್ನ ಕೆ.ಬಿ ಹಾಗೂ ಶಿಕ್ಷಕಿ ಮಹಾಲಕ್ಷ್ಮೀ ಮತ್ತು ದೀಪ ಇವರಿಂದ ತರಭೇತಿ ಪಡೆಯುತ್ತಿದ್ದಾರೆ. ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ ದ ನಾಲ್ಕನೆ ತರಗತಿ ವಿದ್ಯಾರ್ಥಿಯಾಗಿರುವ ತ್ರಿಷಾ, ಕುಂದಾಪುರ ಪೊಲೀಸ್ ಉಪಾಧೀಕ್ಷಕರ ಕಚೇರಿಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿರುವ ರಾಘವೇಂದ್ರ ದೇವಾಡಿಗ ಹಾಗೂ ಸುಜಯಲಕ್ಷ್ಮೀ ದಂಪತಿಯ ಪುತ್ರಿ.
Comments are closed.