ಕುಂದಾಪುರ: ಮನುಷ್ಯರಲ್ಲಿರುವಂತೆ ರಕ್ತಕ್ಕೆ ಯಾವುದೇ ಜಾತಿ ಧರ್ಮದ ಬೇದ ಭಾವವಿರುವುದಿಲ್ಲ. ರಕ್ತದಾನ ಮಹಾದಾನವಾಗಿದ್ದರೂ ಕೂಡ ಪ್ರಸ್ತುತ ದಿನದಲ್ಲಿ ಮನ್ಯಷ್ಯನ ಅಂಗಾಂಗವೆಲ್ಲವೂ ದಾನ ಮಾಡುತ್ತಿರುವ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಇದು ಕೂಡ ನಿಜಕ್ಕೂ ಮಾದರಿ ಕಾರ್ಯ ರಕ್ತವಾಗಲಿ ಅಥಾವ ದೇಹದ ಯಾವುದೇ ಅಂಗಾಂಗವಾಗಲಿ ದಾನ ಮಾಡುವುದರಿಂದ ಇನ್ನೊಬ್ಬರಿಗೆ ಮರುಜೀವ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಕಳೆದ 3 ವರ್ಷಗಳಿಂದ ವಕ್ವಾಡಿ ಫ್ರೆಂಡ್ಸ್ ನಡೆಸುತ್ತಿರುವ ರಕ್ತದಾನ ಕಾರ್ಯಕ್ರಮ ಶ್ಲಾಘನೀಯವಾದದ್ದು ಎಂದು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.
ವಕ್ವಾಡಿ ಫ್ರೆಂಡ್ಸ್ ವಕ್ವಾಡಿ ಇವರ ಆಶ್ರಯದಲ್ಲಿ ಹುತಾತ್ಮ ವೀರ ಯೋಧ ಅನೂಪ್ ಪೂಜಾರಿಯವರ ಸ್ಮರಣಾರ್ಥವಾಗಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ ಹಾಗೂ ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಸಹಯೋಗದೊಂದಿಗೆ ರವಿವಾರ ವಕ್ವಾಡಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ ಸ್ಪಂದನ-2025 ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಕ್ವಾಡಿ ಫ್ರೆಂಡ್ಸ್‌ನ ಅಧ್ಯಕ್ಷ ಕಿರಣ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಸತೀಶ್ಚಂದ್ರ ಕಾಳಾವರ್ಕರ್ ಗ್ರಾಮದ ಸಾಧಕರನ್ನು ಸನ್ಮಾನಿಸಿ ಗೌರವಿಸಿದರು. ಉದ್ಯಮಿಗಳಾದ ಸಂಪತ್ ಕುಮಾರ್ ಶೆಟ್ಟಿ ಶಾನಾಡಿ, ಗಜೇಂದ್ರ ಶೆಟ್ಟಿ ವಕ್ವಾಡಿ, ಅಭಯ ಚಾರಿಟೇಬಲ್ ಟ್ರಸ್ಟ್ ಪ್ರವರ್ತಕ ಸತೀಶ್ ಸಾಲಿಯಾನ್, ವಕ್ವಾಡಿ ಫ್ರೆಂಡ್ಸ್ ಮಹಿಳಾ ವಿಭಾಗದ ಅಧ್ಯಕ್ಷೆ ವನಿತಾ ಆಚಾರ್ಯ, ಕೆಎಂಸಿ ಮಣಿಪಾಲ ರಕ್ತನಿಧಿ ವಿಭಾಗದ ವೈದ್ಯರ ತಂಡ ಉಪಸ್ಥಿತರಿದ್ದರು.
ಈ ಸಂದರ್ಭ ಹುತಾತ್ಮ ವೀರ ಯೋಧ ಅನೂಪ್ ಪೂಜಾರಿಯವರ ಸಹೋದರ ಶಿವರಾಮ ಅಮೀನ್, ಗ್ರಾಮದ ಸಾಧಕರಾದ ಸದಾನಂದ ಶೆಟ್ಟಿ, ಡಾ.ರಾಮಮೂರ್ತಿ, ಲಾಸ್ಯ ಶೆಟ್ಟಿ ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಹುತಾತ್ಮ ವೀರ ಯೋಧ ಅನೂಪ್ ಪೂಜಾರಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. 100ಕ್ಕೂ ಅಧಿಕ ಯೂನಿಟ್ ರಕ್ತ ಸಂಗ್ರಹಣೆ ನಡೆಯಿತು.
ಸಂಸ್ಥೆಯ ಮುಖ್ಯಸ್ಥ ಕೀರ್ತಿ ಶೆಟ್ಟಿ ವಕ್ವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿರಣ್ ಸ್ವಾಗತಿಸಿದರು. ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಕುಮಾರ್ ವಂದಿಸಿದರು.
Comments are closed.