ಕರಾವಳಿ

ಸ್ಕಾಲರ್‌ಶಿಪ್‌ ಹಣದಲ್ಲಿ ಹುಟ್ಟುಹಬ್ಬದಂದು ಅಂಪಾರು ‘ವಾಗ್ಜ್ಯೋತಿ’ ಶಾಲೆಗೆ ಉಪಕರಣ ಕೊಡುಗೆ ಕೊಟ್ಟ ವಿದ್ಯಾರ್ಥಿನಿ

Pinterest LinkedIn Tumblr

ಕುಂದಾಪುರ: ತಾನು ಕಾಲೇಜಿನಲ್ಲಿ ಕಲಿಯುವಾಗ ಗಳಿಸಿದ ಸ್ಕಾಲರ್‌ಶಿಪ್‌ ಹಣವನ್ನು ಉಳಿಕೆ ಮಾಡಿ ತನ್ನ ಹುಟ್ಟುಹಬ್ಬದಂದು ಅಂಪಾರು ಮೂಡುಬಗೆಯಲ್ಲಿರುವ ‘ವಾಗ್ಜ್ಯೋತಿ’ ಶ್ರವಣದೋಶವುಳ್ಳ ಮಕ್ಕಳ ವಸತಿ ಶಾಲೆಗೆ ಉಪಕರಣವನ್ನು ವಿದ್ಯಾರ್ಥಿನಿಯೊಬ್ಬರು ಕೊಡುಗೆಯಾಗಿ ನೀಡಿ ಮಾದರಿಯಾಗಿದ್ದಾರೆ.

ಇಂಜಿನಿಯರ್ ಆಗಿರುವ ಪ್ರಶಾಂತ್ ಮೊಳಹಳ್ಳಿ, ವೈದ್ಯೆ ಡಾ. ರಾಜೇಶ್ವರಿ ಅವರ ಪುತ್ರಿ ರೋಶನಿ ಎಂ.ಪಿ. ಆ.29 ರಂದು ಜನ್ಮದಿನದ ಪ್ರಯುಕ್ತ ವಾಗ್ಜ್ಯೋತಿ ವಸತಿ ಶಾಲೆಗೆ 50 ಸಾವಿರ ಮೌಲ್ಯದ ಸಮೂಹ ಶ್ರವಣ ಯಂತ್ರ (ಗ್ರೂಫ್ ಹಿಯರಿಂಗ್ ಏಯ್ಡ್) ಎಂಬ ಸಾಧನವನ್ನು ಕೊಡುಗೆಯಾಗಿ ನೀಡಿದ್ದಾರೆ. ಇವರು ಉಡುಪಿ ಜ್ಞಾನಸುಧಾ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು ಈ ಬಾರಿ ಪಿಸಿಎಂಬಿ ವಿಭಾಗದಲ್ಲಿ ರಾಜ್ಯಕ್ಕೆ 6ನೇ ರ್ಯಾಂಕ್ ಪಡೆದಿದ್ದರು.

ನಿವೃತ್ತ ಶಿಕ್ಷಕ ಸುಬ್ಬಣ್ಣ ಶೆಟ್ಟಿ ಉಪಕರಣ ಉದ್ಘಾಟಿಸಿ ಶುಭಹಾರೈಸಿದರು. ಶಾಲೆಯ ಮುಖ್ಯೋಪಾಧ್ಯಾಯ ರವೀಂದ್ರ ಎಚ್. ಸ್ವೀಕರಿಸಿದರು. ವಿದ್ಯಾರ್ಥಿನಿ ಪೋಷಕರಾದ ಪ್ರಶಾಂತ್ ಮೊಳಹಳ್ಳಿ, ಡಾ. ರಾಜೇಶ್ವರಿ, ನಿರ್ಮಲಾ, ಮೊಳಹಳ್ಳಿ- ಹುಣ್ಸೆಮಕ್ಕಿಯ ಶಿವಶಾಂತಿ ಲಯನ್ಸ್ ಕ್ಲಬ್ ಅಧ್ಯಕ್ಷ ಯು.ಎಸ್. ಮೋಹನದಾಸ್ ಶೆಟ್ಟಿ, ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ, ಕೋಶಾಧಿಕಾರಿ ದಯಾನಂದ ಎಂ., ಸದಸ್ಯರಾದ ಎಸ್. ರತ್ನಾಕರ ಶೆಟ್ಟಿ, ಅನಿಲಕುಮಾರ್ ಶೆಟ್ಟಿ, ಕರುಣಾಕರ ಶೆಟ್ಟಿ, ಶಂಭುಶಂಕರ್ ಶೆಟ್ಟಿ ಮೊಳಹಳ್ಳಿ, ಸ್ಥಳೀಯರಾದ ವಸಂತಿ ಎಂ. ಶೆಟ್ಟಿ ಮೊಳಹಳ್ಳಿ, ವಾಗ್ಜ್ಯೋತಿ ಶಾಲೆಯ ಆಡಳಿತಾಧಿಕಾರಿ ತ್ರಿವೇಣಿ, ಶಿಕ್ಷಕಿಯರಾದ ಸತ್ಯಪ್ರಸನ್ನ, ರಾಜೇಶ್ವರಿ, ಪ್ರಮಿಳಾ, ರೆಜಿನಾ, ಶೈಲಾ ನಾಯಕ್, ಶ್ರೀಕಲಾ, ವಾರ್ಡನ್ ರಾಧಿಕಾ ಭಂಡಾರಿ, ಸಿಬ್ಬಂದಿಗಳಾದ ಮಂಚಲಾ, ಸವಿತಾ ಇದ್ದರು.

Comments are closed.